ರಿವಾರ್ಡ್ ಯೋಜನೆಯಿಂದ 4800 ರೈತ ಕುಟುಂಬಗಳಿಗೆ ಅನುಕೂಲ ಮಣ್ಣು ನೀರು ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ
Reward scheme benefits 4800 farmer families. Soil and water conservation is everyone's top priority
ಮುಳಗುಂದ28 : ಮಣ್ಣು ನೀರು ಸಂರಕ್ಷಣೆ ಪ್ರತಿಯೊಬ್ಬ ವ್ಯಕ್ತಿಯ ಆದ್ಯ ಕರ್ತವ್ಯವಾಗಿದ್ದು ಪ್ರತಿಯೊಬ್ಬ ರೈತರು ರಿವಾರ್ಡ್ ನಂತ ರೈತಪರ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ನೀಲಗುಂದ ವಲಯದಲ್ಲಿ ಕಣವಿ ಹೊಸೂರು ಮುಳಗುಂದ ನೀಲಗುಂದ ಸೇರಿದಂತೆ ಸುತ್ತಲ ಗ್ರಾಮಗಳಲ್ಲಿ ಅನುಷ್ಠಾನಗೊಂಡ ರಿವಾರ್ಡ್ ಯೋಜನೆಯಿಂದ 4,800 ಕ್ಕೂ ಅಧಿಕ ರೈತ ಕುಟುಂಬಗಳಿಗೆ ಯೋಜನೆಯ ನೆರವಾಗಿದೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್ ಕೆ ಪಾಟೀಲ ಹೇಳಿದರು.ಗದಗ ತಾಲ್ಲೂಕಿನ ಮುಳಗುಂದ ಪಟ್ಟಣದ ಎಸ್ ಜೆಜೆಮ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾಡಳಿತ, ಜಿಪಂ, ಜಲಾನಯನ ಇಲಾಖೆ ಕೃಷಿ ಇಲಾಖೆ, ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ರಿವಾರ್ಡ್ ಯೋಜನೆ ಲೋಕಾರೆ್ಣ ಹಾಗೂ ರೈತರಿಗೆ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂದಾಜು 16 ಕೋಟಿಗಳ ವೆಚ್ಚದ ಯೋಜನೆಯಲ್ಲಿ ಒಟ್ಟು 10 ಕೋಟಿ 51 ಲಕ್ಷ ರೂಗಳ ಕಾಮಗಾರಿ ರಿವಾರ್ಡ್ ಯೋಜನೆ ಪೂರ್ಣಗೊಂಡಿದ್ದು ಇನ್ನುಳಿದ 5 ಕೋಟಿ ರೂಗಳ ವೆಚ್ಚದಲ್ಲಿ ವಿವಿಧ ಕೃಷಿ ಆಧಾರಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ಸಿದ್ಧಪಡಿಸಲು ಸೂಚಿಸಲಾಗಿದೆ. ಒಟ್ಟು 14500 ಎಕರೆ ಭೂಮಿಯಲ್ಲಿ ವಿವಿಧ ಚಟುವಟಿಕೆಗಳನ್ನು ಕೈಗೊಂಡಿದ್ದು ಬದು ನಿರ್ಮಾಣ, ಚೆಕ್ ಡ್ಯಾಮ್ ಕೃಷಿಹೊಂಡ ಹಾಗೂ ಸ್ವಸಹಾಯ ಸಂಘಗಳಿಗೆ 50,000 ರೂಗಳ ಗಳಂತೆ ಸುತ್ತಿನದಿ ವಿತರಿಸಲಾಗಿದೆ ಎಂದರು.ಗ್ರಾಮೀಣ ಭಾಗದ ರೈತರಿಗೆ ರಿವಾರ್ಡ್ ಒಂದು ಯೋಜನೆ ಕೃಷಿ ಯಡಿಕೆ ವಿಶೇಷ ಆಸಕ್ತಿ ಹಾಗೂ ಸೌಲಭ್ಯಗಳನ್ನು ದೊರಕಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಪ್ರಾಮಾಣಿಕವಾಗಿ ಕಾರ್ಯಕ್ರಮ ಅನುಷ್ಠಾನಗೊಳಿಸಿದ್ದು ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗಿದೆ ಎಂದರು.
