9ನೇ ತರಗತಿಯ ವಿದ್ಯಾರ್ಥಿನಿ ಮೇಲಿನ ಲೈಂಗಿಕ ದೌರ್ಜನ್ಯ ಖಂಡಿಸಿ ಎಸ್‌ಎಫ್‌ಐ, ಡಿವೈಎಫ್‌ಐ ಪ್ರತಿಭಟನೆ
SFI, DYFI protest against sexual assault on 9th grade student
9ನೇ ತರಗತಿಯ ವಿದ್ಯಾರ್ಥಿನಿ ಮೇಲಿನ ಲೈಂಗಿಕ ದೌರ್ಜನ್ಯ ಖಂಡಿಸಿ ಎಸ್‌ಎಫ್‌ಐ, ಡಿವೈಎಫ್‌ಐ ಪ್ರತಿಭಟನೆ
ಹಾವೇರಿ 07: ಧರ್ಮಸ್ಥಳದ ಅಸಹಜ ಸಾವುಗಳ ಪ್ರಕರಣದ ಎಸ್.ಐ.ಟಿ ತನಿಖೆಯ ವರದಿಯನ್ನು ನಡೆಸುತ್ತಿದ ಸ್ವತಂತ್ರ ಪತ್ರಕರ್ತರ ಮೇಲೆ ಗೂಂಡಾ ವರ್ತನೆ ದಾಳಿಯನ್ನು ಖಂಡಿಸಿ, ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ, ಸೌಜನ್ಯ, ಪದ್ಮಲತಾ, ವೇದದಲ್ಲಿ ಸೇರಿದಂತೆ ಇನ್ನಿತರ ಅಸಹಜ ಸಾವುಗಳ ಪ್ರಕರಣವನ್ನು ಎಸ್.ಐ.ಟಿ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿ ಮತ್ತು ಗುತ್ತಲದ 9ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಶಿಕ್ಷಕನ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ಸಮಾನಮನಸ್ಕ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಪ್ರತಿಭಟನೆ ಉದ್ದೇಶಿಸಿ ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಧರ್ಮಸ್ಥಳದಲ್ಲಿ ಸ್ವತಂತ್ರ ಪತ್ರಕರ್ತರ ಮೇಲೆ ನಡೆದ ಗೂಂಡಾಗಳ ದಾಳಿಯನ್ನು ಜೀವಪರ ಮನಸುಳ್ಳವರೆಲ್ಲರೂ ತೀವ್ರವಾಗಿ ಖಂಡಿಸುತ್ತೇವೆ.ದಶಕಗಳಿಂದ ನಡೆದ ಅತ್ಯಾಚಾರ, ದೌರ್ಜನ್ಯ , ಕೊಲೆ, ಸುಲಿಗೆಗಳಿಂದ ಜನರು ತತ್ತರಿಸಿ ಹೋಗಿದ್ದಾರೆ.
ಸಾಕ್ಷಿ ಫಿರ್ಯಾದುದಾರರೊಬ್ಬರ ಹೇಳಿಕೆಯ ಮೇಲೆ ಉತ್ಕನನ ನಡೆಯುತ್ತಿದೆ. ಸತ್ಯ ಹೊರಬರುವ ಭಯದಿಂದ ಮಾದ್ಯಮದವರ ಮೇಲೆ ಹಲ್ಲೆ ನಡೆಸುವ ಹಲ್ಲೆ ದೌರ್ಜನ್ಯದಂತಹ ಕೃತ್ಯಗಳಿಗೆ ಮುಂದಾಗಿರುವುದರಲ್ಲಿ ಅನುಮಾನವೇ ಇಲ್ಲ. ಈ ಹಲ್ಲೆಯಲ್ಲಿ ನಾಲ್ವರು ಸ್ವತಂತ್ರ ಪತ್ರಕರ್ತರಿಗೆ ತೀವ್ರ ಗಾಯಗಳಾಗಿವೆ. ಒಬ್ಬ ಪತ್ರಕರ್ತ ಮಾರಣಾಂತಿಕ ದಾಳಿಗೆ ಒಳಗಾಗಿದ್ದಾನೆ. ಇದೊಂದು ಎಲ್ಲರೂ ಖಂಡಿಸಬೇಕಾದ ಘಟನೆಯಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮಾತ್ರವಲ್ಲ ಜೀವಹಾನಿಗೆ ಪ್ರಯತ್ನವೆಂದೇ ಹೇಳಬೇಕಾಗಿದೆ. ಇಂತಹ ಸಂದರ್ಭದಲ್ಲಿ ನ್ಯಾಯದ ಪರ, ಅಭಿವ್ಯಕ್ತಿ ಸ್ವಾತಂತ್ರ್ಯದ ಪರ, ಬದುಕುವ ಹಕ್ಕಿನ ಪರ ಮತ್ತು ಅತ್ಯಾಚಾರ, ದೌರ್ಜನ್ಯಕ್ಕೆ ಕೊಲೆಗೆ ಒಳಗಾದವರ ಪರ ನಿಲ್ಲಬೇಕಾದದ್ದು ಮನುಷ್ಯರಾದವರ ಕರ್ತವ್ಯವವಾಗಿದೆ. ರಾಜ್ಯ ಸರಕಾರ ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಕ್ರಮಕ್ಕೆ ಮುಂದಾಗಬೇಕು. ಮಾಧ್ಯಮದ ಮೇಲೆ ಮಾಡಿದ ಹಲ್ಲೆ ಅತ್ಯಂತ ಖಂಡನೀಯವಾಗಿದ್ದು. ಘಟನೆಗೆ ಕಾರಣರಾದವರು ಮತ್ತು ಪ್ರಚೋದನೆ ಮಾಡಿದವರನ್ನುತಕ್ಷಣವೇ ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಬೇಕೆಂದು ಎಂದರು.