ಜ.24 ರಂದು ಸನ್ನತಿ ಪಂಚಶೀಲ ಪಾದಯಾತ್ರೆ ಸಮಾರೋಪ :ಯಲ್ಲಪ್ಪ ಬಳಗಾನೂರ
Sannati Panchsheel Padayatra Concluded on Jan 24: Yallappa Balaganur
ಜ.24 ರಂದು ಸನ್ನತಿ ಪಂಚಶೀಲ ಪಾದಯಾತ್ರೆ ಸಮಾರೋಪ :ಯಲ್ಲಪ್ಪ ಬಳಗಾನೂರ
ಕೊಪ್ಪಳ : ಬೌದ್ಧ ಐತಿಹಾಸಿಕ ಕ್ಷೇತ್ರ ಸನ್ನತಿ ಅಭಿವೃದ್ಧಿ ಮಂಡಳಿ ಪೂರ್ಣ ಪ್ರಮಾಣದಲ್ಲಿ ರಚಿಸಿ, ಆಂದ್ರ್ರದೇಶದ ಬುದ್ಧವನ ಮಾದರಿಯಲ್ಲಿ ಅಭಿವೃದ್ದಿ ಪಡಿಸಲೂ ಆಗ್ರಹಿಸಿ ಮತ್ತು ಬೌದ್ಧ ಸಮುಸಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಾಡಿನ ಬಿಕ್ಕು ಮತ್ತು ಬಿಕ್ಕುಣಿ ಸಂಘದ ಪೂಜ್ಯ ಭಂತೆ ಭೋಧಿದತ್ತ ಇವರ ನೇತೃತ್ವದಲ್ಲಿ ನವೆಂಬರ್ 15 ಸನ್ನತಿಯಿಂದ ಪ್ರಾರಂಭವಾದ ಪಂಚಶೀಲ ಪಾದಯಾತ್ರೆ ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪಿ ಬಹಿರಂಗ ಸಭೆಯಲ್ಲಿ ಸಮಾರೋಪ ಗೊಳ್ಳುವುದು ಎಂದು ಸನ್ನತಿ ಪಂಚಶೀಲ ಪಾದಯಾತ್ರೆ ಸಮಾರೋಪ ಸಮಾರಂಭದ ಸಂಘಟನಾ ಸಮಿತಿ ಕೊಪ್ಪಳ ಜಿಲ್ಲೆಯ ಸಂಚಾಲಕ ಯಲ್ಲಪ್ಪ ಬಳಗಾನೂರ ಹೇಳಿದರು.
ಅವರು ಶುಕ್ರವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ, ಉದ್ದೇಶಿಸಿ ಮಾತನಾಡಿ ರಾಜ್ಯದಲ್ಲಿ ಇರುವ ಸಾಮ್ರಾಟ್ ಅಶೋಕರ ಶಿಲಶಾಸನಗಳಿಗೆ ಬೇಟಿ ನೀಡುತ್ತಾ, ಮತ್ತು ಅಲ್ಲಿಯ ಅವಶ್ಯಕತೆಗಳ ಬಗ್ಗೆ ಸಂಕ್ಷೀಪ್ತವಾಗಿ ಅದ್ಯಾಯನ ಮಾಡುತ್ತಾ ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯ ನಗರ,ಬಳ್ಳಾರಿ, ಚಿತ್ರದುರ್ಗಾ, ತುಮಕೂರು, ಬೆಂಗಳೂರು ಗ್ರಾಮಾಂತಾರ ಜಿಲ್ಲೆಗಳಲ್ಲಿ ಸುಮಾರು 800 ಕಿ.