ಹನುಮಂತಪ್ಪ ಬದ್ರಿ ಅವರ ಮನೆಯವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

Road development works started up to Hanumanthappa Badri's house


ಹನುಮಂತಪ್ಪ ಬದ್ರಿ ಅವರ ಮನೆಯವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ  

ಹಾನಗಲ್ 29 : :ತಾಲೂಕಿನ ಆಡೂರು ಗ್ರಾಮದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆಯಡಿ 31 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು. 

  ಗ್ರಾಮದ ಪಾಂಡುರಂಗ ದೇವಸ್ಥಾನದಿಂದ ಇಬ್ರಾಹಿಂ ಧಾರವಾಡ ಅವರ ಮನೆಯವರೆಗೆ, ಶಂಕ್ರಣ್ಣ ಹಿರೇಮಠ ಅವರ ಮನೆಯಿಂದ ಸಣ್ಣನಿಂಗಮ್ಮನವರ ಅವರ ಮನೆಯವರೆಗೆ, ಗಂಗಾಧರ ಅಂಗಡಿ ಅವರ ಮನೆಯಿಂದ ಬೀರಲಿಂಗೇಶ್ವರ ದೇವಸ್ಥಾನದವರೆಗೆ, ಅಕ್ಬರ್ ಹರಣಿ ಅವರ ಮನೆಯಿಂದ ಹನುಮಂತಪ್ಪ ಬದ್ರಿ ಅವರ ಮನೆಯವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. 

  ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯ ಸರಕಾರ ಪ್ರತಿಯೊಂದು ಕುಟುಂಬಗಳಿಗೂ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಇದರ ಜೊತೆಗೆ ಜನತೆಯ ನೆಮ್ಮದಿಯ ಜೀವನಕ್ಕೆ ರಸ್ತೆ, ಸಮರ​‍್ಕ ಕುಡಿಯುವ ನೀರು, ವಿದ್ಯುತ್ ಪೂರೈಕೆ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕಾಳಜಿ ವಹಿಸಿದೆ ಎಂದು ಶಾಸಕ ಮಾನೆ ತಿಳಿಸಿದರು. 

     ಗ್ರಾಪಂ ಅಧ್ಯಕ್ಷ ಮಾರ್ತಾಂಡಪ್ಪ ಬಾರ್ಕಿ, ಜಿಪಂ ಮಾಜಿ ಸದಸ್ಯ ನಿಂಗಪ್ಪ ಪೂಜಾರ, ತಾಪಂ ಮಾಜಿ ಅಧ್ಯಕ್ಷ ಶಿವಬಸಪ್ಪ ಪೂಜಾರ, ಗ್ರಾಪಂ ಮಾಜಿ ಅಧ್ಯಕ್ಷ ನಾಗಪ್ಪ ಪೋಲೇಶಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಮುಖಂಡರಾದ ಭರಮಣ್ಣ ಶಿವೂರ, ಬಾಬು ನಿಕ್ಕಂ, ಸೋಮಣ್ಣ ಗೋಣಗೇರ, ರೇಖಾ ದೇವಗಿರಿ, ಅಮಿನಾಬಿ ನಾಯ್ಕರ್, ನಿಂಗಪ್ಪ ಮೂಕಜ್ಜನವರ, ಬಸವರಾಜ ಡುಮ್ಮನವರ, ಫಕ್ಕೀರವ್ವ ಬಾರ್ಕಿ, ಬಾಬುಲಾಲ್ ನಾಯ್ಕರ್, ಮೈಲಾರಿ ಬಾರ್ಕಿ ಸೇರಿದಂತೆ ಗ್ರಾಪಂ ಸದಸ್ಯರು,ಗ್ರಾಮಸ್ಥರು ಉಪಸ್ಥಿತರಿದ್ದರು.