27 ವರ್ಷದ ಯುವಕನಿಗೆ ಯಶಸ್ವಿಯಾಗಿ ಬೆಂಟಾಲ್ ಶಸ್ತ್ರಚಿಕಿತ್ಸೆ ಯುವಕನಿಗೆ ಹೊಸ ಬದುಕು ನೀಡಿದ ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್
SDM Narayana Heart Center successfully performs Bentall surgery on 27-year-old, giving him a new le
27 ವರ್ಷದ ಯುವಕನಿಗೆ ಯಶಸ್ವಿಯಾಗಿ ಬೆಂಟಾಲ್ ಶಸ್ತ್ರಚಿಕಿತ್ಸೆ ಯುವಕನಿಗೆ ಹೊಸ ಬದುಕು ನೀಡಿದ ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್
ಧಾರವಾಡ, ಆಗಸ್ಟ್ 08: ಪ್ರತಿಷ್ಠಿತ ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್ ಆಸ್ಪತ್ರೆಯು ಅತ್ಯಂತ ಸಂಕೀರ್ಣ ಟೈಪ್ ಎ ಆಯೋರ್ಟಿಕ್ ಡಿಸೆಕ್ಷನ್ ಎಂಬ ಸಮಸ್ಯೆ ಹೊಂದಿದ್ದ 27 ವರ್ಷದ ಯುವಕನೊಬ್ಬನಿಗೆ ಯಶಸ್ವಿಯಾಗಿ ಬೆಂಟಾಲ್ ಶಸ್ತ್ರಚಿಕಿತ್ಸೆ ನಡೆಸಿ ಅವರಿಗೆ ಹೊಸ ಜೀವನವನ್ನು ಒದಗಿಸಿದೆ. ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್ ನ ಹೃದಯ ಶಸ್ತ್ರಚಿಕಿತ್ಸಕ ತಂಡವು ಈ ಮಹತ್ವದ ಸಾಧನೆ ಮಾಡಿದ ಕೀರ್ತಿಗೆ ಪಾತ್ರವಾಗಿದೆ.
ಸಂಜಯ್ ಕುಮಾರ್ (ಹೆಸರು ಬದಲಾಯಿಸಲಾಗಿದೆ) ಎಂಬ ಯುವಕ ಎದೆನೋವು ಮತ್ತು ಉಸಿರಾಟದ ಸಮಸ್ಯೆಯ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಸಿಟಿ ಆಯೋರ್ಟಿಕ್ ಆಂಜಿಯೋಗ್ರಾಮ್ ನಡೆಸಲಾಗಿದ್ದು, ಅದರಲ್ಲಿ ಆಯೋರ್ಟಿಕ್ ರೂಟ್ ನಿಂದ ಶುರುವಾಗಿ ಅಸೆಂಡಿಂಗ್ ಆಯೋರ್ಟಾ, ಆರ್ಚ್ ಮತ್ತು ಡಿಸೆಂಡಿಂಗ್ ಆಯೋರ್ಟಾ ವರೆಗೆ ಸಮಸ್ಯೆ (ಇಂಟಿಮಲ್ ಫ್ಲ್ಯಾಪ್) ಇರುವುದು ಕಂಡುಬಂತು. ರೋಗಿಗೆ ಸ್ಟಾನ್‌ಫೋರ್ಡ್ ಟೈಪ್ ಎ ಮತ್ತು ಡಿಬೇಕಿ ಟೈಪ್ ಐಎ ಆಯೋರ್ಟಿಕ್ ಡಿಸೆಕ್ಷನ್ ಸಮಸ್ಯೆ ಇರುವುದು ದೃಢಪಟ್ಟಿತು. ಜೊತೆಗೆ ಸ್ಕ್ಯಾನ್ ಮಾಡಿದಾಗ ಎರಡೂ ಶ್ವಾಸಕೋಶಗಳಲ್ಲಿ ದ್ರವ ಸಂಗ್ರಹವಾಗಿರುವುದು ಕಂಡುಬಂದಿದ್ದು, ಅಕ್ಯೂಟ್ ಪಲ್ಮನರಿ ಎಡಿಮಾ ಇರುವುದಾಗಿ ಪತ್ತೆಹಚ್ಚಲಾಯಿತು. ಇದರಿಂದ ಪರಿಸ್ಥಿತಿ ಮತ್ತಷ್ಟು ಸಂಕೀರ್ಣವಾಯಿತು.
