ಸರ್ದಾರ ವಲ್ಲಬಾಯಿ ಪಟೇಲರ್ 150 ನೇ ಜನ್ಮದಿನ: ಏಕತಾ ನಡಿಗೆ
Sardar Vallabhbhai Patel's 150th Birth Anniversary: A Walk for Unity
ಬೆಳಗಾವಿ 17:ನಾವು ಎಲ್ಲರೂ ಇತಿಹಾಸದ ಒಂದು ಮಹತ್ವದ ಕ್ಷಣದಲ್ಲಿ ಸಾಕ್ಷಿಯಾಗುತ್ತಿದ್ದೇವೆ, ಇದು ನಮಗೆಲ್ಲರಿಗೂ ಒಂದು ಮಹಾನ್ ಕ್ಷಣ ಭಾರತವನ್ನು ಏಕತೆಯೊಂದಿಗೆ ಕಟ್ಟಿದ ಮಹಾನ್ ನಾಯಕನಿಗೆ ನಮನ ಸಲ್ಲಿಸುವ ಅವಕಾಶ ದೊರತ್ತಿದ್ದು, ಈ ಅಭಿಯಾನವು ರಾಷ್ಟ್ರದ ಆತ್ಮವನ್ನು ಜಾಗೃತಗೊಳಿಸುವ ಮಹತ್ವದ ಪ್ರಯತ್ನವಾಗಿದೆ ಎಂದು ಸಂಸದ ಜಗದೀಶ ಶೆಟ್ಟರವರು ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಶೆಟ್ಟರವರು ಅಭಿಯಾನವನ್ನು ಯುವ ವ್ಯವಹಾರಗಳ ಮತ್ತು ಕ್ರೀಡಾ ಸಚಿವ ಡಾ. ಮನುಸುಖ್ ಮಾಂಡವಿಯಾ ಅವರು ಅಕ್ಟೋಬರ್ 6ರಂದು ಉದ್ಘಾಟಿಸಿದರು, ಆ ದಿನದಿಂದ ದೇಶದ ಯುವಕರು ಡಿಜಿಟಲ್ ಹಂತದಲ್ಲಿ ಭಾಗವಹಿಸುತ್ತಿದ್ದಾರೆ ಸಾಮಾಜಿಕ ಮಾಧ್ಯಮ ಸ್ಪರ್ಧೆಗಳು, ಪ್ರಬಂಧ, ಯಂಗ್ ಲೀಡರ್ಸ, ಮುಂತಾದ ಸ್ಪರ್ಧೆಗಳ ಮೂಲಕ ಸರ್ದಾರ್ ಪಟೇಲ ಅವರ ಏಕತೆ ಸಂದೇಶವನ್ನು ಪ್ರತಿಯೊಬ್ಬರ ಹೃದಯಕ್ಕೆ ತಲುಪಿಸುವ ಶಕ್ತಿಶಾಲಿ ಮಾರ್ಗಗಳಾಗಿವೆ.
ಸರ್ದಾರ್ ವಲ್ಲಭಭಾಯಿ ಪಟೇಲ ಅವರ 150ನೇ ಜನ್ಮ ದಿನಾಚರಣೆ ಅಂಗವಾಗಿ “ಭಾರತದ ಲೋಹ ಪುರುಷ” ಎಂದು ಕರೆಯುವ “ಒಂದೆ ಭಾರತ- ಆತ್ಮನಿರ್ಭರ್ ಭಾರತ” ಘೊಷವಾಕ್ಯದೊಂದಿಗೆ ಏಕತಾ ನಡಿಗೆ ಕಾರ್ಯಕ್ರಮವನ್ನು ಬಾರತ ಸರ್ಕಾರದ ಮೈ ಭಾರತ ಕೇಂದ್ರದ ಸಹಕಾರದೊಂದಿಗೆ ನ. 19ರಂದು ಬೆಳಿಗ್ಗೆ 6.30 ಗಂಟೆಗೆ ಜಿಲ್ಲೆಯ ಶಿವ ಚರಿತ್ರ ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನದಿಂದ ಪ್ರಾರಂಭವಾಗಿ ಕಪಿಲೇಶ್ವರ ಮಂದಿರ ರೆಲ್ವೆ ಸೇತುವೆ, ಶನಿದೇವರ ಮಂದಿರ, ತಿಲಕ ಚೌಕ, ರಾಮಲಿಂಗಕಿಂಡಿ ಗಲ್ಲಿ, ಮಾರ್ಗವಾಗಿ ಧರ್ಮವೀರ ಸಂಭಾಜಿ ಮಹಾರಾಜ ಚೌಕದವರೆಗೆ ಜರುಗಲಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ನಡೆಯುವ ಏಕತೆ ನಡಿಗೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಮುಖಂಡರು, ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿ ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಏಕತಾ ನಡಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಲಾಯಿತು. ಪತ್ರಿಕಾಗೋಷ್ಠಿಯಲ್ಲಿ ಮಹಾನಗರ ಪಾಲಿಕೆ ಮಹಾಪೌರ ಮಂಗೇಶ ಪವಾರ, ಉಪ ಮಹಾಪೌರ ವಾಣಿ ಪಾಟೀಲ, ಮಾಜಿ ಶಾಸಕರಾದ ಅನಿಲ ಬೆನಕೆ, ಸಂಜಯ ಪಾಟೀಲ, ಎಂ.ಬಿ.ಝಿರಲಿ ಲೋಕೇಶ ಕುಮಾರ ಉಪನಿರ್ದೆಶಕರು ಉಪಸ್ಥಿತರಿದ್ದರು.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 