ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಸಮೀಕ್ಷೆ ಪ್ರಾರಂಭ
Scheduled Castes internal reservation survey begins
ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಸಮೀಕ್ಷೆ ಪ್ರಾರಂಭ
ಹಾವೇರಿ 08 :ಪರಿಶಿಷ್ಟ ಜಾತಿಗಳ ಎಲ್ಲಾ ಕುಟುಂಬಗಳ ನಿಖರ ಮಾಹಿತಿಗಾಗಿ ರಾಜ್ಯ ಸರ್ಕಾರ ಸಮೀಕ್ಷೆ ನಡೆಸಲು ಮುಂದಾಗುತ್ತಿದ್ದು,ಅಧಿಕಾರಿಗಳು ಸಮೀಕ್ಷೆಗೆ ಆಗಮಿಸಿದಾಗ ಮಾದಿಗ ಅಥವಾ ಮಾದರ ಎಂದು ನಮೋದಿಸಬೇಕಾಗಿದೆ ಎಂದು ಮಾದಿಗರ ಸಮಾಜದ ಮುಖಂಡರಾದ ಉಡಚಪ್ಪ ಮಾಳಗಿ ಹೇಳಿದರು. ಜಿಲ್ಲಾ ಪ್ರವಾಸಿ ಮಂದಿರದಲ್ಲಿ ಪರಿಶಿಷ್ಟ ಜಾತಿ ಸಮೀಕ್ಷೆಯ ಕುರಿತು ಚರ್ಚಿಸಲು ಕರೆಯಲಾದ ಜಿಲ್ಲಾ ಮಟ್ಟದ ಮಾದಿಗ ಸಮುದಾಯದ ಸಭೆಯಲ್ಲಿ ಅವರು ತಿಳಿಸಿದರು. ಒಳಮೀಸಲಾತಿ ಸಮೀಕ್ಷೆ ಏಪ್ರಿಲ್-06 ರಿಂದ ಪ್ರಾರಂಭವಾಗಿದ್ದು,ಜಿಲ್ಲೆಯ ಎಲ್ಲಾ ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೆ ಸಮೀಕ್ಷೆಯ ಅಧಿಕಾರಿಗಳು ಆಗಮಿಸಿದಾಗ ಪರಿಶಿಷ್ಟ ಜಾತಿಗಳ ಸಮೀಕ್ಷೆಗೆ ಸಹಕಾರ ನೀಡುವ ಕೆಲಸವಾಗಬೇಕು.ಪರಿಶಿಷ್ಟ ಜಾತಿಯ ಆದಿ ಜಾಂಬವ,ಆದಿ ಡ್ರಾವಿಡ,ಎಸ್‌ಸಿ,ಆದಿ ಕರ್ನಾಟಕ ಹಾಗೂ ಹರಿಜನ ಪದಗಳನ್ನು ಬರೆಸಿರುವ ಮಾದಿಗ ಹಾಗೂ ಮಾದರ ಸಮುದಾಯದವರು ಜಾತಿ ಕಾಲಂನಲ್ಲಿ ಮಾದಿಗ ಅಥವಾ ಮಾದರ ಎಂದು ಬರೆಯಿಸಬೇಕಾಗಿದೆ.ಈ ನಿಟ್ಟಿನಲ್ಲಿ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ.ಬೇರೆ ಪದಗಳನ್ನು ಬಳಸಿ ನಮಗೆ ಸಿಗಬಹುದಾಗ ಸೌಲಭ್ಯಗಳನ್ನು ಪಡೆಯುವ ಪ್ರಸಂಗಗಳು ಕಂಡು ಬರುತ್ತಿದೆ.ನಮ್ಮ ಸಮುದಾಯ ಸರ್ಕಾರಗಳ ಸೌಲಭ್ಯ ಪಡೆದು ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಬೇಕಾಗಿದೆ.ಸಮೀಕ್ಷೆಯ ಸಮಯದಲ್ಲಿ ಜಾಗೃತಿವಹಿಸುವುದು ಅಗತ್ಯವಾಗಿದ್ದು,ಏನಾದರೂ ತಮಗೆ ಹೆಚ್ಚಿನ ಮಾಹಿತಿ ಬೇಕಾದರೆ ಮಾದಿಗ ಸಮುದಾಯದ ಮುಖಂಡರುಗಳನ್ನು ಸಂಪರ್ಕಿಸಿ ಎಂದು ಉಡಚಪ್ಪ ಮಾಳಗಿ ಹೇಳಿದರು ಸಭೆಯ ಅಧ್ಯಕ್ಷತೆವಹಿಸಿದ ಮುಖಂಡರಾದ ಬಸವರಾಜ ಹೆಡಿಗೊಂಡ ಮಾತನಾಡಿ ಸರ್ಕಾರ ಒಳಮೀಸಲಾತಿಗೆ ಮಾಹಿತಿಯನ್ನು ಸಂಗ್ರಹಿಸುವ ನಿಟ್ಟನಲ್ಲಿ ಸಮೀಕ್ಷೆ ನಡೆಸುತ್ತಿದ್ದು,ನಮ್ಮ ಸಮುದಾಯ ಸಮೀಕ್ಷೆಗೆ ಸಹಕಾರ ನೀಡುವಂತಾಗಬೇಕು ಅವರು ಈ ಸಮೀಕ್ಷೆಯ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಎಸ್,ಜಿ.ಹೊನ್ನಪ್ಪನವರ(ವಕೀಲರು),ಏಳಕೊಟೆಪ್ಪ ಎಸ್ ಪಾಟೀಲ,ಅಶೋಕ ಮರೆಯಣ್ಣನವರ, ಸಂಜೀಯಗಾಂಧಿ ಸಂಜೀವಣ್ಣನವರ,ಮಾರುತಿ ಸೊಟ್ಟಪ್ಪನವರ, ಸುರೇಶ ಅಳ್ಳಳ್ಳಿ,ಭೀಮಣ್ಣ ಯಲ್ಲಾಪುರ,ಶಿವಣ್ಣ ನಾಗಮ್ಮನವರ,ಮಂಜು ವಡ್ಡರ,ಯಲ್ಲಪ್ಪ ಅಂದಲಗಿ,ನಾಗರಾಜ ಮಾಳಮ್ಮನವರ,ಹನಮಂತ ಹಲಗೇರಿ, ಮಂಜು ದಿಡಗೂರ,ಗುಡ್ಡಪ್ಪ ಬಣಕಾರ,ಸುನೀಲ ಕಡೂರ,ನೀಲಪ್ಪ ದೇವರಮನಿ,ನಿಂಗಪ್ಪ ಹರಿಜನ,ಫಕ್ಕಿರೇಶ ಪುರದ, ಮಾರುತಿ ಬಣಕಾರ,ಗುತ್ತೆಪ್ಪ ಆಲದಕಟ್ಟಿ,ನವೀನ ಸಿದ್ದಣ್ಣನವರ,ಜಗದೀಶ ಹರಿಜನ,ನಾಗರಾಜ ಬಣಕಾರ ಸೇರಿದಂತೆ ಮಾದಿಗರ ಸಮುದಾಯದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 