ತಕ್ಷಣವೇ ಕಾರ್ಯಪ್ರವೃತ್ತರಾದ ಕಾರ್ಡಿಯಾಕ್ ಸರ್ಜನ್ ಡಾ. ಸಾಯಿ ಸೂರಜ್ ಕೊಟೇರಾ ನೇತೃತ್ವದ ಶಸ್ತ್ರಚಿಕಿತ್ಸಕ ತಂಡವು ಬೆಂಟಾಲ್ ಶಸ್ತ್ರಚಿಕಿತ್ಸೆ ನಡೆಸುವ ನಿರ್ಧಾರ ತೆಗೆದುಕೊಂಡಿತು. ಇದೊಂದು ಉನ್ನತ ಮಟ್ಟದ ವಿಶೇಷ ಓಪನ್ ಹಾರ್ಟ್ ಸರ್ಜರಿಯಾಗಿದ್ದು, ಇದರಲ್ಲಿ ಆಯೋರ್ಟಾದ ರೋಗಗ್ರಸ್ತ ಭಾಗ ಮತ್ತು ಆಯೋರ್ಟಿಕ್ ವಾಲ್ವ್ ಅನ್ನು ಸಿಂಥೆಟಿಕ್ ಗ್ರಾಫ್ಟ್ ಮತ್ತು ಮೆಕ್ಯಾನಿಕಲ್ ವಾಲ್ವ್ ಮೂಲಕ ಬದಲಿಸಲಾಗುತ್ತದೆ. ಈ ಸಂದರ್ಭದಲ್ಲಿ 27 ಎಂಎಂ ಚಿತ್ರಾ ಮೆಕ್ಯಾನಿಕಲ್ ವಾಲ್ವ್ ಪ್ರಾಸ್ಥೆಸಿಸ್ ಮತ್ತು 28 ಎಂಎಂ ಡ್ಯಾಕ್ರಾನ್ ಕಾಂಡ್ಯೂಟ್ ಅನ್ನು ಬಳಸಲಾಯಿತು. ಜೊತೆಗೆ ಇಂಟ್ರಾ- ಆಯೋರ್ಟಿಕ್ ಬಲೂನ್ ಪಂಪ್ (ಐಎಬಿಪಿ) ಅನ್ನು ಕೂಡ ಬಳಸಲಾಯಿತು.
ಶಸ್ತ್ರಚಿಕಿತ್ಸೆಯ ನಂತರ ಕುಮಾರ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತು ಮತ್ತು ಕೆಲವೇ ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು.
ಈ ಶಸ್ತ್ರಚಿಕಿತ್ಸೆಯ ಕುರಿತು ಮಾತನಾಡಿರುವ ಡಾ. ಸಾಯಿ ಸೂರಜ್ ಕೊಟೇರಾ ಅವರು, “ಸಂಕೀರ್ಣ ಟೈಪ್ ಎ ಆಯೋರ್ಟಿಕ್ ಡಿಸೆಕ್ಷನ್ ಒಂದು ವೈದ್ಯಕೀಯ ತುರ್ತು ಸ್ಥಿತಿಯಾಗಿದ್ದು, ಸಮಯಕ್ಕೆ ಸರಿಯಾಗಿ ಸಮಸ್ಯೆ ಪತ್ತೆ ಹಚ್ಚಿ ತಕ್ಷಣ ಶಸ್ತ್ರಚಿಕಿತ್ಸೆ ನಡೆಸಿದ್ದರಿಂದ ಯುವಕನ ಜೀವ ಉಳಿಸುವುದು ಸಾಧ್ಯವಾಗಿದೆ. ಅವರು ಚೇತರಿಸಿಕೊಂಡಿರುವುದು ನಮಗೆ ಸಂತೋಷ ತಂದಿದೆ ಮತ್ತು ಅವರು ಮುಂದೆಯೂ ಆರೋಗ್ಯಕರವಾಗಿರುವ ಕುರಿತು ಆಶಾವಾದಿಗಳಾಗಿದ್ದೇವೆ” ಎಂದರು.
ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್ ನ ಫೆಸಿಲಿಟಿ ಡೈರೆಕ್ಟರ್ ಶಶಿಕುಮಾರ್ ಐ. ಪಟ್ಟಣಶೆಟ್ಟಿ ಅವರು ಮಾತನಾಡಿ, “ಡಾ. ಸಾಯಿ ಸೂರಜ್ ಕೊಟೇರಾ ಮತ್ತು ತಂಡದ ಈ ಅದ್ಭುತ ಸಾಧನೆ ನಿಜಕ್ಕೂ ಶ್ಲಾಘನೀಯ. ಈ ಸಂಕೀರ್ಣ ಪ್ರಕರಣವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಕ್ಕಾಗಿ ಅವರು ಅಭಿನಂದನಾರ್ಹರು. ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಅತ್ಯಾಧುನಿಕ, ಜೀವರಕ್ಷಕ ಹೃದಯ ಚಿಕಿತ್ಸೆ ಒದಗಿಸುವ ನಮ್ಮ ಬದ್ಧತೆಗೆ ಈ ಸಾಧೆಯು ಅತ್ಯುತ್ತಮ ಪುರಾವೆಯಾಗಿದೆ. ವಿಶ್ವ ದರ್ಜೆಯ ಫಲಿತಾಂಶಗಳನ್ನು ನೀಡುವ ನಮ್ಮ ತಂಡದ ಬಗ್ಗೆ ನಮಗೆ ಅತೀವ ಹೆಮ್ಮೆಯಿದೆ” ಎಂದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 