ಸತ್ಯಸಾಯಿ ಪ್ರೇಮಪ್ರವಾಹಿನಿ ಭವ್ಯ ರಥಯಾತ್ರೆ
Sathya Sai Prempravahini Grand Chariot
ಶಿಗ್ಗಾವಿ 22 : ಸತ್ಯಸಾಯಿ ಸೇವಾ ಸಮೂಹ ಸಂಸ್ಥೆಗಳ ಭಾರತ ನೇತೃತ್ವದಲ್ಲಿ ಶ್ರೀ ಸತ್ಯಸಾಯಿ ಅವತಾರ ಶತಮಾನೋತ್ಸವದ ಸ್ಮರಣಾರ್ಥವಾಗಿ ಪವಿತ್ರ ಯಾತ್ರೆ ಮೂಲಕ ಸತ್ಯ ಸಾಯಿ ಪ್ರೇಮಪ್ರವಾಹಿನಿ ಭವ್ಯ ರಥಯಾತ್ರೆಯು ಫೆ 23 ರಂದು ಮಧ್ಯಾಹ್ನ 12:00 ಘಂಟೆಗೆ ಶಿಗ್ಗಾವಿ ಪಟ್ಟಣದ ಸವಣೂರ ರಸ್ತೆಯ ಪಂಚಮುಖಿ ಗಣಪತಿ ದೇವಸ್ಥಾನದಿಂದ ಭಕ್ತರ ಭಜನೆ ಹಾಗೂ ಸಕಲ ಮಂಗಳವಾದ್ಯದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶಿ ಹನುಮಂತಗೌಡ್ರ ಕಲ್ಯಾಣ ಭವನದ ಆವರಣ ತಲುಪುವುದು. ನಂತರ ಸದ್ಭಕ್ತರ ಸಮ್ಮುಖದಲ್ಲಿ ಭವ್ಯ ರಥೋತ್ಸವಕ್ಕೆ 9 ಮಹಾ ಮಂಗಳಾರುತಿ ತದನಂತರ ಮಹಾಪ್ರಸಾದ ಜರುಗುವುದು.ತಾವು ಹಾಗೂ ತಮ್ಮ ಪರಿವಾರ ಸಮೇತವಾಗಿ ರಥಯಾತ್ರೆಯಲ್ಲಿ ಭಾಗವಹಿಸಿ ಸತ್ಯ ಸಾಯಿ ಬಾಬಾರವರ ಕೃಪೆಗೆ ಪಾತ್ರರಾಗಬೇಕಾಗಿ ಸತ್ಯಸಾಯಿ ಸೇವಾ ಸಮಿತಿ, ಶಿಗ್ಗಾವಿ ಪ್ರಕಟಣೆಗೆ ಕೋರಿದ್ದಾರೆ. ಸತ್ಯಸಾಯಿ ಸೇವಾ ಸಮಿತಿಯವರಿಂದ ಶಿಗ್ಗಾಂವ ನಗರದ ಶಂಕರಗೌಡ್ರು ಪಾಟೀಲ ಇವರ ಸ್ಮರಣಾರ್ಥ ಇವರ ಸುಪುತ್ರರಾದ ಶ್ರೀ ಸಿದ್ಧಾರ್ಥಗೌಡ್ರು ಹ. ಪಾಟೀಲ ಇವರು ನೀಡಿದ ನಿವೇಶನದಲ್ಲಿ 9 ಶ್ರೀ ಸತ್ಯಸಾಯಿ ಪ್ರಶಾಂತಿ ಮಂದಿರದ ಕಟ್ಟಡದ ನಿರ್ಮಾಣ ಕಾರ್ಯ ಶೀಘ್ರದಲ್ಲಿ ಪ್ರಾರಂಭಿಸಲಾಗುವುದು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 