ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ನಲ್ಲಿ ಸಾಯಿ ಬುಡಕನ್ ಕರಾಟೆ ಕ್ಲಬ್ಗೆ ಹಲವು ಪ್ರಶಸ್ತಿಗಳು

ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ನಲ್ಲಿ ಸಾಯಿ ಬುಡಕನ್ ಕರಾಟೆ ಕ್ಲಬ್ಗೆ ಹಲವು ಪ್ರಶಸ್ತಿಗಳು  Sai Budokan Karate Club wins multiple awards at the International Karate Championship

ಕೊಪ್ಪಳ 27: ಜಿಲ್ಲೆಯ ಗಂಗಾವತಿ ತಾಲೂಕಿನ ಸಿ.ಬಿ.ಎಸ್‌. ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ 2ನೇ ಅಂತರರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್‌ಶಿಪ್‌ಹಿ2026 ಕೊಪ್ಪಳದ ಸಾಯಿ ಬುಡಕನ್ ಕರಾಟೆ ಕ್ಲಬ್ನ ಕರಾಟೆ ಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗೆದ್ದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ.  

ವಿಜೇತರ ವಿವರಗಳು:  

ಸಿಬ್ಲ್ಯಕ್ ಬೆಲ್ಟ್‌ ಮಹಿಳಾ ವಿಭಾಗ: ಪ್ರಿಯಾಂಕಾ ಯಾದವ್ ಹಿ ಪ್ರಥಮ ಸ್ಥಾನ.  

ಸಿಬ್ಲ್ಯಕ್ ಬೆಲ್ಟ್‌ ಪುರುಷರ ವಿಭಾಗ: ಅರ್ಜುನ್ ಯಾದವ್ ಹಿ ಪ್ರಥಮ ಸ್ಥಾನ; ಅಖಿಲೇಶ್ ಯಾದವ್ ಹಿ ದ್ವಿತೀಯ ಸ್ಥಾನ.  

ಸಿಬ್ರೌನ್ ಬೆಲ್ಟ್‌ ಮಹಿಳಾ ವಿಭಾಗ: ಸವಿತಾ ಕೊಂಡನಹಳ್ಳಿ ಹಿ ಪ್ರಥಮ ಸ್ಥಾನ.  

ಸಿಬ್ಲೂ ಬೆಲ್ಟ್‌ ವಿಭಾಗ: ಸಂತೋಷ್ ಹಿ ದ್ವಿತೀಯ ಸ್ಥಾನ.  

ಸಿಯೆಲ್ಲೋ ಬೆಲ್ಟ್‌ ವಿಭಾಗ: ಗಣೇಶ್ ಹಿ ದ್ವಿತೀಯ ಸ್ಥಾನ.  

ಸೀಸೀನಿಯರ್ ವಿಭಾಗ: ಆನಂದಕುಮಾರ್ ಹಿ ದ್ವಿತೀಯ ಸ್ಥಾನ.  

ಸಿಜೂನಿಯರ್ ವಿಭಾಗ: ಧ್ರುವ್ ಗೋಜನಾಳ ಹಿ ದ್ವಿತೀಯ ಸ್ಥಾನ; ಸಂಜಯ್ ಹಿ ಪ್ರಥಮ ಸ್ಥಾನ; ಗಗನ್ ಹಿ ಪ್ರಥಮ ಸ್ಥಾನ.  

ವಿಜೇತ ಕರಾಟೆ ಪಟುಗಳನ್ನು ಅಭಿನಂದಿಸುವ ಸಲುವಾಗಿ ಸಾಯಿ ಬುಡಕನ್ ಕರಾಟೆ ಕ್ಲಬ್ನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಶ್ರೀಕಾಂತ್ ಪಿ. ಕಲಾಳ, ಚಿರಂಜೀವಿ, ಮೌಲಾ ಮುಂಡರಗಿ, ತಿರುಮಲ ಯಾದವ್, ದುರ್ಗಪ್ಪ ಕಂದಾರಿ, ರಾಜ್ಯ ಪರಿಷತ್ ಸದಸ್ಯರು, ಕರ್ಮಚಾರಿ ಸಮಿತಿ ಅಧ್ಯಕ್ಷ ಶ್ರೀ ಮೈಲಪ್ಪ ಕಾರಟಗಿ, ಕರ್ನಾಟಕ ರಾಜ್ಯದ ವಿವಿಧ ಗಣ್ಯರು ಹಾಗೂ ಬಸವರಾಜ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದು, ವಿಜೇತರಿಗೆ ಪ್ರಮಾಣಪತ್ರ ಹಾಗೂ ಬಹುಮಾನಗಳನ್ನು ನೀಡಿ ಶುಭ ಹಾರೈಸಿದರು.  ಸಾಯಿ ಬುಡಕನ್ ಕರಾಟೆ ಕ್ಲಬ್ನ ತರಬೇತಿ ಮತ್ತು ಶಿಸ್ತುಬದ್ಧ ಅಭ್ಯಾಸಕ್ಕೆ ಈ ಸಾಧನೆ ಸಾಕ್ಷಿಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವಂತೆ ಗಣ್ಯರು ಶುಭಾಶಯ ಕೋರಿದರು.