ಕನ್ನಡ ಶಾಲೆಗಳನ್ನು ವೀಲೀನಗೊಳಿಸುವ ಹೆಸರಿನಲ್ಲಿ ಮುಚ್ಚುವ ಹುನ್ನಾರ; ಎಸ್‌ಎಫ್‌ಐ ಖಂಡನೆ

ಕನ್ನಡ ಶಾಲೆಗಳನ್ನು ವೀಲೀನಗೊಳಿಸುವ ಹೆಸರಿನಲ್ಲಿ ಮುಚ್ಚುವ ಹುನ್ನಾರ; ಎಸ್‌ಎಫ್‌ಐ ಖಂಡನೆ SFI condemns plans to close Kannada schools in the name of merging them

           ಹಾವೇರಿ 19: 700 ಪಂಚಾಯತಿಗಳ ಮಟ್ಟದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಿಸಿ ಸುತ್ತಮುತ್ತಲಿನ  ಸರ್ಕಾರಿ ಶಾಲೆ / ಪದವಿ ಪೂರ್ವ ಕಾಲೇಜುಗಳನ್ನು  ವೀಲೀನಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಸರ್ಕಾರಿ ಶಾಲೆಗಳ ಉಳಿವಿಗಾಗಿ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ಮುನಿಸಿಪಲ್ ಮೈದಾನದಿಂದ ಮೆರವಣಿಗೆ ಮಾಡಿ  ಜೆ.ಎಚ್‌. ಪಟೇಲ್ ವೃತ್ತದಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಮ್‌.ಎಚ್‌. ಪಾಟೀಲ್ ಮೂಲಕ ಮುಖ್ಯಮಂತ್ರಿ ಸಿದ್ಧಾರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.  

            ರಾಜ್ಯದಲ್ಲಿ ಪ್ರಸ್ತುತ ಸುಮಾರು 47,493 ಸರ್ಕಾರಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿವೆ. ಇವುಗಳಲ್ಲಿ 19,603 ಪ್ರಾಥಮಿಕ ಶಾಲೆಗಳು, 21,676 ಹಿರಿಯ ಪ್ರಾಥಮಿಕ ಶಾಲೆಗಳು, 4,895 ಪ್ರೌಢಶಾಲೆಗಳು ಮತ್ತು 1,319 ಪದವಿಪೂರ್ವ ಕಾಲೇಜುಗಳಿರುತ್ತವೆ. ಹಾಗೂ   309 ಕರ್ನಾಟಕ ಪಬ್ಲಿಕ್ ಶಾಲೆಗಳಿವೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯು 2015-16ರಲ್ಲಿ 47.1 ಲಕ್ಷದಿಂದ 2025-26ರಲ್ಲಿ 38.2 ಲಕ್ಷಕ್ಕೆ (19ಅ ಕಡಿಮೆ) ಕುಸಿದಿರುತ್ತದೆ. ಒಟ್ಟು ದಾಖಲಾತಿಯಲ್ಲಿ ಸರ್ಕಾರಿ ಶಾಲೆಗಳ ಪಾಲು 46ಅ ರಿಂದ 38ಅ ಕ್ಕೆ ಕುಸಿದಿರುತ್ತದೆ. ಆದರೆ ಖಾಸಗಿ ಅನುದಾನರಹಿತ ಶಾಲೆಗಳ ಪಾಲು 2015-16ರಲ್ಲಿ 36.3 ಲಕ್ಷ ವಿದ್ಯಾರ್ಥಿಗಳಿಂದ 2025-26ರಲ್ಲಿ 47 ಲಕ್ಷ ವಿದ್ಯಾರ್ಥಿಗಳಿಗೆ (29ಅ) ಹೆಚ್ಚಾಗಿದೆ.  ಸರ್ಕಾರ 2017-18 ರಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯನ್ನು  ತಾಲ್ಲೂಕಿಗೆ ಒಂದು ಏಕಖ ಶಾಲೆಗಳನ್ನು ಪ್ರಾರಂಭ ಮಾಡುವುದಾಗಿ ಸರ್ಕಾರ ಪ್ರಾರಂಭಿಸಿತು.2018 ರಲ್ಲಿ 175 ಸರ್ಕಾರಿ ಶಾಲೆಗಳು, 2019 ರಲ್ಲಿ 100 ಸರ್ಕಾರಿ ಶಾಲೆಗಳನ್ನು  ಏಕಖ ಶಾಲೆಗಳಾಗಿ ಉನ್ನತೀಕರಣ  ಮಾಡಿದೆ. ನಂತರ ಹೊಸ ಶಿಕ್ಷಣ ನೀತಿ ಜಾರಿಯಾದ  ನಂತರ ಓಇಕ ಯಲ್ಲಿ ತಿಳಿಸಿದಂತೆ ಪಂಚಾಯತಿಗೆ ಒಂದು ಶಾಲೆ ಮಾಡಲು ಸರ್ಕಾರ ಮುಂದಾಗಿದೆ. 2025 ರಿಂದ 2027 ರ ಒಳಗೆ ರಾಜ್ಯದಲ್ಲಿ 700 ಪಂಚಾಯತಿಗಳಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಉನ್ನತೀಕರಿಸಿ  ಪಂಚಾಯತಿಯಲ್ಲಿರುವ ಶಾಲೆಗಳನ್ನು ವೀಲೀನದ  ಹೆಸರಿನಲ್ಲಿ ಮುಚ್ಚಲು ಸರ್ಕಾರ ಮುಂದಾಗಿದೆ.  

