ಎಸ್. ಆಯ್. ಭಾವಿಕಟ್ಟಿ ಇವರಿಗೆ ‘ಬೀಳ್ಕೊಡುಗೆ-ಅಭಿನಂದನಾ ಸಮಾರಂಭ
S. A. Bhavikatti's 'seed-congratulations ceremony'
ಎಸ್. ಆಯ್. ಭಾವಿಕಟ್ಟಿ ಇವರಿಗೆ ‘ಬೀಳ್ಕೊಡುಗೆ-ಅಭಿನಂದನಾ ಸಮಾರಂಭ
ಧಾರವಾಡ 30: ಕರ್ನಾಟಕ ವಿದ್ಯಾವರ್ಧಕ ಸಂಘವು, ದಿನಾಂಕ : 31-7-2025 ರಂದು ಗುರುವಾರ ಸಂಜೆ 6 ಗಂಟೆಗೆ ಸಂಘದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಕಚೇರಿ ಅಧೀಕ್ಷಕರಾಗಿ ಸೇವಾ ನಿವೃತ್ತಿ ಹೊಂದಿದ ಎಸ್. ಆಯ್. ಭಾವಿಕಟ್ಟಿ ಇವರಿಗೆ ‘ಬೀಳ್ಕೊಡುಗೆ-ಅಭಿನಂದನಾ ಸಮಾರಂಭ’ ಏರಿ್ಡಸಿದೆ. ಧಾರವಾಡದ ಹು. ಧಾ. ಮ. ಪಾಲಿಕೆ ವಿಶ್ರಾಂತ ಅಭೀಯಂತರರು ಎಸ್. ಬಿ. ಗುತ್ತಲ ಹಾಗೂ ಧಾರವಾಡದ ಹು. ಧಾ. ಮ. ಪಾಲಿಕೆ ಮಾಜಿ ಕಾರ್ೋರೇಟರ್ ಹಾಗೂ ಹಣಕಾಸು ಮತ್ತು ತೆರಿಗೆ ಸ್ಥಾಯಿ ಸಮಿತಿ ಮಾಜಿ ಚೇರಮನ್ ಸಿ. ಎಸ್. ಪಾಟೀಲ ಮತ್ತು ಧಾರವಾಡ ಕ.ವಿ.ವ ಸಂಘದ ಗೌರವ ವ್ಯವಸ್ಥಾಪಕ ಶಿ. ಮ. ರಾಚಯ್ಯನವರ ಅಭಿನಂದನಾ ನುಡಿಗಳನ್ನಾಡುವರು. ಧಾರವಾಡ ಕ.ವಿ.ವ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಅಧ್ಯಕ್ಷತೆ ವಹಿಸುವರು. ಸಾಹಿತಿಗಳು, ಚಿಂತಕರು, ಕಲಾವಿದರು, ವಿದ್ಯಾರ್ಥಿಗಳು, ತಾಯಂದಿರು, ಸಂಘದ ಆಜೀವ ಸದಸ್ಯರು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಕರ್ನಾಟಕ ವಿದ್ಯಾವರ್ಧಕ ಸಂಘದ ಅಧೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಲಿರುವ
ಎಸ್. ಆಯ್. ಭಾವಿಕಟ್ಟಿ ಕಿರು ಪರಿಚಯ
ಧಾರವಾಡ ಶಹರ ಮಾಳಾಪೂರದ ಕೃಷಿಕ ಮನೆತನದಲ್ಲಿ ದಿನಾಂಕ: 25-7-1965 ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣ ಮುಗಿಸಿ ಅಟೆಂಡರ್ ಅಂತಾ 1-1-1981 ರಂದು ನೇಮಕಾತಿ ಹೊಂದಿ, ದ್ವಿತೀಯ ದರ್ಜೆ ಸಹಾಯಕರಾಗಿ, ಪ್ರಥಮ ದರ್ಜೆ ಸಹಾಯಕರಾಗಿ, ನಂತರ ಕಚೇರಿ ಅಧೀಕ್ಷಕರಾಗಿ ಬಡ್ತಿ ಹೊಂದಿ ಸಂಘದಲ್ಲಿ ಸುದೀರ್ಘವಾಗಿ 44 ವರ್ಷ 7 ತಿಂಗಳು ಸೇವೆ ಸಲ್ಲಿಸಿದ್ದಾರೆ. ಸೇವೆಯಲ್ಲಿರುವಾಗಲೇ 44 ವರ್ಷ 7, ಎಂ.ಎ. ರಾಜಕೀಯಶಾಸ್ತ್ರದಲ್ಲಿ ಪದವಿ ಪಡೆದುಕೊಂಡು ಉಳಿದವರಿಗೆ ಅನುಕರಣೀಯವಾಗಿದ್ದಾರೆ. ಕರ್ನಾಟಕ ವಿದ್ಯಾವರ್ಧಕ ಸಂಘವು ಸಂಘಟಿಸುತ್ತಾ ಬಂದ ಎಲ್ಲ ಕಾರ್ಯಕ್ರಮಗಳ ಸಂಯೋಜನೆಗೊಳಿಸುವಲ್ಲಿ ಅತ್ಯಂತ ಸಮರ್ಥವಾಗಿ ಕಾರ‌್ಯಮಾಡಿ, ಸಂಘದ ಕಾರ್ಯಕ್ರಮಗಳ ಘನತೆ ಹೆಚ್ಚಿಸುವಂತೆ ಸೇವೆ ಸಲ್ಲಿಸಿದ್ದಾರೆ. ಇವರ ಸೇವಾ ಅವಧಿಯಲ್ಲಿ ಪ್ರಾಮಾಣಿಕತೆಯಿಂದ ನೀಡಿದ ಎಲ್ಲ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಇದೇ ತಿಂಗಳ 31 ರಂದು ಸೇವಾ ನಿವೃತ್ತಿ ಹೊಂದುತ್ತಿದ್ದು, ಇವರ ನಿವೃತ್ತಿಯ ಜೀವನದ ಬದುಕು ಇನ್ನಷ್ಟು ಅರ್ಥಪೂರ್ಣವಾಗಿರಲಿ ಎಂದು ಸಂಘದ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಬಳಗ ಹೃದಯಾಳದಿಂದ ಶುಭ ಹಾರೈಸಿ ಬೀಳ್ಕೊಡುವ ಈ ಕಾರ್ಯಕ್ರಮದಲ್ಲಿ ಬಂದು ಭಾಗವಹಿಸಿ, ಶುಭಕೋರಿ....
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 