ಯೋಗದಲ್ಲಿ ಸಾಧನೆ ಮಾಡಿದ ಎಸ್.ಪೂಜಾ : ಅತಿ ಚಿಕ್ಕ ವಯಸ್ಸಿನಲ್ಲಿ ಸಾಧನೆಯ ಗರಿಮೆ
S. Pooja, who achieved success in yoga: The pinnacle of achievement at a very young age
ಕಂಪ್ಲಿ 13: ಮೂರ್ತಿ ಸಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಕಲಿಕಾ ಹಂತದಲ್ಲಿ ಯೋಗಪಟು ಕಂಪ್ಲಿಯ ಎಸ್.ಪೂಜಾ ಎಂಬ ವಿದ್ಯಾರ್ಥಿನಿ ಯೋಗ ಸೇರಿದಂತೆ ನಾನಾ ರಂಗದಲ್ಲಿ ಸಾಧನೆ ಮಾಡುವ ಮೂಲಕ ಸೈ ಎನ್ನಿಸಿಕೊಂಡಿದ್ದಾಳೆ. ಕಂಪ್ಲಿಯ 16ನೇ ವಾರ್ಡಿನಲ್ಲಿ ನೆಲೆಸಿರುವ ಎಸ್.ಶಿವಲಿಂಗಮ್ಮ ಯಮನಪ್ಪ ದಂಪತಿಯ ದ್ವಿತೀಯ ಸುಪತ್ರಿ ಪೂಜಾ ಎಂಬ ಪುಟ್ಟ ವಿದ್ಯಾರ್ಥಿನಿ ಮಕ್ಕಳಂತೆ ಇದ್ದರೂ, ಸಾಧನೆ ಮಾತ್ರ ಶಿಖರದಂತಿದೆ.
ಪ್ರತಿಭೆಗೆ ಬಡತನ ಸಾಟಿ ಇಲ್ಲ ಎಂಬಂತೆ ಮನೆಯಲ್ಲಿ ಬಡತನವಿದ್ದರೂ ಲೆಕ್ಕಿಸದೇ, ಇಚ್ಚಾಶಕ್ತಿಯೊಂದಿಗೆ ಶಾಲೆಯ ಕಲಿತಾ ಹಂತದಲ್ಲಿ ಮೊದಲ ಸ್ಥಾನದಲ್ಲಿದ್ದರೂ, ಯೋಗ ಸೇರಿದಂತೆ ಇನ್ನಿತರ ಕ್ಷೇತ್ರದಲ್ಲಿಯೂ ನಮ್ಮದೇ ಸ್ಥಾನ ಇರಬೇಕೆಂಬ ಹೆಬ್ಬಯಕೆಯೊಂದಿಗೆ ಸಾಧನೆಯ ಮೆಟ್ಟಿಲು ಏರುತ್ತಿದ್ದಾಳೆ. ಕಂಪ್ಲಿ ನಿವಾಸಿಯಾದರೂ ಹೊಸಪೇಟೆಯ ಎಪಿಜೆ ಅಬ್ದುಲ್ ಕಲಾಂ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ಏಳನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಇಲ್ಲಿನ ಕಲಿಕೆಯ ಜೊತೆ ಜೊತೆಗೆ ಯೋಗದಲ್ಲಿ ತನ್ನದೇ ಛಾಪು ಮೂಡಿಸಿದ್ದಾಳೆ. ಈ ಸಾಧನೆಯೊಂದಿಗೆ ಕಂಪ್ಲಿಗೆ ಕೀರ್ತಿ ತರುವ ಜೊತೆಗೆ ಶಿಕ್ಷಣ ಮತ್ತು ಯೋಗಪಟುಗಳ ಮನಗೆದ್ದಿದ್ದಾಳೆ. 2022ರಲ್ಲಿ ಬಳ್ಳಾರಿ ನಗರದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಡೆದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಸಾಧನೆಯ ಪಟಾಕಿ ಸಿಡಿಸಿದ್ದಾಳೆ.
ನಂತರ 2023ರಲ್ಲಿ ಕಲಬುರ್ಗಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಯೋಗದಲ್ಲಿ ಪ್ರಥಮ ಸ್ಥಾನದ ಸಾಧನೆ ಮಾಡಿದ್ದಾಳೆ. 2025ರ ಮೈಸೂರು ದಸರಾ(ಸಿಎಂ ಕಪ್)ಕ್ರೀಡಾಕೂಟದ ಯೋಗದಲ್ಲಿ ಅದ್ವಿತೀಯ ಸಾಧನೆಯೊಂದಿಗೆ ರಾಜ್ಯ ಮಟ್ಟದಲ್ಲಿ ಕೀರ್ತಿ ಪತಾಕಿ ಹಾರಿಸಿದ್ದಾಳೆ. ಹೀಗೆ ಹಲವು ಸಾಧನೆಗಳ ರಾಜ್ಯ ಮಟ್ಟದಲ್ಲಿ ಪಸರಿಸಿದ ಕೀರ್ತಿ ಪೂಜಾಳದ್ದಾಗಿದೆ. ಯೋಗ ಅಭ್ಯಾಸ ಪ್ರಾರಂಭ : ಕಂಪ್ಲಿ ನಗರದಲ್ಲಿರುವ ಯಕ್ಷಾ ಯೋಗ ಅಕಾಡೆಮಿಯಲ್ಲಿ 2022ರ ಜೂನ್ ತಿಂಗಳಲ್ಲಿ ಯೋಗ ಅಭ್ಯಾಸಕ್ಕೆ ಸೇರಿದ್ದಾಳೆ. ಸಂಸ್ಥಾಪಕಿ ಎಂ.ಶಾಮಲಮ್ಮ ಅವರ ತರಬೇತಿ ಹಾಗೂ ಮಾರ್ಗದರ್ಶನದಲ್ಲಿ ದಿನದಿಂದ ದಿನಕ್ಕೆ ಯೋಗಭ್ಯಾಸ ಮಾಡುತ್ತಾ, ಕಿರು ವಯಸ್ಸಿನಲ್ಲಿ ಸಾಧನೆ ಮಾಡಲು ಪ್ರೇರಣೆ ಸಿಕ್ಕಂತಾಗಿದೆ. ಮೊದಲ ಹೆಜ್ಜೆಯಲ್ಲೇ ಕಂಪ್ಲಿಯಲ್ಲಿ ನಡೆದ ಹಲವು ಸ್ಪರ್ಧೆಗಳಲ್ಲಿ ಸಾಧನೆಯೊಂದಿಗೆ ಪ್ರಶಸ್ತಿಗೆ ಭಾಜರಾಗಿದ್ದಾಳೆ. ನಂತರದಲ್ಲಿ ಗಣಿನಾಡು ಕಣ್ಮಣಿ ಪ್ರಶಸ್ತಿ, ಸಾಧಕ ರತ್ನ ಪ್ರಶಸ್ತಿ, ಕಂಪ್ಲಿ ಕಲಾರತಿ ಪ್ರಶಸ್ತಿ, ಹೀಗೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾಳೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 