ಅಂತರಾಷ್ಟ್ರೀಯ ಜಲತಜ್ಞ ರಾಜೇಂದ್ರ ಸಿಂಗ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಇಂದು ಮಣ್ಣು ಹಾಗೂ ನೀರಿನ ಸಂರಕ್ಷಣೆ ಪ್ರತಿಯೊಬ್ಬರಿಗೂ ರಕ್ಷಿಸುವುದು ಅತಿ ಮುಖ್ಯವಾಗಿದ್ದು ಕರ್ನಾಟಕದಲ್ಲಿ ಮಣ್ಣು ನೀರು ಸಂರಕ್ಷಣ ಹೆಚ್ಚು ಅನುಕೂಲಕರ ವಾತಾವರಣವಿದ್ದು ಪ್ರತಿಯೊಬ್ಬರು ಮಕ್ಕಳಂತೆ ಮಣ್ಣು ಹಾಗೂ ನೀರನ್ನು ಪರಿಸರವನ್ನು ಸಂರಕ್ಷಣೆ ಮಾಡಿಟ್ಟುಕೊಳ್ಳುವುದು ಅಗತ್ಯವಿದೆ ಎಂದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಿ ಆರ್ ಪಾಟೀಲ ಮಾತನಾಡಿ ಗದಗ ತಾಲೂಕಿನ ಹಲವು ಭಾಗಗಳಲ್ಲಿ ಮಣ್ಣು ನೀರು ಸಂರಕ್ಷಣೆಯ ಪರಿಸರ ಬೆಳೆಸುವ ಹಾಗೂ ಕೃಷಿ ಉತ್ತೇಜನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ರೈತರ ಅನುಕೂಲಕ್ಕಾಗಿ ಸರ್ಕಾರದಲ್ಲಿ ಸಚಿವರಾಗಿರುವ ಎಚ್ ಕೆ ಪಾಟೀಲ ಈ ಯೋಜನೆಯನ್ನು ತುಂಬಾ ಮುಖ್ಯ ವರ್ಜಿ ವಹಿಸಿ ಜನರಿಗೆ ನೀಡಿದ್ದಾರೆ ಎಂದರು.
ರೈತರು ಸ್ವಾವಲಂಬನೆಯಿಂದ ಬದುಕಬೇಕಾದರೆ ರೈತ ಬೆಳೆದ ಉತ್ಪನ್ನಗಳಿಗೆ ಅಧಿಕ ಬೆಲೆ ಸಿಗಬೇಕು ಆ ನಿಟ್ಟಿನಲ್ಲಿ ಸರ್ಕಾರ ವಿಶೇಷ ಕಾನೂನುಗಳನ್ನು ರೂಪಿಸುವ ಮೂಲಕ ರೈತರ ನೆರವಿಗೆ ಬರಬೇಕು ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಿಎಂ ಶ್ರೀಧರ್, ಜಂಟಿ ಕೃಷಿ ನಿರ್ದೇಶಕಿ ಚೇತನ ಪಾಟೀಲ, ಕೃಷಿ ಅಧಿಕಾರಿ ಸ್ಪೂರ್ತಿ ಜಿಎಸ್, ಸಹಾಯಕ ಕೃಷಿ ಅಧಿಕಾರಿ ಮಲ್ಲಯ್ಯ ಕೊರವ ನವರ, ಹಿರಿಯರಾದ ಎಸ್ ಎಂ ನೀಲಗುಂದ ಎಂಡಿ ಭಟ್ಟೂರ, ಷಣ್ಮುಖಪ್ಪ ಬಡ್ನಿ, ನಾಗರಾಜ ದೇಶಪಾಂಡೆ, ಕೆ ಎಲ್ ಕರಿಗೌಡ್ರ ಸೇರಿದಂತೆ ಮತ್ತು ತರರು ಇದ್ದರು. ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ತಾಲೂಕು ಹಾಗೂ ಜಿಲ್ಲಾಮಟ್ಟದ ಪ್ರತಿಭಾವಂತ ರೈತರನ್ನು ಸನ್ಮಾನಿಸಲಾಯಿತು. ರಿವಾರ್ಡ ಯೋಜನೆಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣೆಗದಗ, ಮುಳಗುಂದ: ಜಲಾನಯನ ಇಲಾಖೆ ವತಿಯಿಂದ ವಿಶ್ವಬ್ಯಾಂಕ ನೆರವಿನ ರಿವಾರ್ಡ ಯೋಜನೆ ಲೋಕಾರೆ್ಣ ಕಾರ್ಯಕ್ರಮದಂಗವಾಗಿ ಫಲಾನುಭವಿಗಳಿಗೆ ಸವಲತ್ತುಗಳನ್ನು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಎಚ್.ಕೆ. ಪಾಟೀಲ ವಿತರಿಸಿದರು.ಯೋಜನೆಯಡಿ ನಿರ್ಮಿಸಿದ ಕೃಷಿಹೊಂಡಕ್ಕೆ ಭಾಗೀನ ಅರ್ಿಸಲಾಯಿತು.