ಮೀ ಕ್ಕೂ ಹೆಚ್ಚು ಸಂಚರಿಸಿ ನೂರಾರು ಗ್ರಾಮಗಳಲ್ಲಿ ವಾಸ್ತವ್ಯಮಾಡಿ, ಧಮ್ಮ ಸಂದೇಶ ನೀಡಿ, ಬೌದ್ಧ ಸಮುದಾಯದ ಬೇಡಿಕೆಗಳ ಈಡೇರಿಕೆಗೆ ಜನಜಾಗೃತಿ ಮೂಡಿಸುತ್ತಾ ಆಯ್ದ ಸ್ಥಳಗಳಲ್ಲಿ ಧಮ್ಮಾ ದೀಕ್ಷಾ ನೀಡುತ್ತಾ ಮುಂದುವರೆದು ಜನವರಿ 23 ರಂದು ಯಶವಂತಪೂರ ಮಾರ್ಗವಾಗಿ ಡಾ.ಬಿ.ಆರ್ ಅಂಬೇಡ್ಕರ್ ರವರ ಕನಸಿನ ದಕ್ಷೀಣ ಭಾರತ ಧಮ್ಮ ಕೇಂದ್ರವಾದ ನಾಗಸೇನ ಬುದ್ಧವಿಹಾರ ಸದಾಶಿವ ನಗರ ತಲುಪಿ ವಾಸ್ತವ್ಯ ಮಾಡಲಾಗುವದು.
ನಂತರ ಬೆಂಗಳೂರು ಫ್ರೀಡಮ್ ಪಾರ್ಕ ತಲುಪಲಿದೆ.ವಿವಿಧ ಬೇಡಿಕೆಗಳಾದ ಪರಿಶಿಷ್ಟ ಜಾತಿಯ ಬೌದ್ಧರ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗಾಗಿ ಕರ್ನಾಟಕ ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು,ಬೌದ್ಧರ ಸರ್ವಾಂಗಣ ಅಭಿವೃದ್ಧಿ ಹಾಗೂ ಬೌದ್ಧ ಕ್ಷೇತ್ರಗಳ ಅಭಿವೃದ್ಧಿಗಾಗಿ ಕನಿಷ್ಠ 1 ಸಾವಿರ ಕೋಟಿ ಅನುದಾನ ಈ ಬಜೆಟ್‌ನಲ್ಲಿ ಒದಗಿಸಬೇಕು,ಪ್ರತಿ ವರ್ಷ ಮಹಾತ್ಮ ಗೌತಮ್ ಬುದ್ಧ ಜಯಂತಿಗೆ ಸಾರ್ವತ್ರಿಕ ರಜೆ ಘೋಷಣೆ ಮಾಡಬೇಕು,ಬೋಧಗಯ ಟೆಂಪಲ್ ಆಕ್ಟ್ 1949 ರನ್ನು ರದ್ದುಗೊಳಿಸಿ ಬುದ್ಧ ಗಯಾದ ಮಹಾಬೋಧಿ, ಮಹಾ ವಿಹಾರದ ಆಡಳಿತವನ್ನು ಸಂಪೂರ್ಣವಾಗಿ ಬೌದ್ಧರಿಗೆ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮತ್ತು ಬಿಹಾರ ಸರಕಾರಕ್ಕೆ ಸೂಕ್ತ ಶಿಫಾರಸ್ಸು ಮಾಡಬೇಕು, ಕನಾಟಕ ಸರಕಾರ ಪ್ರತಿ ವರ್ಷ ಫೆಬ್ರುವರಿ 12 ರಂದು ಸಾಮ್ರಾಟ್ ಅಶೋಕ ಸನ್ನತಿ ಉತ್ಸವವನ್ನು ಸರಕಾರದ ವತಿಯಿಂದ ಆಚರಣೆ ಮಾಡಬೇಕು ಸೇರಿದಂತೆ ವಿಧ ಬೇಡಿಕೆಗಳಿಗೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮಾರ್ಕಂಡಪ್ಪ ಬೆಲ್ಲದ್, ರಘು ಬೆಲ್ಲದ್, ರಘು ಚಾಕ್ರಿ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 