ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
Road development works launched
ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಕಾಗವಾಡ 17: ಕ್ಷೇತ್ರದಲ್ಲಿ ಪ್ರವಾಹ ಪೀಡಿತ ಗ್ರಾಮಗಳ ವೀಕ್ಷಣೆಗೆ ಮುಖ್ಯಮಂತ್ರಿಗಳು ಬಂದಾಗ ಸಂಪರ್ಕ ಕಡಿತಗೊಳ್ಳುವ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಕೇಳಲಾಗಿ ಮುಖ್ಯಮಂತ್ರಿಗಳು ಈಗ 10 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿದ್ದು ,ಪ್ರವಾಹ ಸಂದರ್ಭದಲ್ಲಿ ಜನಜಾನುವಾರುಗಳು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಲು ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ರಾಜು ಕಾಗೆ ಹೇಳಿದರು.ಅವರು ಶುಕ್ರವಾರ ಮತಕ್ಷೇತ್ರದ ಉಗಾರ ಖುರ್ದ ಪುರಸಭೆ ವ್ಯಾಪ್ತಿಯ ಒಂದು ಕೋಟಿ ರೂಪಾಯಿ ಅನುದಾನದಲ್ಲಿ ಉಗಾರ ಐನಾಪೂರ ಬಾರಿಗಡ್ಡೆ ರಸ್ತೆ ಮತ್ತು ಕೃಷ್ಣಾ ಕಿತ್ತೂರದಲ್ಲಿ ಎರಡು ಕೋಟಿ ರೂಪಾಯಿ ಅನುದಾನದ ಜಾಕವೆಲ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಮಾತನಾಡುತ್ತಿದ್ದರು.ಅವರು ಮುಂದೆ ಮಾತನಾಡುತ್ತಾ,ಸುಮಾರು ವರ್ಷಗಳಿಂದ ಈ ಎರಡೂ ರಸ್ತೆ ಅಭಿವೃದ್ಧಿಗೆ ಇಲ್ಲಿಯ ಸಾರ್ವಜನಿಕರ ಬೇಡಿಕೆಯನ್ನು ಈಗ ಪೂರೈಸಲಾಗಿದ್ದು,ಇದರಿಂದ ಇಲ್ಲಿಯ ಕುಟುಂಬಗಳಿಗೆ ತಮ್ಮ ದೈನಂದಿನ ಕೆಲಸ ಕಾರ್ಯ ಹಾಗೂ ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಪ್ರಯೋಜನವಾಗಲಿದೆ ಎಂದರು.ಈ ವೇಳೆ ತಾಪಂ ಇಒ ವೀರಣ್ಣಾ ವಾಲಿ,ವಿನಾಯಕ ಕಾಂಬ್ಳೆ,ಸಂಜು ಸಲಗರೆ,ಗ್ರಾಪಂ ಮಾಜಿ ಅಧ್ಯಕ್ಷ ರಾಜೇಂದ್ರ ಕಾಂಬಳೆ,ವಕೀಲ ರಾಹುಲ ಕಟಗೇರಿ,ಪ್ರೇಮ ಬಾಳೊಜಿ,ಅಜಿತ ಕಟಗೇರಿ,ಯಲ್ಲಪ್ಪ ಗಸ್ತಿ,ಕೃಷ್ಣಾ ಸಕ್ಕರೆ ಕಾರ್ಖಾನೆ ನಿರ್ದೆಶಕ ವಿಶ್ವನಾಥ ಪಾಟೀಲ್,ಯಮನಪ್ಪ ಪಾಟೀಲ್, ವಿಧ್ಯಾಧರ ಸುತಾರ,ಅಶೋಕ ಇಚಲಕರಂಜಿ,ಸೇರಿದಂತೆ ಅನೇಕರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 