ತುಂಗಭದ್ರ ಜಲಾಶಯ ನೀರು ಉಳಿಸಿ, ಬೇಸಿಗೆ ಬೆಳೆಗೆ ನೀರು ಕೊಡಿ
Save Tungabhadra reservoir water and provide water for summer crops
ಕೊಪ್ಪಳ 07: ತುಂಗಭದ್ರಜಲಾಶಯದ ವ್ಯಾಪ್ತಿಯ ಬಲದಂಡೆ ಮತ್ತುಎಡದಂಡೆಯ ಹೆಚ್‌ಎಲ್‌ಸಿ, ಎಲ್‌ಎಲ್‌ಸಿ.ಎಲ್‌ಬಿಎಂಸಿ ಕಾಲುವೆಗಳ ಹಾಗೂ ಆಂಧ್ರ್ರದೇಶದ ವ್ಯಾಪ್ತಿಯರೈತರ ಜಮೀನುಗಳಿಗೆ ಉತ್ತಮ ಮಳೆಯಾಗಿದ್ದು, ಮುಂಗಾರು ಬೆಳಗಳು ಕಟಾವಿಗೆ ಬಂದಿವೆ. ಆದರೆತಾವು ಕಾಲುವೆಗಳಿಗೆ ಹೆಚ್ಚುವರಿ ನೀರನ್ನು ಬಿಟ್ಟು ಕಾಲುವೆಗಳಿಂದ ಮೋರಿಗಳ ಮುಖಾಂತರ ಹಳ್ಳಗಳಿಗೆ ನೀರು ಬಿಡುತ್ತಿದ್ದೀರಿ.ಇದರಿಂದ ಹಳ್ಳಗಳ ವ್ಯಾಪ್ತಿಯಲ್ಲಿ ಬೆಳೆದ ರೈತರ ಬೆಳೆಗಳು ನೀರಿನಲ್ಲಿ ಮುಳುಗಿ ರೈತರಿಗೆ ನಷ್ಟವಾಗುತ್ತಿದೆ. ಹಾಗೆಯೇ ನದಿಗೂ ಸಹ ಹೆಚ್ಚುವರಿ ನೀರು ಬಿಡುತ್ತಿದ್ದೀರಿ. ಈಗಾಗಲೇ ಸುಮಾರುಒಂದು ತಿಂಗಳಿನಿಂದ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಗಳ ಮತ್ತುಆಂಧ್ರ್ರದೇಶದರೈತರು ಬೇಸಿಗೆ ಬೆಳೆಗೆ ನೀರುಬೇಕೆಂದು ಸಚಿವರುಗಳಿಗೂ ಹಾಗೂ ಶಾಸಕರುಗಳಿಗೂ ಮನವಿ ಸಲ್ಲಿಸಿ ವಿನಂತಿಸಿದರು. ನೀರಾವರಿತಜ್ಞರಾದ ಶ್ರೀ.ಕಣ್ಣಯ್ಯ ನಾಯ್ಡುಇವರುಜಲಾಶಯಕ್ಕೆ ಗೇಟುಗಳ ಅಳವಡಿಕೆಗೂ ಮತ್ತು ಬೇಸಿಗೆ ಬೆಳೆ ಬೆಳೆಯಲು ಸಮಯದಅವಕಾಶವಿದೆಎಂದುತಿಳಿಸಿರುತ್ತಾರೆ. ಹಾಗೂ ಜಲಾಶಯದ ವ್ಯಾಪ್ತಿಯರೈತರು ಮುಂಗಾರು ಹಂಗಾಮಿನ ಬೆಳೆಗಳಲ್ಲಿ ಹೆಚ್ಚುವರಿ ಮಳೆಯಿಂದ ಸಾಕಷ್ಟು ನಷ್ಟ ಹೊಂದಿರುವಕಾರಣ ಬೇಸಿಗೆ ಬೆಳೆಯಕುರಿತುಆಶಾದಾಯಕರಾಗಿದ್ದಾರೆ. ಆದಕಾರಣತಾವುಯಾವುದೇಕಾರಣಕ್ಕೂತುಂಗಭದ್ರಜಲಾಶಯದ ನೀರನ್ನು ಹೆಚ್ಚುವರಿಯಾಗಿ ಕಾಲುವೆಗಳಿಗೆ ಮತ್ತು ನದಿಗೆ ಬಿಡದೇ ನೀರು ಉಳಿಸಿ ಬೇಸಿಗೆ ಬೆಳೆಗೆ ರೈತರಿಗೆ ನೀರುಕೊಡಲು ಸಹಕರಿಸಬೇಕು.ಒಂದು ವೇಳೆ ತಾವು ನೀರು ಪೋಲು ಮಾಡಿದರೆ ನಿಮ್ಮಕಛೇರಿಯ ಮುಂದೆ ಸಾವಿರಾರುರೈತರಿಂದಉಗ್ರ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಹಿರಿಯಅಧಿಕಾರಿಯಾದ ಬಸಪ್ಪಜಾನ್‌ಕರ್, ಡಾ. ಪುರುಷೋತ್ತಮಗೌಡ ಅಧ್ಯಕ್ಷರು ತುಂಗ ಭದ್ರರೈತ ಸಂಘ, ಬಳ್ಳಾರಿ, ವಿಜಯನಗರ, ಕೊಪ್ಪಳ ರಾಯಚೂರು, ದರೂರ್ ಸಾಗರಗೌಡ ಹಾಗೂ ಇತರೆರೈತರ ಮುಖಂಡರು ಭಾಗವಹಿಸಿ ಮನವಿ ಪತ್ರ ಸಲ್ಲಿಸಲಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 