ವಿದ್ಯಾಥರ್ಿಗಳಿಗೆ ಗ್ರಾಮೀಣ ಜೀವನ ದರ್ಶನ
ಲೋಕದರ್ಶನ ವರದಿ
ಶಿಗ್ಗಾವಿ04: ಇಂದಿನ ಮಕ್ಕಳಿಗೆ ಗ್ರಾಮೀಣ ಬದುಕಿನ ಪರಿಚಯ ಮಾಡಿಸಬೇಕಾದರೆ ಒಮ್ಮೆ ' ಉತ್ಸವ ರಾಕ್ ಗಾರ್ಡನ್ಗೆ ಭೇಟಿ ನೀಡಬೇಕು ಎಂದು ಚಿಕ್ಕೋಡಿ ಸರಕಾರಿ ಉದರ್ು ಮಾಡಲ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ವೈ.ಎಂ.ಪಟೇಲ್ ಹೇಳಿದರು.
ಶೈಕ್ಷಣಿಕ ಪ್ರವಾಸದನ್ವಯ ತಮ್ಮ ಶಾಲಾ ವಿದ್ಯಾಥರ್ಿಗಳು ಹಾಗೂ ಸಹ ಶಿಕ್ಷಕರೊಂದಿಗೆ ಗೊಟಗೋಡಿಯ ರಾಕ್ ಗಾರ್ಡನ್ ಹಾಗೂ ಇಂಡಿಯನ್ ಗಾರ್ಡನ್ಗೆ ಭೇಟಿ ನೀಡಿದ ಸಂದರ್ಭ ಮಾತನಾಡಿದರು.
ಇಲ್ಲಿನ ಸಹಸ್ರಾರು ಶಿಲ್ಪಗಳು ವಿದ್ಯಾಥರ್ಿಗಳನ್ನು ರೋಮಾಂಚನಗೊಳಿಸಿದವು.
ಅಲ್ಲದೇ ಗ್ರಾಮೀಣ ಸಾಮ್ರಾಜ್ಯದ ನೈಜ ದೃಶ್ಯಗಳ ಬಗ್ಗೆ ತಮ್ಮೊಂದಿಗಿದ್ದ ಶಿಕ್ಷಕರಿಂದ ಅಗತ್ಯ ಮಾಹಿತಿ ಪಡೆದುಕೊಳ್ಳುವಂತೆ ಮಾಡಿದವು. ಇದು ಅಕ್ಷರಶ: ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಪ್ರವಾಸಿ ಕೇಂದ್ರ ಎಂದು ಅಭಿಪ್ರಾಯಪಟ್ಟರು.
ರಾಕ್ ಗಾರ್ಡನ್ನ ಅನುಭವ ಸ್ಮರಣೀಯವಾದುದು ಎಂದ ದೈಹಿಕ ಶಿಕ್ಷಕ ಎ.ಎ.ಶೇಖ್, ಇಂಡಿಯನ್ ಗಾರ್ಡನ್ನ ಸಾಹಸಮಯ ಆಟಗಳು, ಮಳೆ ಸ್ನಾನ, ಎತ್ತಿನ ಗಾಡಿ-ಟಾಂಗಾ ಸವಾರಿ, ದೋಣಿ ವಿಹಾರ ಹಾಗೂ ನೀರಿನ ಆಟಗಳು ಮಕ್ಕಳನ್ನು ಭರಪುರ ರಂಜಿಸಿದವು ಎಂದು ವಿವರಿಸಿದರು. ಶಿಲ್ಪಗಳ ರೂಪದಲ್ಲಿರುವ ಗ್ಯಾಲರಿಗಳನ್ನು ನೋಡಿದ ವಿದ್ಯಾಥರ್ಿಗಳು, ಒಂದು ಕ್ಷಣ ಹೌಹಾರಿದರಲ್ಲದೆ, ಅವುಗಳನ್ನು ಮುಟ್ಟಿ ನೋಡುವ ಇಂಗಿತ ವ್ಯಕ್ತಪಡಿಸಿದರು ಎಂದು ಸಹ ಶಿಕ್ಷಕರು ಹೇಳಿದರು.
ಇಲ್ಲಿ ಗಾಂಧೀಜಿಯವರ ಸುಭೀಕ್ಷ ಗ್ರಾಮೀಣ ಸಾಮ್ರಾಜ್ಯದ ಕನಸು ನನಸಾಗಿದೆ ಎನ್ನುವಷ್ಟರ ಮಟ್ಟಿಗೆ ಶಿಲ್ಪಗಳು ನೈಜತೆ ಹೊಂದಿವೆ ಎಂದು ವಿದ್ಯಾಥರ್ಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 