           ಈಗಾಗಲೇ ಉನ್ನತೀಕರಣ ಮಾಡಲಾಗಿರುವ ಏಕಖ ಶಾಲೆಗಳಲ್ಲಿ ಸರ್ಕಾರ ತಿಳಿಸಿರುವ ಆಡಳಿತಾತ್ಮಕ ಕ್ರಮಗಳನ್ನು ಜಾರಿ ಮಾಡಲು ಸರ್ಕಾರ ವಿಫಲವಾಗಿದೆ.  ಉನ್ನತೀಕರಣ ಮಾಡಲಾಗಿರುವ 304 ಏಕಖ ಶಾಲೆಗಳಿಗೆ  ಸರಿಯಾಗಿ ಮೂಲಭೂತ ಸೌಕರ್ಯ ಹಾಗೂ ಶಿಕ್ಷಕರ ನೇಮಕಾತಿ ಮಾಡಿಲ್ಲ.ರಾಜ್ಯದಲ್ಲಿ  2017 ರಿಂದ 2024-25 ರವರೆಗೆ ಪ್ರಸ್ತುತ 308 ಕರ್ನಾಟಕ ಪಬ್ಲಿಕ್ ಶಾಲೆಗಳಿವೆ. ಆದರೆ  ಸರ್ಕಾರ ಹೊಸ 304 ಏಕಖ ಶಾಲೆ ಕಟ್ಟಡ  ನಿರ್ಮಾಣ  ಮಾಡಿಲ್ಲ. 4 ಏಕಖ ಶಾಲೆಗಳನ್ನು ಕಾರ​‍್ೊರೇಟ್ ಸಾಮಾಜಿಕ ಜವಾಬ್ದಾರಿ (ಅಖಖ)  ನಿಧಿಯಲ್ಲಿ  ಕಾರ​‍್ೊರೇಟ್ ಉದ್ಯಮಿಗಳು ನಿರ್ಮಾಣ ಮಾಡಿ ಸರ್ಕಾರಕ್ಕೆ ಹಸ್ತಾಂತರ ಮಾಡಿದ್ದಾರೆ ಹಾಗೂ ಸರ್ಕಾರಿ ಶಾಲೆಯನ್ನು ಉನ್ನತೀಕರಣ ಮಾಡಿದ್ದೇವೆ ಎಂದು ಹೇಳಿ ಅದೇ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಮರು ನಾಮಕರಣ ಮಾಡಿದ್ದಾರೆ. ಹೊಸ ಏಕಖ ಶಾಲೆಗಳನ್ನು ಪ್ರಾರಂಭ ಮಾಡಲು ಎನ್‌.ಜಿ.ಓ. ಗಳು ಕಾರ​‍್ೋರೆಟ್ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು, ಹಾಗೂ ಆಸಕ್ತಿ ದಾನಿಗಳು ಶಾಲೆಗಳನ್ನು ಪ್ರಾರಂಭ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹಾಗೂ ಹಲವು ಮಾನದಂಡಗಳನ್ನು ಸುತ್ತೋಲೆಯಲ್ಲಿ ತಿಳಿಸಿದೆ.   

           ವೀಲೀನದ ಹೆಸರಿನಲ್ಲಿ ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ ಒತ್ತಾಯ ಮಾಡುತ್ತದೆ.  ಹಾಗೂ ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕು ಹಾಗೂ ಖಾಲಿ ಇರುವ 59,000 ಶಿಕ್ಷಕರ ನೇಮಕಾತಿ ಮಾಡಿಕೊಳ್ಳಬೇಕು ಎಂದು ಎಸ್‌ಎಫ್‌ಐ ಆಗ್ರಹ ಮಾಡುತ್ತಿದೆ. ಈ ಸಂದರ್ಭದಲ್ಲಿ ಕಾವೇರಿ ಹರವಿಶೆಟ್ಟರ್, ತನುಜಾ  ನೆಗಳೂರು, ಸುದೀಪ್ ಲಮಾಣಿ , ಕಿರಣ್ ಎಲ್, ತನುಜಾ ನೆಗಳೂರ್, ಪ್ರದೀಪ್ ಲಮಾಣಿ, ಕಾವೇರಿ ಹರವಿಶೆಟ್ಟರ್, ಮಮತಾ ವಡ್ಡರ್, ಮೇಘ ಮೇಟಿ, ಸ್ವಪ್ನ ಕನವಳ್ಳಿ, ಭೀಮಮ್ಮ ವಡ್ಡರ್, ಸೋನಿಯಾ ನದಾಫ್, ವಂದನಾ ಬಾರ್ಕೆರ್, ಪ್ರಿಯಾಂಕ ಎಲ್, ಶ್ವೇತಾ ಎಲ್, ಕಾವೇರಿ ಪಾಟೀಲ್, ಪುಷ್ಪ ನಾಯಕ್, ನೇಹಾ ದೊಡ್ಡಮನಿ, ಸಂಜು ಭಜಂತ್ರಿ, ಹೇಮಂತ್ ಕುಮಾರ್, ವೆಂಕಟೇಶ ಹೆಚ್, ಪ್ರಜ್ವಲ್ ಅರಳೇಶ್ವರ, ಪೃಥ್ವಿ ವಡ್ಡರ್, ಪ್ರೀತಮ್ ಕಲಾಲ್, ವಿಶ್ವಜೀತ್ ಮಾಳಿ, ರವಿ ಕಲ್ಲಪ್ಪನವರ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.