ಸಂತ ಸಂಕುಲ ಮನುಕುಲಕ್ಕೆ ಮಾದರಿ: ರಾಘವೇಂದ್ರ ಕಾಗವಾಡ

ಸಂತ ಸಂಕುಲ ಮನುಕುಲಕ್ಕೆ ಮಾದರಿ: ರಾಘವೇಂದ್ರ ಕಾಗವಾಡ Saint Sankula Model for Mankind: Raghavendra Kagavada


ಬೆಳಗಾವಿ 06: ಸಂತ ಸಂಕುಲದಿಂದಲೇ ಮನುಕುಲದ ಏಳ್ಗೆ ಆಗುವುದು. ಭಾರತವು ಸಂತ ಮಹಂತ ಯೋಗಿಗಳಿಂದ ಸಂಸ್ಕೃತಿ ಸಂಪನ್ನ ರಾಷ್ಟ್ರ ನಿರ್ಮಾಣವಾಗಿದೆ. ಹೀಗಾಗಿ ಭಾರತೀಯ ಸಂತ ಪರಂಪರೆಗೆ ತನ್ನದೇ ಆದ ಘನತೆ ಗೌರವ ಪ್ರಾಪ್ತವಾಗಿದೆ ಎಂದು ರಾಘವೇಂದ್ರ ಕಾಗವಾಡ ಅವರು ಹೇಳಿದರು. 

ಅವರು ಬೆಳಗಾವಿ ಕಾರಂಜಿಮಠದಲ್ಲಿ ಜರುಗಿದ 295ನೇ ಶಿವಾನುಭವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಮುಂದುವರಿದು ಮಾತನಾಡುತ್ತ ಭಾರತದ ಮೇಲೆ ಎಷ್ಟೇ ಆಕ್ರಮಣಗಳು ನಡೆದರೂ ಸಂತರ ಶಕ್ತಿಯಿಂದ ಗಟ್ಟಿಯಾಗಿ ಉಳಿದುಕೊಂಡಿದೆ ಎಂದು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಡಾ ಬಸವರಾಜ ಜಗಜಂಪಿ ಅವರು ಮಾತನಾಡಿ ಸಂತ ಮಹಂತರು ತಮ್ಮ ತ್ಯಾಗಜೀವನದ ಮೂಲಕ ಲೋಕಕಲ್ಯಾಣಕ್ಕಾಗಿ ಶ್ರಮಿಸುತ್ತ ಬಂದಿದ್ದಾರೆ. ಅವರ ಬದುಕು ನಮಗೆ ಬೆಳಕು ಎಂದು ಹೇಳಿದರು. 

ಸಾನ್ನಿಧ್ಯ ವಹಿಸಿದ್ದ ಗುರುಸಿದ್ಧ ಸ್ವಾಮಿಗಳು ಆಶೀರ್ವಚನ ನೀಡಿ ಈ ಶಿವಾನುಭವ ಕಾರ್ಯಕ್ರಮವು ಸಿದ್ಧೇಶ್ವರ ಸ್ವಾಮೀಜಿ ಅವರಿಗೆ ಸಮರ​‍್ಿತ ಮಾಡಲಾಗಿದೆ. ಸಿದ್ಧೇಶ್ವರ ಸ್ವಾಮೀಜಿ ಸಂಕುಲಕ್ಕೆ ಮಾದರಿ ಆದವರು. ಅಂತಹ ಮಹಾತ್ಮರಿಂದಲೇ ಲೋಕ ಶಾಂತಿ ನೆಮ್ಮದಿ ಹೊಂದಿದೆ ಎಂದು ಹೇಳಿದರು. 

ಇದೇ ಸಂದರ್ಭದಲ್ಲಿ ವಿಶ್ವರತ್ನ ಪ್ರಶಸ್ತಿ ಪಡೆದ ಡಾ ಮಹಾಂತೇಶ ರಾಮಣ್ಣವರ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. ಕುಮಾರೇಶ್ವರ ಸಂಗೀತ ಪಾಠ ಶಾಲೆಯ ಮಕ್ಕಳಿಂದ ವಚನ ಪ್ರಾರ್ಥನೆ ಜರುಗಿತು. 

ಗಂದಿಗವಾಡದ ಮೃತ್ಯುಂಜಯ ಪ್ರೊಫೆಸರ್ ಶ್ರೀಕಾಂತ್ ಶಾನವಾಡ ಅತಿಥಿಗಳನ್ನು ಪರಿಚಯಿಸಿದರು ಸ್ವಾಮೀಜಿ ಸ್ವಾಗತಿಸಿದರು, ಎ.ಕೆ. ಪಾಟೀಲ ನಿರೂಪಿಸಿದರು, ವಿ.ಕೆ. ಪಾಟೀಲ ವಂದಿಸಿದರು. ರತ್ನಪ್ರಭಾ ಬೆಲ್ಲದ, ಎಫ್ ವಿ ಮಾನ್ವಿ, ಮಹಾಂತೇಶ ವಕ್ಕುಂದ, ಬಸವರಾಜ ಹಳಿಂಗಳಿ ಮೊದಲಾದವರು ಉಪಸ್ಥಿತರಿದ್ದರು