ಎಸ್ಎಸ್ಎಲ್ಸಿ ವಿದ್ಯಾಥರ್ಿಗಳ ಬೀಳ್ಕೋಡುವ ಸಮಾರಂಭ

ಲೋಕದರ್ಶನ ವರದಿ

ಘಟಪ್ರಭಾ 03: ಸಮೀಪದ ದುರದುಂಡಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಸನ್ 2018-19 ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾಥರ್ಿಗಳ ಬೀಳ್ಕೋಡುವ ಸಮಾರಂಭ ಹಾಗೂ ವಾಷರ್ಿಕ ಕ್ರೀಡಾ ಕೂಟಗಳ ಬಹುಮಾನ ವಿತರಣಾ ಸಮಾರಂಭವು ಶುಕ್ರವಾರ ಅದ್ದೂರಿಯಾಗಿ ಜರುಗಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಾರೂಗೇರಿಯ ಸಿದ್ಧೇಶ್ವರ ಕಲಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಹಾಗೂ ಸಾಹಿತಿ ಟಿ.ಎಸ್.ವಂಟಗೂಡಿ ಮಾತನಾಡಿ, ಇಂದಿನ ವಿದ್ಯಾಥರ್ಿಗಳೇ ನಾಳಿನ ಗಣ್ಯ ನಾಗರಿಕರು. ವಿದ್ಯಾಥರ್ಿಗಳು ಸಾಧನೆಯ ಶಿಖರ ಮುಟ್ಟಬೇಕಾದರೆ ಶಿಸ್ತು, ಏಕಾಗ್ರತೆ, ಸಮಯ ಪ್ರಜ್ಞೆ, ಸತತ ಪ್ರಯತ್ನಶೀಲರಾಗಬೇಕು. ವಿದ್ಯಾಥರ್ಿಗಳು ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಕಲೆ, ಸಾಹಿತ್ಯ ಸಂಗೀತಗಳಲ್ಲಿ ಕೂಡಾ ಆಸಕ್ತಿ ಹೊಂದಿರಬೇಕೇಂದು ಹೇಳಿದರು. 

ಸಮಾರಂಭದ ಅಧ್ಯಕ್ಷತೆಯನ್ನು ಪ್ರಭಾರಿ ಮುಖ್ಯೋಪಾಧ್ಯಾಯ ಎಂ.ಕೆ.ವಡೇರ ವಹಿಸಿದ್ದರು. ವೇದಿಕೆ ಮೇಲೆ ಹಿರಿಯರಾದ ಶಂಕರ ಅಂತರಗಟ್ಟಿ, ತಾ.ಪಂ ಸದಸ್ಯೆ ಸುಮಿತ್ರಾ ಅಂತರಗಟ್ಟಿ, ಗ್ರಾ.ಪಂ ಅಧ್ಯಕ್ಷ ಭೀಮಶಿ ಹುಕ್ಕೇರಿ, ದೈಹಿಕ ಶಿಕ್ಷಕ ಆರ್.ಎಸ್.ಕದಂ, ವಿ.ಬಿ.ಅರಬೆಂಚಿ, ಎಸ್.ಎನ್.ಕುಂದರಗಿ, ಪಿ.ಬಿ.ಬನ್ನೂರ, ಡಾ.ಎಚ್.ಎಸ್.ಗೋರಕನಾಥ, ಗಂಗವ್ವಾ ಅಂತರಗಟ್ಟಿ, ಕಲ್ಲವ್ವಾ ಹಂಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 

ವಿದ್ಯಾಥರ್ಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ವಾಷರ್ಿಕ ಕ್ರೀಡಾ ಕೂಟದಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾಥರ್ಿಗಳಿಗೆ ಗಣ್ಯರಿಂದ ಬಹುಮಾನಗಳನ್ನು ವಿತರಿಸಲಾಯಿತು.  

ಶಿಕ್ಷಕಿಯರಾದ ಆರ್.ಎಸ್.ಕದಂ ಸ್ವಾಗತಿಸಿದರು. ಮಹಾದೇವಿ ಹುಕ್ಕೇರಿ ನಿರೂಪಿಸಿದರು. ಜಿ.ಆರ್.ಜೂಗನವರ ವಂದಿಸಿದರು.