ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ, ಅಭಿಯಂತರರ ಪಾತ್ರ ಮಹತ್ವ: ನಾಗರಮುನ್ನೋಳ್ಳಿ

ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ, ಅಭಿಯಂತರರ ಪಾತ್ರ ಮಹತ್ವ:  ನಾಗರಮುನ್ನೋಳ್ಳಿ Role of teachers, engineers important in nation building: Nagaramunnolli

ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ, ಅಭಿಯಂತರರ ಪಾತ್ರ ಮಹತ್ವ:  ನಾಗರಮುನ್ನೋಳ್ಳಿ  

ಬೆಳಗಾವಿ 15: ಒಂದು ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಎಷ್ಟು ಮಹತ್ವವೋ ಅಷ್ಟೇ ಪ್ರಾಮುಖ್ಯತೆ ಅಭಿಯಂತರರಿಗೂ ಸಲ್ಲುತ್ತದೆ ಏಕೆಂದರೆ ದೇಶದ ಅಭಿವೃದ್ಧಿಗೆ ಅಭಿಯಂತರರು ಸಾಕ್ಷಿಯಾದರೆ ಅಂತಹ ವ್ಯಕ್ತಿಗಳನ್ನು ಸೃಷ್ಠಿಸುವಲ್ಲಿ ಶಿಕ್ಷಕರ ಕೊಡುಗೆ ಅಪಾರ ಆದ್ದರಿಂದ ಒಂದು ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರು ಮತ್ತು ಅಭಿಯಂತರರ ಪಾತ್ರ ಮಹತ್ವದ್ದು ಎಂದು ಬೆಳಗಾವಿಯ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಅಧ್ಯಕ್ಷ ಪ್ರಭಾಕರ ಶಂಕರ ನಾಗರಮುನ್ನೋಳ್ಳಿ ಅವರು ಹೇಳಿದರು. ಎಸ್ ಜಿ ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ  ದಿ. 15ರಂದು ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ಮತ್ತು ಅಭಿಯಂತರರ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.  ಇನ್ನೋರ್ವ ಅತಿಥಿ ಸಂದೀಪ್ ಪಿ. ಬಾಗೇವಾಡಿ ಅವರು ನಾವು ಜೀವಿಸುವುದಕ್ಕೆ ಸಂಪಾದಿಸಬೇಕೆ ಹೊರತು ಸಂಪಾದನೆಯೇ ಜೀವನವಾಗಬಾರದು. ಒಬ್ಬ ಯಶಸ್ಸಿ ನಾಯಕನಾಗಬೇಕಾದರೆ ಆತನಲ್ಲಿ ಜ್ಞಾನ, ಗೌರವ ಮನೋಭಾವನೆ, ಸೃಜನಶೀಲತೆ, ಮಾರ್ಗದರ್ಶನ ಹಾಗೂ ಸ್ಫೂರ್ತಿದಾಯಕ ಗುಣಗಳಿರಬೇಕು ಎಂದು ಭವಿಷ್ಯದ ಅಭಿಯಂತರರಿಗೆ ಪ್ರೇರಣೆ ನೀಡಿದರು.   ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಎಫ್‌.ವ್ಹಿ.ಮಾನ್ವಿ ಈ ದಿನದ ಕುರಿತು ಮಹಾನ್ ಶಿಕ್ಷಣ ತಜ್ಞ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಮತ್ತು ಭಾರತ ಕಂಡ ಮಹಾಮೇಧಾವಿ ಕನ್ನಡಿಗರ ಹೆಮ್ಮೆಯ ಬಾರತರತ್ನ ಸರ್‌.ಎಮ್‌.ವಿಶ್ವೇಶ್ವರಯ್ಯಾ ಹಾಗೂ ಅವರ ದಾರಿಯಲ್ಲೇ ನಡೆದ ನಮ್ಮ ಸಂಸ್ಥೆಯ ಎಸ್‌.ಜಿ.ಬಾಳೇಕುಂದ್ರಿ ಅವರನ್ನು ಸ್ಮರಿಸುತ್ತಾ ಶಿಕ್ಷಕರು ಮತ್ತು ಅಭಿಯಂತರರಿಗೆ ಶುಭಾಶಯ ಕೋರಿದರು. ಪ್ರಾಚಾರ್ಯ ಡಾ. ಬಿ.ಆರ್‌.ಪಟಗುಂದಿ ಸ್ವಾಗತ ನುಡಿಗಳನ್ನಾಡುವುದರ ಮೂಲಕ ಒಂದು ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಮತ್ತು ಅಭಿಯಂತರರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.  ಮಹಾವಿದ್ಯಾಲಯದ ಎಲ್ಲಾ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.ಪ್ರೋ. ಜಯಶ್ರೀ ವಂದಿಸಿದರು.