ಶಾಲೆಗಳಿಗೆ ಎಸ್.ವಿ.ಪ್ರಸಾದ 200 ಕುರ್ಚಿ ದೇಣಿಗೆ


ಹುಬ್ಬಳ್ಳಿ 29: ಸ್ಥಳೀಯ ಲ್ಯಾಮಿಂಗ್ಟನ್ ಬಾಲಕರ, ಬಾಲಕಿಯರ ಮತ್ತು ಲಕ್ಷ್ಮಣರಾವ್ ಪೈಕೋಟಿ ಶಾಲೆಗಳ ಸಭಾಂಗಣದಲ್ಲಿ ಅವಶ್ಯಕವಾಗಿದ್ದ 200 ಖುರ್ಚಿ ಗಳನ್ನು ಸ್ಥಳಿಯ ರೇಲ್ವೆ ಗುತ್ತಿಗೆದಾರರೂ, ಸ್ವರ್ಣ ಸಮೂಹ ಉದ್ದಿಮೆಗಳ ವ್ಯವಸ್ಥಾಪಕ ನಿರ್ದೇ ಶಕರೂ ಆದ ಸಿ.ವಿ.ಎಸ್.ವಿ.ಪ್ರಸಾದ ಅವರು ಲಾಯನ್ಸ ಕ್ಲಬ್ ಹುಬ್ಬಳ್ಳಿ ಪರವಾಗಿ ಕೊಡುಗೆ ರೂಪವಾಗಿ ನೀಡಿದರು.

ಲಾಯನ್ಸ ಕ್ಲಬ್ ಹುಬ್ಬಳ್ಳಿ ಪರಿವಾರ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾರಂಭದಲ್ಲಿ ಖುರ್ಚಿ ಗಳನ್ನು ವಿತರಿಸಿದ ಸಿ.ವಿ.ಎಸ್.ವಿ.ಪ್ರಸಾದ ಅವರು  ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ, ದೇವರು ನೀಡಿದ್ದನ್ನು ಅಲ್ಪ ಪ್ರಮಾಣದಲ್ಲಾದರೂ ಸಮಾಜಕ್ಕೆ ನೀಡುವದೆಂದರೆ ಅದು ದೇವ ಪೂಜೆ, ದೈವ ಪೂಜೆಗೆ ಸಮಾನವಾದುದು ಎಂದರು.

ಮಕ್ಕಳಿಗೆ ಕುಳಿತುಕೊಳ್ಳಲು ಆಸನಗಳನ್ನು ನೀಡುವಂತೆ, ಕ್ಲಬ್ ಅಧ್ಯಕ್ಷ ಶಶಿ ಸಾಲಿಯವರು ಮಾಡಿಕೊಂಡ ವಿನಂತಿ ನನಗೆ ಅತ್ಯಂತ ಆಪ್ತವೆನಿಸಿತು. ಇಂದಿನ ಮಕ್ಕಳು ನಾಳಿನ ನಾಡ ಪ್ರಜೆಗಳು, ಅವರಿಗೆ ಸಹಾಯ ಮಾಡುವಂತಹ ಅವಕಾಶವನ್ನು ನನಗೆ ಲಾಯನ್ಸ್ ಪರಿವಾರ ಕಲ್ಪಿಸಿ ಕೊಟ್ಟಿದ್ದು ಆನಂದ ತಂದಿದೆ, ಇಲ್ಲಿ ಕುಳಿತು ಓದುವ ಮಕ್ಕಳಲ್ಲಿ ಹಲವರಾದರೂ ನಾಳೆ ಸ್ಪರ್ಧಾ ತ್ಮಕ ಪರೀಕ್ಷೆಗಳನ್ನು ಬರೆದು ಆಯ್.ಎ.ಎಸ್. ಆಯ್.ಪಿ.ಎಸ್. ಅಧಿಕಾರಿಗಳಾಗಿ ಹೊರಹೊಮ್ಮಲಿ ಎಂದು ಆಶಿಸುತ್ತೇನೆ ಎಂದರು.

