ಸ್ವಾತಂತ್ರ್ಯ ಹೋರಾಟದಲ್ಲಿ ಸಂಗೊಳ್ಳಿ ರಾಯಣ್ಣನ ಪಾತ್ರ ಪ್ರಧಾನವಾದುದು: ಎಸ್.ವಿ.ಎಸ್.ಬೆಳ್ಳುಬ್ಬಿ
Sangolli Rayanna's role in the freedom struggle was pivotal: S.V.S. Bellubbi
ಸವದತ್ತಿ 28: ಪ್ರಪಂಚದಲ್ಲಿ ಸುದೀರ್ಘವಾದ ಕಾಲಾವಧಿಯ ಇತಿಹಾಸವನ್ನು ಹೊಂದಿದ್ದದ್ದು ಭಾರತದ ಇತಿಹಾಸ ಮಾತ್ರ. ಅದು ಭಾರತದ ಸ್ವಾತಂತ್ರ್ಯ ಚಳುವಳಿ ಎಂದು ರಾಮದುರ್ಗದ ಎಸ್.ಐ.ಎಸ್.ವೈ. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ಎ.ಬಿ.ವಗ್ಗರ ಹೇಳಿದರು. ಇಲ್ಲಿನ ಬೆಳ್ಳುಬ್ಬಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಸಂಗೊಳ್ಳಿ ರಾಯಣ್ಣ ಅಧ್ಯಯನ ಪೀಠ ಹಾಗೂ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಸಹಯೋಗದಲ್ಲಿ 2025-26ನೇ ಸಾಲಿನ ಆರನೆಯ ಸರಣಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರಸ್ತುತತೆ ವಿಷಯದ ಕುರಿತು ಮಾತನಾಡಿದರು.ಭಾರತದ ಸ್ವಾತಂತ್ರ್ಯ ಹೋರಾಟ ನಡೆದದ್ದು ಸಾಂಘಿಕ ಹೋರಾಟ.
ಈ ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರ ಸಂಸ್ಥಾನದ ಹೋರಾಟ ಬಹಳ ದೊಡ್ಡ ಪಾತ್ರ ವಹಿಸಿದೆ. ಇದರಲ್ಲಿ ಸಂಗೊಳ್ಳಿ ರಾಯಣ್ಣನ ಪಾತ್ರ ಪ್ರಧಾನವಾದುದು. ಇಂದು ಐತಿಹಾಸಿಕ ಘಟನೆ ಮತ್ತು ವ್ಯಕ್ತಿಯನ್ನು ಕುರಿತು ಮಾತನಾಡುವುದು ಎಂದರೆ ಜೇನು ಹುಟ್ಟಿಗೆ ಕೈ ಹಾಕಿದಂಗ.ಸಂಗೊಳ್ಳಿ ರಾಯಣ್ಣನ ಹೋರಾಟ ಯಾಕೆ ವಿಶಿಷ್ಟವಾಗಿ ಕಾಣಬೇಕೆಂದರೆ, ಸಂಗೊಳ್ಳಿ ರಾಯಣ್ಣನು ಯಾವುದೇ ಅಧಿಕಾರ, ಹಣ, ಪ್ರಭುತ್ವದ ಪ್ರೇರಣೆಯಿಲ್ಲದೆ ಜನರನ್ನು ಸಂಘಟಿಸುವ ಚತುರತೆಯನ್ನು ಹೊಂದಿದ್ದನು. ಆತನಿಗೆ ಯಾವುದೇ ಸವಲತ್ತುಗಳಿರಲಿಲ್ಲ. ಇಂತಹ ಬಿಕ್ಕಟ್ಟಿನ ಸ್ಥಿತಿಯಲ್ಲಿಯೂ ಸ್ವಾತಂತ್ರ್ಯ ಹೋರಾಟವನ್ನು ಕೈಬಿಡಲಿಲ್ಲ. ಇದನ್ನು ಪ್ರಸ್ತುತ ದಿನಗಳಲ್ಲಿ ಯುವಕರು ಅರ್ಥಮಾಡಿಕೊಂಡು ತಮ್ಮ ಭವಿಷ್ಯದ ಗುರಿಯನ್ನು ತಲುಪಲು ಅಧ್ಯಯನದ ಮಾರ್ಗವನ್ನಾಗಿ ಪರಿಗಣಿಸಬೇಕಾಗಿದೆ ಎಂದರು. ಈ ವೇಳೆ ಸಂಗೊಳ್ಳಿ ರಾಯಣ್ಣ ಅಧ್ಯಯನ ಪೀಠದ ನಿರ್ದೇಶಕರು ಡಾ.ರವಿ ಎಸ್. ದಳವಾಯಿ, ಪ್ರಾಚಾರ್ಯ ಡಾ.ಎನ್.ಆರ್.ಸವತಿಕರ, ಡಾ.ಹನುಮಂತಪ್ಪ, ಡಿ.ಜಿ. ಶ್ವೇತಾ ಡಿ.ಬಿ. ಪ್ರೊ. ಕೆ.ರಾಮರೆಡ್ಡಿ, ಡಾ.ಎ.ಎಫ್.ಬದಾಮಿ, ವಿ.ಎಸ್.ಮೀಶಿ, ಡಾ.ಎನ್.ಎ.ಕೌಜಗೇರಿ, ಯಶೋಧ. ಡಿ., ಭಾಗ್ಯಶ್ರೀ ಪೊಲೇಶಿ,ಹಾಗೂ ವಿದ್ಯಾರ್ಥಿಗಳು,ಇದ್ದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 