ಶಾಲಾ ಮಕ್ಕಳು ಅಸುರಕ್ಷಿತ ಸಂದರ್ಭಗಳಲ್ಲಿ ಎಚ್ಚರ ವಹಿಸಬೇಕು -ಶಗುಫ್ತಾ ತಬ್ಸುಮ್
School children should be careful in unsafe situations - Shagufta Tabsum
ಕೊಪ್ಪಳ 11: ಪ್ರೌಢ ಶಾಲಾ ಮಕ್ಕಳು ಸುರಕ್ಷಿತ ಮತ್ತು ಅಸುರಕ್ಷಿತ ವಾತಾವರಣ ಸಂದರ್ಭಗಳನ್ನು ಗುರುತಿಸಿ ಎಚ್ಚರ ವಹಿಸಬೇಕು ಎಂದು ನೂತನ ಯುವ ನ್ಯಾಯವಾದಿ ಶಗುಫ್ತಾ ತಬ್ಸುಮ್ ಹುನಗುಂದ ಹೇಳಿದರು. ನಗರದ ದಿಡ್ಡಿಕೇರಾ ಬಡಾವಣೆಯ ಮೌಲಾನಾ ಆಝಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಕ್ಸೋ ಕಾನೂನು ಜಾಗೃತಿ ಕಾರ್ಯಕ್ರಮದಲ್ಲಿ ಮುಂದುವರೆದು ಮಾತನಾಡಿದ ಯುವ ವಕೀಲೆ ಶಗುಫ್ತಾ ತಬ್ಸುಮ್ ಸಂವಿಧಾನ ಪಯಣದ ಫೆಲೋಶಿಪ್ ನ ಫೆಲೋ ಆಗಿ ಆಯ್ಕೆಯಾಗಿದ್ದು. ಜೊತೆಗೆ ವಕೀಲವೃತ್ತಿಯನ್ನು ಮಾಡುತ್ತ ಸಮಾಜದ ತಟ್ಟ ತಳದಲ್ಲಿರುವ ಶೋಷಣೆಗೆ ಒಳಗಾಗುತ್ತಿರುವ ಮಹಿಳೆ ಮತ್ತು 18 ವರ್ಷದೊಳಗಿನ ಮಕ್ಕಳಿಗೆ ಸಂವಿಧಾನದ ಮೌಲ್ಯಗಳನ್ನು ಕಲಿಸುವ ಜೊತೆಗೆ ಕಾನೂನುಗಳ ಸಾಮಾನ್ಯ ಅರಿವನ್ನು ಹೆಚ್ಚಿಸುವ ಮುಖ್ಯ ಜವಾಬ್ದಾರಿ ಎಂದು ಮಹಿಳೆ ಮತ್ತು ಮಕ್ಕಳಿಗೆ ಕಾನೂನು ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇನೆ.
ಅಂತರ್ಜಾಲದ ಮೂಲಕ ಬಲಿಯಾಗುವುದನ್ನು ತಪ್ಪಿಸಿಕೊಳ್ಳಲು ಎಚ್ಚರಿಕೆಯಿಂದ ಇರಬೇಕು ಹಾಗೂ ತಪ್ಪು ಮಾಡಿದವರು ಆರೋಪಿಗಳೇ ವಿನಃ ಶೋಷಣೆಗೆ ಒಳಗಾದ ಮಕ್ಕಳಲ್ಲ.ಜೊತೆಗೆ ಅಹಿತಕರ ಘಟನೆಗಳು ನಡೆದರೆ ಅದನ್ನು ಸ್ವತಃ ಎದುರಿಸಲು ಆಗದೆ ಇದ್ದರೆ ಪಾಲಕರ,ಶಿಕ್ಷಕರ ಮತ್ತು ಕಾನೂನು ನೆರವನ್ನು ಪಡೆಯಬೇಕು ಎಂದು ಸಲಹೆ ನೀಡಿ ಬಳಿಕ ಮಕ್ಕಳಿಗೆ ಆಟ ಮತ್ತು ಇತರ ಚಟುವಟಿಕೆಗಳ ಮೂಲಕ ಮನವರಿಕೆ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಪ್ರಕಾಶ್ ಬಾಗಲಕೋಟೆ,ಸಮಾಜ ಸೇವಕ ಎಂ.ಕೆ. ಸಾಹೇಬ್.ಶಿಕ್ಷಕಿ ತರ್ನುಮ್ ಸೇರಿದಂತೆ ಕೊಪ್ಪಳ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಅತಿಥಿ ಸಹಾಯಕ ಪ್ರಾಧ್ಯಾಪಕ ಮೌಲಾ ಸಾಬ್ ಮುಂತಾದವರು ಉಪಸ್ಥಿತರಿದ್ದರು.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 