ಎಸ್‌ಎಫ್‌ಐ ಕಾಲೇಜ್ ಘಟಕ ಅಧ್ಯಕ್ಷೆ ಚೈತ್ರ ಕೊರವರ್ ಕಾರ್ಯದರ್ಶಿ ಗಂಗಾ ಯಲ್ಲಾಪುರ ಮಾತನಾಡಿ, ದೇಶ, ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿಯೂ ವಿದ್ಯಾರ್ಥಿನಿಯರು, ಮಹಿಳೆಯರ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯಗಳು ಆತ್ಯಾಚಾರ ನಡೆಯುತ್ತಿರುವುದು ಖಂಡನೀಯ. ಗುತ್ತಲದ 9ನೇ ತರಗತಿಯ ವಿದ್ಯಾರ್ಥಿನಿಯ ಮೇಲಿನ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ ಶಿಕ್ಷಕನ ಮೇಲೆ ಶಿಸ್ತು ಕ್ರಮ ಜರುಗಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಶಾಲಾ-ಕಾಲೇಜ್, ಹಾಸ್ಟೆಲ್ ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯಾರ್ಥಿನಿಯರು, ಮಹಿಳೆಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿದರು.ಬಿಎಸ್‌ಎಸ್ ಮಹಿಳಾ ರಾಜ್ಯಾಧ್ಯಕ್ಷೆ ಮಂಜುಳಾ ಎಸ್ ಅಕ್ಕಿ ಮಾತನಾಡಿ, ಧರ್ಮಸ್ಥಳದ ಪತ್ರಕರ್ತರ ಮೇಲೆ ನಡೆದ ಹಲ್ಲೆ ಖಂಡನೀಯ. ಅದೇ ಊರಿನ ಮಹಿಳೆಯರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಪತ್ರಕರ್ತರ ವರದಿ ಮಾಡುತ್ತಿದವರ ಮೇಲೆ ಹಲ್ಲೆ ಮಾಡುವುದು ಎಷ್ಟು ಸರಿ ಕೂಡಲೇ ಸರ್ಕಾರಗಳು ಮಧ್ಯೆ ಪ್ರವೇಶ ಮಾಡಬೇಕೆಂದರು.ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, ಧರ್ಮಸ್ಥಳದ ಪದ್ಮಲತಾ ವೇದವಲ್ಲಿ ಸೌಜನ್ಯ ಸೇರಿದಂತೆ ಇತರ ಎಲ್ಲ ನ್ಯಾಯಕ್ಕಾಗಿ ಕಾದಿರುವ ಸಾವುಗಳ ಸಮಗ್ರ ತನಿಖೆಯನ್ನು ಮಾಡಬೇಕು.
ದಮನಿತರಿಗಾಗಿ ಮೀಸಲಿಟ್ಟ ಭೂಮಿ ಬಗ್ಗೆ, ಭೂಮಿಗಾಗಿ ಅಮಾಯಕರ ಹತ್ಯೆ, ಅನೇಕರಿಗೆ ಹಿಂಸೆ ಮತ್ತು ಬಹಳಷ್ಟು ಜನರಿಗೆ ಬೆದರಿಸು ಓಡಿಸಿದ ಎಲ್ಲಾ ಪ್ರಕರಣಗಳನ್ನು ಎಸ್.ಐ.ಟಿ ತನಿಖೆ ನಡೆಸಬೇಕು. ಎಸ್.ಐ.ಟಿಯ ಕೆಲಸಗಳಿಗೆ ಅಡ್ಡಿಯಾಗದಂತೆ ಮತ್ತು ಸತ್ಯ ವನ್ನು ಹೊರಗೆ ತೆಗೆಯಲು ಬೇಕಾದ ಎಲ್ಲ ರಕ್ಷಣಾ ವ್ಯವಸ್ಥೆ ಗಳನ್ನು ಮಾಡಬೇಕೆಂದು ರಾಜ್ಯ ಸರಕಾರವನ್ನು ಒತ್ತಾಯಿಸುತ್ತೇವೆ ಎಂದರು.ಈ ಸಂದರ್ಭದಲ್ಲಿ ಕೆ.ಎಸ್.ಡಿ.ಎಫ್ ಮುಖಂಡರಾದ ತಿಪ್ಪೇಸ್ವಾಮಿ ಹೊಸಮನಿ, ಬಿಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿ ಎಸ್‌ಎಫ್‌ಐ ಮುಖಂಡರಾದ ಹಜರತ್ ಬಿ ಮಾತನಾಡಿದರು. ಮುಖಂಡರಾದ ಸುನೀಲ್ ಕುಮಾರ್ ಎಲ್, ಅರುಣ ಕುಮಾರ ನಾಗವತ್, ಫಕ್ಕರೇಶ್ ಮ್ಯಗಳಮನಿ, ಸುದೀಪ್ ಲಮಾಣಿ, ನವೀನ್ ರಾಥೋಡ್, ಚೇತನ್ ಲಮಾಣಿ ,ಮುತ್ತಪ್ಪ ಲಮಾಣಿ, ವಿಜಯ್ ಎನ್, ಸಂಜೀವ ಕೆ, ವಿನಾಯಕ್, ಶಿವು ,ರಾಹುಲ ಲಮಾಣಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 