ಕೇರೂರ ರಸ್ತೆ ಅಭಿವೃದ್ಧಿಗೆ 1.40 ಕೋಟಿ ರೂ ಅನುದಾನ: ಹುಕ್ಕೇರಿ

ಕೇರೂರ ರಸ್ತೆ ಅಭಿವೃದ್ಧಿಗೆ 1.40 ಕೋಟಿ ರೂ ಅನುದಾನ: ಹುಕ್ಕೇರಿ Rs 1.40 crore grant for Kerur road development: Hukkeri

ಕೇರೂರ ರಸ್ತೆ ಅಭಿವೃದ್ಧಿಗೆ 1.40 ಕೋಟಿ ರೂ ಅನುದಾನ: ಹುಕ್ಕೇರಿ 


ಚಿಕ್ಕೋಡಿ 05: ತಾಲೂಕಿನ ಕೇರೂರ ಗ್ರಾಮದ ಹಳಕೇರಿ ತೋಟಪಟ್ಟಿ ಪ್ರದೇಶದ ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ರಸ್ತೆಯ ಅಭಿವೃದ್ಧಿಗಾಗಿ 1.40 ಕೋಟಿ ರೂ ಅನುದಾನ ಮಂಜೂರಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹೇಳಿದರು. 

ಶುಕ್ರವಾರ ತಾಲೂಕಿನ ಕೇರೂರ ಗ್ರಾಮ ವ್ಯಾಪ್ತಿಯ ಹಳಕೇರಿ ಜನವಸತಿ ಪ್ರದೇಶದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ರೈತರ ಬಹುದಿನಗಳ ಬೇಡಿಕೆಯಾಗಿದ್ದ ಈ ರಸ್ತೆಗೆ ಸರ್ಕಾರದ ಅನುದಾನ ದೊರೆತಿರುವುದಾಗಿ ಅವರು ತಿಳಿಸಿ, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ರೈತರಿಗೂ ಗ್ರಾಮಸ್ಥರಿಗೂ ಉಪಯೋಗವಾಗುವ ರೀತಿಯಲ್ಲಿ ಅಭಿವೃದ್ಧಿ ಕಾರ್ಯ ನಡೆಯಬೇಕು ಎಂದು ಹೇಳಿದರು. 

ಹಳಕೇರಿ ಜನವಸತಿ ಪ್ರದೇಶದಲ್ಲಿ ಏನಾದರೂ ಕೆಲಸದ ಬಾಕಿ ಕುರಿತು ಮಹಿಳೆಯರನ್ನು ಕೇಳಿದಾಗ ಈ ಜನವಸತಿ ಪ್ರದೇಶದಲ್ಲಿ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಮನವಿ ಮಾಡಿದಾಗ ಹೆಸ್ಕಾಂ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗುತ್ತದೆಂದು ಪ್ರಕಾಶ ಹುಕ್ಕೇರಿ ಭರವಸೆ ನೀಡಿದರು. 

ಈ ಸಂದರ್ಭದಲ್ಲಿ ದುರೀಣ ಮಲ್ಲಿಕಾರ್ಜುನ ಪಾಟೀಲ, ಚನ್ನಗೌಡಾ ಪಾಟೀಲ, ಗ್ರಾಮ ಪಂಚಾಯತ್ ಅಧ್ಯಕ್ಷ ವಿರೇಂದ್ರ ಪಾಟೀಲ, ಮಾಜಿ ಜಿ.ಪಂ. ಸದಸ್ಯ ಮಲ್ಲಪ್ಪಾ ಬಾಗಿ, ಪಿ.ಕೆ.ಪಿ.ಎಸ್‌. ಅಧ್ಯಕ್ಷ ಬಿ.ಡಿ. ಪಾಟೀಲ, ಗ್ರಾ.ಪಂ. ಸದಸ್ಯರಾದ ಸುರೇಶ ಹೆಗಡೆ, ಚಿದಾನಂದ ಮಾಳಿ, ಮಹೇಶ ಪಾಟೀಲ, ಅಪ್ಪಾಸಾಬ ಪಾಟೀಲ, ಸಂತೋಷ ವಡ್ಡರ, ನೀರಾವರಿ ಇಲಾಖೆಯ ಅಭಿಯಂತರ ಮುಕುಂದ ಶಿಂಧೆ, ಗುತ್ತಿಗೆದಾರ ಕೋಟಿವಾಲೆ, ಸುರೇಶ ಬಾಡಕರ ಹಾಗೂ ರವಿ ಪಾಟೀಲ ಉಪಸ್ಥಿತರಿದ್ದರು.