ಸುಪಾರ್ಶ್ವಸೇನ ಮುನಿಯವರು ಯಮಸಲ್ಲೇಖನ ವೃತ ಸ್ವೀಕರಿಸಿದ ಸಮಾಧಿ ಮರಣ

ಸುಪಾರ್ಶ್ವಸೇನ ಮುನಿಯವರು ಯಮಸಲ್ಲೇಖನ ವೃತ ಸ್ವೀಕರಿಸಿದ ಸಮಾಧಿ ಮರಣ Sage Suparshvasena's death after taking the vow of Yamasallekha

            ಕಾಗವಾಡ, 18 : ತಾಲೂಕಿನ ಶೇಡಬಾಳ ಪಟ್ಟಣದ ಆಚಾರ್ಯ ಶಾಂತಿಸಾಗರ ಜೈನ್ ಆಶ್ರಮದಲ್ಲಿ ಆಚಾರ್ಯ ಶ್ರಮಣರತ್ನ ಸುಭಲಸಾಗರ ಮುನಿ ಮಹಾರಾಜರ ಪರಮ ಶಿಷ್ಯರಾದ ಸುಪಾರ್ಶ್ವಸೇನ ಮುನಿ ಮಹಾರಾಜರು ರವಿವಾರ ದಿ. 16 ರಂದು ರಾತ್ರಿ 10.53 ಗಂಟೆಗೆ ಯಮಸಲ್ಲೇಖನ ವೃತ ಸ್ವೀಕರಿಸಿದ 10 ನೇ ದಿನಕ್ಕೆ ಸಮಾಧಿ ಮರಣ ಹೊಂದಿದರು. 

          ಸೋಮವಾರ ದಿ. 17 ರಂದು ಅವರ ವಿಧಿವತ ಅಂತಿಮ ಸಂಸ್ಕಾರ ಬೆಳಿಗ್ಗೆ ನೆರವೇರಿತು. ಆಚಾರ್ಯ ಧರ್ಮಸೇನ ಮುನಿ ಮಹಾರಾಜರ ಸಾನಿಧ್ಯದಲ್ಲಿ ಮುನಿಸಂಘದ ವತಿಯಿಂದ ವಿನಯ ಅಂಜಲಿ ಅರ​‍್ಿಸಲಾಯಿತು. ಆಚಾರ್ಯಗಳಾದ ಧರ್ಮಸೇನ, ಜನಸೇನ, ಶಾಂತಿಸೇನ ಮುನಿ ಮಹಾರಾಜರು ಹಾಗೂ ಮಾತಾಜಿಗಳ ಪಾವನ ಸಾನಿಧ್ಯದಲ್ಲಿ, ಜೈನ ಸಮಾಜದ ಕರ್ನಾಟಕ ಪುರೋಹಿತ ರತ್ನ ಆನಂದ ಉಪಾಧ್ಯೆ ಹಾಗೂ ಇನ್ನುಳಿದ ಪುರೋಹಿತರ ನೇತೃತ್ವದಲ್ಲಿ ವಿಧಿ ವಿಧಾನ ಹಾಗೂ ಮಂತ್ರೋಪಚಾರಗಳಿಂದ ಮರಣೋತ್ಸವ ಅಂತ್ಯವಿಧಿ ಸಂಸ್ಕಾರ ಕಾರ್ಯಕ್ರಮ ನೆರವೇರಿಸಲಾಯಿತು.  

          ಸುಪಾರ್ಶ್ವಸೇನ ಮುನಿ ಮಹಾರಾಜರು ಸುಕ್ಷೇತ್ರ ಬಾಬಾನಗರದಲ್ಲಿ ಶ್ರಮಣರತ್ನ ಸುಬಲಸಾಗರ ಮುನಿ ಮಹಾರಾಜರಿಂದ 1999 ರಲ್ಲಿ ಮುನಿ ದೀಕ್ಷೆ ಸ್ವೀಕರಿಸಿದ್ದರು. ಕಳೆದ 26 ವರ್ಷಗಳಲ್ಲಿ ಧರ್ಮಸೇವೆ ಮಾಡುತ್ತ, ದೇಶ ಸಂಚರಿಸಿ, ಧರ್ಮ ಸೇವೆ ಮಾಡಿದ್ದಾರೆ. ಅವರು ಪೂರ್ವಾಶ್ರಮದಲ್ಲಿ ಅಥಣಿ ತಾಲೂಕಿನ ಮಹೇಶವಾಡಗಿ ಗ್ರಾಮದ ರೈತಾಪಿ ಕುಟುಂಬದವರು. ತಂದೆ ನೇಮಿನಾಥ ರೆಗೌಡರ, ತಾಯಿ ಕೃಷ್ಣಾಬಾಯಿ ಇವರ ಪುತ್ರ ಶ್ರೀಪಾಲ ರೆಗೌಡರ ಇವರು 26 ವರ್ಷಗಳ ಮುನಿಸೇವೆ, ಧರ್ಮದ ಸೇವೆ ಮಾಡಿ ಈಗ ಸಮಾಧಿಮರಣ ಹೊಂದಿದರು. 

            ಅಂತ್ಯವಿಧಿ ಕಾರ್ಯಕ್ರಮಕ್ಕೆ ಮುಂಬೈನ ಉದ್ಯಮಿ ಪಂಕಜ ಕೋಟಾಡಿಯ, ಬಾಳಾಸಾಹೇಬ ಹರವಿ, ಬಾಬಾ ಅನಾಜೆ, ಸಚೀನ ರೆಗೌಡರ, ವಿಮಲ ಮಾತ್ರೆ ಉಪಸ್ಥಿತರಿದ್ದರು. ನೇಮಿನಾಥ ರೇಗೌಡರ್ ಅಗ್ನಿ ಸ್ಪರ್ಷ ನೆರವೇರಿಸಿದರು. ಪುರೋಹಿತರಿಂದ ಪಂಚಾಮೃತ ಅಭಿಷೇಕ ನೆರವೇರಿಸಿದರು. ಆಶ್ರಮದ ವ್ಯವಸ್ಥಾಪಕ ರಾಜು ನಾಂದ್ರೆ, ಕರ್ನಾಟಕ ಜೈನ ಅಸೋಸಿಯೇಶನ್ ಉಪಾಧ್ಯಕ್ಷ ಶೀತಲ ಪಾಟೀಲ, ನ್ಯಾಯವಾದಿ ಎಸ್‌.ಬಿ. ಮುನ್ನೋಳಿ, ಸುಭಾಷ್ ಉಪಾಧ್ಯೆ, ಮಹೇಂದ್ರ ಉಪಾಧ್ಯೆ, ಬಾಹುಬಲಿ ಉಪಾಧ್ಯೆ, ಕುಮಾರ ಅಲಗೌಡರ, ಅರುಣ ಯಲಗುದ್ರಿ, ಕಿರಣ ಯಂದಗೌಡರ, ರಾಜು ಜಕ್ಕನವರ, ಭರತ ನಾಂದ್ರೆ, ಸತೀಶ ಹಜಾರೆ, ಭರತ ನರಸಗೌಡರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.