ಸವಿತಾ ಮಹರ್ಷಿ ಸಮಾಜದ ಹಕ್ಕಗಳ ರಕ್ಷಣಾ ಕಾಯ್ದೆ ಜಾರಿಗಾಗಿ ಕೃಷ್ಣಾ ಹಡಪದ ಒತ್ತಾಯ
ಗದಗ, 05 : ಗದಗ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸವಿತಾ ಮಹರ್ಷಿ ಜಯಂತಿಯನ್ನು ತಾಲೂಕ ಗ್ಯಾರಂಟಿ ಸಮಿತಿ ಸದಸ್ಯ ಕೃಷ್ಣಗೌಡ ಎಚ್ ಪಾಟೀಲ,ರಿಂದ ಸವಿತಾ ಮಹರ್ಷಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರು ಮಾತನಾಡಿ ಸವಿತಾ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರೆ್ಡ ಮಾಡಲು ಸೂಕ್ತ ಕ್ರಮಕೈಗೊಳ್ಳಬೇಕು ಮತ್ತು ಸವಿತಾ ಕ್ಷೌರಿಕ ಸಮಾಜವನ್ನು ಹೀನಾಯವಾಗಿ ಬಯ್ಯಲು ಉಪಯೋಗಿಸುತ್ತಿದ್ದ ’ಹಜಾಮ’ ಎಂಬ ಶಬ್ದವನ್ನು ಬಳಸಿದವರ ವಿರುದ್ಧ ಜಾಮೀನುರಹಿತ ಕ್ರಿಮಿನಲ್ ಮೊಕದ್ದಮೆ ಹೂಡಲು ಅನುಕೂಲವಾಗುವಂತೆ ಸವಿತಾ ಸಮಾಜ ಹಕ್ಕುಗಳ ರಕ್ಷಣಾ ಕಾಯ್ದೆಯನ್ನು ರೂಪಿಸಬೇಕೆಂದು ಗದಗ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಕಾಂಗ್ರೇಸ್ ಯುವ ನಾಯಕರಾದ ಕೃಷ್ಣಗೌಡ್ರ ಪಾಟೀಲರ ಮೂಲಕ ಹಿರಿಯರು ಹಾಗೂ ಕಾನೂನು ಸಚೀವರಾದ ಮಾನ್ಯ ಎಚ್ ಕೆ ಪಾಟೀಲಜಿ ಅವರಿಗೆ ಪ್ರತ್ಯೇಕವಾಗಿ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿ ಮಾತನಾಡಿದ ಅವರು ಈ ಕಾಯ್ದೆಯಲ್ಲಿ ಸವಿತಾ ಸಮಾಜಕ್ಕೆ ಸಿಕ್ಕಿರುವ ಸರಕಾರಿ ಸೌಲಭ್ಯಗಳನ್ನು ಬೇರೆ ಸಮಾಜದವರು ಉಪಯೋಗಿಸಿದಲ್ಲಿ ಶಿಕ್ಷೆಗೆ ಗುರಿಪಡಿಸಲು ಅವಕಾಶ ಇರಬೇಕು ಹಾಗೂ ಜಾತಿಯ ಆಧಾರದ ಮೇಲೆ ಮನೆಯನ್ನು /ಅಂಗಡಿಗಳನ್ನು ಭಾಡಿಗೆ ಕೊಡಲು ನಿರಾಕರಿಸಿದಲ್ಲಿ ಶಿಕ್ಷೆಗೆ ಗುರಿಪಡಿಸಲು ಅವಕಾಶವಿರಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ ಎಂದು ಹೇಳಿದರು
ಮುಖ್ಯಮಂತ್ರಿ ಬಿ.ಎಸ್. ಯಡಿಯೂರ್ಪನವರು ’ಹಜಾಮ್’ ಎಂಬ ಪದ ನಿಷೇಧ ಮಾಡಿ ಆದೇಶ ಹೊರಡಿಸಿದ್ದರೂ ಅದು ಕಾರ್ಯರೂಪಕ್ಕೆ ಬರಲಿಲ್ಲ. ಏಕೆದಂರೆ ಹಜಾಮ ಎಂಬ ಪದವನ್ನು ಎಲ್ಲೆಂದರಲ್ಲಿ ಕೆಲ ತಿಳುವಳಿಕೆ ಇಲ್ಲದ ಸಾರ್ವಜನಿಕರು ಈ ಪದವನ್ನು ಬಳಸಿದರೆ ಅವರಿಗೆ ತಿಳಿಹೇಳಿ ಬಳಸದಂತೆ ಹೇಳಬಹುದು ಆದರೆ ಎಲ್ಲಾ ತಿಳುವಳಿಕೆ ಇದ್ದು ಬೇಕೆಂತಲೆ ಮತ್ತು ತಮ್ಮ ಸ್ವಪ್ರಚಾರಕ್ಕಾಗಿಯೂ ಕೆಲ ಸಾರ್ವಜನಿಕರು