ಬಾಲಕಿಯರ ಶಾಲೆಯ ಮುಖ್ಯಧ್ಯಾಪಕಿ ಮಹಾಳಂಕ ಸ್ವಾಗತಿಸಿದರು. ಪೈಕೋಟಿ ಇಂಗ್ಲಿಷ ಮೀಡಿಯಂ ಶಾಲೆಯ ಮುಖ್ಯಧ್ಯಾಪಕ ಚನ್ನಕೋಟಿಮಠ ಪ್ರಸಾದ ಅವರು ನೀಡಿದ ಕೊಡುಗೆಯ ಕುರಿತು ಮಾತನಾಡಿದರು. ಆಡಳಿತಾಧಿಕಾರಿ ಎಂ.ಬಿ.ನಾತು ಅವರು ಪ್ರಸಾದ ಅವರ ಕೊಡುಗೆಯ ಮಹತಿಯನ್ನು ಪ್ರಶಂಸಿಸುತ್ತ ಪ್ರಾಸ್ತವಿಕವಾಗಿ ಮಾತನಾಡಿದರು. ಶಾಲಾ ಮಕ್ಕಳಾದ ಸುಜನ್ ವೈಜಾಪುರಿ, ದೀಪಾ ಬೆಳವಡಿ ಅವರು ಶಾಲಾ ಮಕ್ಕಳ ಪರವಾಗಿ ಪ್ರಸಾದ ಅವರನ್ನು ಅವರ ನೀಡಿದ ಕೊಡಿಗೆಗಾಗಿ ಕೃತಜ್ಞತಾ ಸಮರ್ಪಣ ಮಾತುಗಳನ್ನಾಡಿದರು. ಲಾಯನ್ಸ್ ಕ್ಲಬ್ ಅಧ್ಯಕ್ಷ ಶಶಿ ಸಾಲಿಯವರು ಸಂಸ್ಥೆಯ ಸಮಾಜ ಸೇವೆಯ ಕುರಿತು, ಪ್ರಸಾದ ಅವರ ಕೊಡುಗೆಯ ಕುರಿತು ಅಧ್ಯಕ್ಷೀಯ ಮಾತುಗಳನ್ನಾಡಿದರು. 

ಶಾಲೆಯ ಮಕ್ಕಳ ಹಾಗೂ ಲಾಯನ್ಸ್ ಕ್ಲಬ್ ಪರವಾಗಿ ಪ್ರಸಾದ ಅವರನ್ನು ಸತ್ಕರಿಸಲಾಯಿತು. ಬಾಲಕರ ಶಾಲೆಯ ಮುಖ್ಯಧ್ಯಾಪಕ ಶಿವಪ್ರಸಾದ ಅವರು ವಂದನಾರ್ಪಣೆ ಮಾಡಿದರು, ನವೀನ ಸಂಶಿ ನಿರೂಪಿಸಿದರು.

ಲಾಯನ್ಸ ಕ್ಲಬ್ ಪರವಾಗಿ ಕಾರ್ಯದಶರ್ಿ ಡಾ. ಸಂಜಯ ಗಣೇಶಕರ, ಖಜಾಂಚಿ ಶ್ರೇಣಿಕರಾಜ ರಾಜಮಾನೆ, ಸದಸ್ಯರಾದ ತೇಜಪ್ರಕಾಶ ಮಹಾಜನ, ಶಿವಶಂಕರ ಅಂಬಲಿ, ಅಶೋಕ ಗೋಯಲ್, ಅಶೋಕ ಟೆಂಗಿನಕಾಯಿ, ರಾಜು ಕಮ್ಮಾರ, ಚೇಲನಾ ರಾಜಮಾನೆ ಉಪಸ್ಥಿತರಿದ್ದರು.