ಕೃಷಿ ಹೊಂಡದಲ್ಕಿ ಮೀನುಮರಿ ಬಿಡಲಾಯಿತು.ಕೃಷಿ ಹೊಂಡದ ಸುತ್ತ ಸಸಿ ನೆಡುವುದು, ಎರೆಹುಳು ತೊಟ್ಟಿ ಉದ್ಘಾಟನೆ,ಯನ್ನು ಎಚ್.ಕೆ ಪಾಟೀಲ ನೆರವೇರಿಸಿದರು.ಈ ಸಂದರ್ಭದಲ್ಲಿಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಜಲತಜ್ಷ ರಾಜೇಂದ್ರಸಿಂಗ್, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಚೇತನಾ ಪಾಟೀಲ, ಸ್ಪೂರ್ತಿ ಜಿ.ಎಸ್., ಎಸ್.ಎಂ. ನೀಲಗುಂದ, ಎಂ.ಡಿ. ಬಟ್ಟೂರ, ಷಣ್ಮುಖಪ್ಪ ಬಡ್ನಿ, ಎನ್.ಆರ್. ದೇಶಪಾಂಡೆ, ಕೆ.ಎಲ್ ಕರಿಗೌಡ್ರ, ಇಮಾಮಸಾಬ ಶೇಖ, ಬಿ.ವ್ಹಿ. ಸುಂಕಾಪೂರ, ಸೇರಿದಂತೆ ಮತ್ತಿತರರು ಇದ್ದರು.ಬಾಕ್ಸ್ ಐಟಂ ಸಿರಿಧಾನ್ಯ ಉತ್ಪನ್ನ ಮತ್ತು ವಾಣಿಜ್ಯ ಮೇಳ ಉದ್ಘಾಟನೆಮುಳಗುಂದ: ರಿವಾರ್ಡ ಯೋಜನೆ ಲೋಕಾರೆ್ಣ ಕಾರ್ಯಕ್ರಮದ ನಿಮಿತ್ಯ ಸಿರಿಧಾನ್ಯ ಉತ್ಪನ್ನ ಹಾಗೂ ವಾಣಿಜ್ಯ ಮಳಿಗೆಯನ್ನು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ಉದ್ಘಾಟಿಸಿದರು.. ಹತ್ತಕ್ಕೂ ಹೆಚ್ಚು ಸಾವಯವ ಉತ್ಪನ್ನದಲ್ಲಿ ಸಿದ್ಧಪಡಿಸಿದ ಆಹಾರ ಪದಾರ್ಥಗಳ ಮಳಿಉದ್ಘಾಟನೆಗೊಂಡವು.ಪ್ರಮುಖವಾಗಿ ರಿವಾರ್ಡ ಯೊಜನೆಯ ಫನಾನುಭವಿಗಳಿಗೆ ಜೆನು ಪೆಟ್ಟಿಗೆ, ಚಾಪ ಕಟರ್ ವಿತರಣೆ, ಕುರಿ, ಕೋಳಿಮರಿ, ತುಂತುರು ನಿರಾವರಿ ಫರಿಕರಗಳನ್ನು ವಿತರಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 