ಮತ್ತು ಶಾಸಕರುಗಳು, ಸಚಿವರುಗಳು, ಅಧಿಕಾರಿಗಳು ಬಳಸುತ್ತಿದ್ದಾರೆ ಇನ್ನೂ ಮುಂದೆ ಹಂತವರು ಯಾರೇ ಆಗಲಿ ನಿಷೇಧಿತ ಪದ ಬಳಸಿದವರಿಗೆ ಕೂಡಲೇ ಶಿಕ್ಷೆ ನೀಡುವಂತಹ ಕಾಯ್ದೆಯನ್ನು ಜಾರಿಗೆ ತರಬೇಕೆಂದು ಕಾನೂನು ಸಚೀವರಲ್ಲಿ ಹಾಗೂ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿ ಒತ್ತಾಯಿಸಿ ಆಗ್ರಹಿಸಿದ್ದಾರೆ
ಕೃಷ್ಣಾ ಎಚ್.ಹಡಪದ ಜಿಲ್ಲಾಧ್ಯಕ್ಷರುಗದಗ ಜಿಲ್ಲಾ ಸವಿತಾ ಸಮಾಜ ಈ ಸಂದರ್ಭದಲ್ಲಿ ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಷರಸಾಬ ಬಬರ್ಜಿ, ತಾಲೂಕ ಗ್ಯಾರಂಟಿ ಸಮಿತಿ ಸದಸ್ಯ ಕೃಷ್ಣಗೌಡ ಎಚ್ ಪಾಟೀಲ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್. ಹೆಚ್ಚುವರಿ ಪೊಲೀಸ ವರಿಷ್ಟಾಧಿಕಾರಿ ಎಂ.ಬಿ.ಸಂಕದ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯ ಸ್ವಾಮಿ, ಖಜಾನೆ ಇಲಾಖೆ ಉಪನಿರ್ದೇಶಕ ಹರಿನಾಥ ಬಾಬು, ವಾರ್ತಾಧಿಕಾರಿ ವಸಂತ ಮದ್ದೂರ ಹಾಗೂ ಶ್ರೀ ಜಮಲಮ್ಮದೇವಿ ದೇವಸ್ಥಾನ ಟ್ರಸ್ಟ ಕಮಿಟಿ ಅಧ್ಯಕ್ಷರಾದ ವೇಂಕಟೇಶ ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಅಧ್ಯಕ್ಷರಾದ ಪರಶುರಾಮ ಕೋಟೆಕಲ್ಲ. ಉಪಾಧ್ಯಕ್ಷರಾದ ಜಂಬಣ್ಣ ಕಡಮೂರ, ಸಂತಸೇನಾ ಮಹರಾಜ ನಾಭೀಕ್ ಮರಾಠ ಸಮಾಜದ ಜಿಲ್ಲಾಧ್ಯಕ್ಷರಾದ ರಾಜು ಮಾನೆ ನಗರ ಅಧ್ಯಕ್ಷರಾದ ವಿಕಾಸ ಕ್ಷೀರಸಾಗರ ಬೆಟಗೇರಿ ಸವಿತಾ ಸಮಾಜದ ಅಧ್ಯಕ್ಷರಾದ ರಮೇಶ ರಾಂಪೂರ ಹಿರಿಯರಾದ ಪಾಂಡು ಕಾಳೆ. ಬಾಲರಾಜ ಕೊಟೇಕಲ್ಲ ಪರಶುರಾಮ ಬಳ್ಳಾರಿ ಯಲ್ಲಪ್ಪ ರಾಯಚೂರ ದೀಪಕ ಮಾನೆ, ಹೇಮಂತ ವಡ್ಡೆಪಲ್ಲಿ, ಸುರೇಶ ಬುದೂರ ಶ್ರೀನಿವಾಸ ಕೊಟೇಕಲ್ಲ ಜಿಲ್ಲಾ ಖಜಾಂಚಿ ಅರುಣ ರಾಂಪೂರ, ಪ್ರ.ಕಾರ್ಯದರ್ಶಿ ಮಂಜುನಾಥ ಮಾನೆ ಪ್ರಮುಖ ಯುವ ನಾಯಕರಾದ ಸುನೀಲ ರಾಯಚೂರ ಕೃಷ್ಣಾ ಬುದೂರ ಸುಧೀರ ಮಾನೆ ವಿಶಾಲ ಮಾನೆ ಶ್ರೀಧರ ಕಡಬೂರ, ಕಾರ್ತಿಕ ಆಗಲಾವೆ, ಅಕ್ಷಯ ಮಾನೆ. ಸಾಗರ ಕೊಟೇಕಲ್ಲ ಸುರೇಶ ರಾಂಪೂರ ಗೋಪಾಲ ರಾಂಪೂರ ಹಾಗೂ ಸಮಾಜದ ನೂರಾರು ಪ್ರಮುಖರು ಹಾಜರಿದ್ದು ಸವಿತಾ ಮಹರ್ಷಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಮರ್ಿಸಿದರು.