ಏಪ್ರಿಲ್ 12 ರಿಂದ 16ರವರೆಗೆ ಸದಾಶಿವ ಮಹಾರಾಜರ ಜಾತ್ರಾ ಮಹೋತ್ಸವ
Sadashiva Maharaja's Jatra Mahotsav from April 12 to 16
ಲೋಕದರ್ಶನ ವರದಿ
ಸಂಬರಗಿ 07: ಕರ್ನಾಟಕ-ಮಹಾರಾಷ್ಟ್ರದ ಗಡಿಯಲ್ಲಿ ಬರುವ ಜಂಬಗಿ ಗ್ರಾಮದ ಶ್ರೀ ಸದಾಶಿವ ಮಹಾರಾಜರ ಜಾತ್ರಾ ಮಹೋತ್ಸವ ಕಾರ್ಯಕ್ರಮ ಏಪ್ರಿಲ್ 12 ರಿಂದ 16ರ ವರೆಗೆ ನಡೆಯುತ್ತದೆ ಎಂದು ಜಾತ್ರಾ ಕಮೀಟಿ ತಿಳಿಸಿದ್ದಾರೆ. ಏಪ್ರೀಲ್ 12 ರಂದುಜಾತ್ರೆ ಪ್ರಾರಂಭ, ಏ.13ಕ್ಕೆ ಬೆಳಿಗ್ಗೆ ಕೃಷ್ಣಾ ನದಿಯಿಂದ ನೀರು ಅರೆ್ಣ ಮಾಡಿ ಪಲ್ಲಕ್ಕಿ ಮೆರವಣಿಗೆ ಹಾಗೂ ಮಹಾ ನೈವೆದ್ಯ, ರಾತ್ರಿ 8 ಗಂಟೆಗೆ ಪ್ರವಚನ ಕಾರ್ಯಕ್ರಮ ಶ್ರೀ ವೇದಮೂರ್ತಿ ಪ.ಪೂ ಓಂಕಾರಯ್ಯ ಮಹಾಸ್ವಾಮಿ ಬಬಲಾದಿಮಠ, ರಾತ್ರಿ 10 ಗಂಟೆಗೆ ಪ್ರಥಮೇಶ ಮೆಲೋಡಿಸ್ ಆರ್ಕೆಸ್ಟ್ರಾ ಕಲಾತಂಡ ಸತ್ತಿಇವರಿಂದರ ಸಮಂಜರಿ ಕಾರ್ಯಕ್ರಮ, ಈ ಕಾರ್ಯಕ್ರಮಕ್ಕೆ ಟೆನ್ನಿಸ್ ಕೃಷ್ಣಾ ಕಾಮಿಡಿ ಕಿಲಾಡಿ ಇವರಿಂದ ರಸಮಂಜರಿ, ಏ.14ರಂದು ಜೋಡೆತ್ತು ಹಾಗೂ ಕುದುರೆಗಾಡಿ ಶರತಿಗಳು, ರಾತ್ರಿ 8 ಗಂಟೆಗೆ ಕವಿರಾಜ ಜಾವರೆ ಮಹಾರಾಜ ಇವರಿಂದ ಕೀರ್ತನೆ, ಏ.15 ರಂದುರಾತ್ರಿ 10 ಗಂಟೆಗೆ ಮರಾಠಿ ಆರ್ಕೆಸ್ಟ್ರಾ ಕೊಲ್ಹಾಪೂರ ಇವರಿಂದ ಮನೊರಂಜನಾ ಕಾರ್ಯಕ್ರಮ, ಏ.16 ರಂದುಜಾತ್ರೆ ಮುಕ್ತಾಯ. ಅಥಣಿ, ಮಿರಜ, ಕವಟೆ ಮಹಾಂಕಾಳ ಘಟಕದಿಂದ ಬಸ್ ಸೌಲಭ್ಯವನ್ನು ಪಲ್ಪಿಸಲಾಗಿದೆ. ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಾತ್ರಾ ಕಮೀಟಿಯವರ ವತಿಯಿಂದ ತಿಳಿಸಲಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 