ಸೇವಾ ನಿವೃತಿ : ಹಂಪಣ್ಣವರ ಬೀಳ್ಕೋಡುಗೆ
Retirement: Farewell to Hampannavar
ಸೇವಾ ನಿವೃತಿ : ಹಂಪಣ್ಣವರ ಬೀಳ್ಕೋಡುಗೆ
ಜಮಖಂಡಿ 02: ಚಿತ್ರಕಲೆಯು ಆದಿಕಾಲದಿಂದ ಬಂದಿರುವ ಶ್ರೇಷ್ಠ ಕಲೆಯಾಗಿದೆ. ತಂತ್ರಜ್ಞಾನ ಯುಗದಲ್ಲಿ ಚಿತ್ರಕಲೆಯಿಂದ ಜ್ಞಾನವನ್ನು ಪಡೆಯಬಹುದು. ರಾಜ ಮಾಹಾಜರು ಕಾಲದಿಂದ ಬಂದಿರುವ ಕಲೆಯು ಬಹಳ ಮಹತ್ವವನ್ನು ಪಡೆದುಕೊಂಡಿದೆ ಎಂದು ಮುಧೋಳದ ಹಿರಿಯ ನ್ಯಾಯವಾದಿ ಬಿ,ಸಿ,ಹಿರೇಮಠ ಹೇಳಿದರು.
ನಗರದ ಮಹೇಶ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ನಡೆದ ಜಿ,ವಿ,ಹಂಪಣ್ಣವರ ಪ್ರಾಚಾರ್ಯರವರ ಸೇವಾ ನಿವೃತಿ ಬೀಳ್ಕೋಡುವ ಸಮಾರಂಭದಲ್ಲಿ ಮಾತನಾಡಿದರು.
ಇಂದಿನ ದಿನಮಾನದಲ್ಲಿ ಎಲ್ಲ ಶಾಲಾ-ಕಾಲೇಜುಗಳಲ್ಲಿ ಚಿತ್ರಕಲಾ ಶಿಕ್ಷಕರನ್ನು ನೇಮಕ ಮಾಡಲಾಗುತ್ತಿಲ್ಲ. ಮೊದಲು ಪ್ರತಿ ಶಾಲಾ-ಕಾಲೇಜುಗಳಲ್ಲಿ ನೇಮಕ ಮಾಡುತ್ತಿದ್ದರು. ಚಿತ್ರಕಲೆಯನ್ನು ಕಲಿತ ವಿದ್ಯಾರ್ಥಿಗಳು ಸಾಕಷ್ಟು ಇದ್ದಾರೆ. ಅವರನ್ನು ಸರಕಾರ ನೇಮಕ ಮಾಡಿಕೊಳ್ಳದ ಕಾರಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರದೆ ಇರುವ ಕಾರಣ ಚಿತ್ರಕಲಾ ಕಾಲೇಜುಗಳು ಮುಚುವ ಹಂತಕ್ಕೆ ಬಂದಿವೆ. ಚಿತ್ರಕಲಾ ಕಲಿತ ವಿದ್ಯಾರ್ಥಿಗಳ ಕೊರಗು ಅವರನ್ನು ಕಾಡುತ್ತಿದೆ. ಅಪರಾದ ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಯ ಪೋಟೋ ಭಾವಚಿತ್ರವನ್ನು ಬಿಡಿಸಿ ಅಪರಾದ ಪ್ರಕರಣದಲ್ಲಿ ಪತ್ತೆ ಹಚ್ಚಲಾಗುತ್ತಿತ್ತು. ಚಿತ್ರಕಲೆ ಮೇಲೆ ನಿರಾಶಕ್ತಿ ತೋರಿಸದೆ. ಆಸಕ್ತಿಯನ್ನು ಹೊಂದುವ ಕಾರ್ಯವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದರು.
ವಿಜಯಪೂರ ಶಿಕ್ಷಕ ಪಿ,ಎಸ್, ಕಡೆಮನಿ ಅವರು ಮಾತನಾಡಿ,ಇಂದಿನ ದಿನಮಾನದಲ್ಲಿ ಚಿತ್ರಕಲೆ ಶಾಲಾ, ಕಾಲೇಜುಗಳನ್ನು ನಡೆಸಿಕೊಂಡು ಹೋಗುವದು ತುಂಬಾ ಕಷ್ಟದಾಯಕವಾಗಿದೆ. ಚಿತ್ರಕಲೆ ಕಲಿತ ವಿದ್ಯಾರ್ಥಿಗಳ ಕಡೆಗೆ ಸರಕಾರ ಗಮನ ಹರಿಸುತ್ತಿಲ್ಲ. ಒಂದು ಇತಿಹಾಸವನ್ನು ತೋರಿಸುವ ಕೆಲಸ ಚಿತ್ರಕಲೆ ಮಾಡುತ್ತಿದೆ. ಅನುದಾನ ಇರುವ ಶಾಲೆಗಳು ಬರುವ ದಿನಗಳಲ್ಲಿ ಮುಚ್ಚುವ ಪರಿಸ್ಥಿತಿ ಬರುತ್ತಿದೆ. ಚಿತ್ರಕಲಾ ಶಿಕ್ಷಕರು ನಿವೃತ್ತಿ ಹೊಂದಿದರೆ ಅವರ ಸ್ಥಳಕ್ಕೆ ನೇಮಕ ಮಾಡಲು ಸರಕಾರ ಆದೇಶ ನೀಡುತ್ತಿಲ್ಲ. ಸರಕಾರದ ಸಂಬಳ ನೀಡುವಷ್ಟು ಸಂಸ್ಥೆಯರಿಗೆ ನೀಡಲು ಸಾಧ್ಯವಿಲ್ಲ. ಹೀಗಾಗಿ ಚಿತ್ರಕಲೆ ಮಹಾವಿದ್ಯಾಲಯಗಳನ್ನು ಮುಚ್ಚುವ ಹಂತಕ್ಕೆ ಬಂದಿದೆ. ಅದಕ್ಕಾಗಿ ಸರಕಾರ ಚಿತ್ರಕಲಾ ವಿದ್ಯಾರ್ಥಿಗಳ ಬಗ್ಗೆ ಹಾಗೂ ಶಿಕ್ಷಕರ ಬಗ್ಗೆ ಬಹಳ ಕಾಳಜಿ ವಹಿಸಬೇಕಾಗಿದೆ. ಕಲಾವಿದರ ಬದಕು ಎಂದು ನಿವೃತ್ತಿ ಹೊಂದುವುದಿಲ್ಲ. ಜಿಲ್ಲೆಯ ಬಸವೇಶ್ವರ ಮಹಾವಿದ್ಯಾಲಯಕ್ಕೆ ಒಪ್ಪಿಸುವ ಹಂತಕ್ಕೆ ಬಂದಿದೆ ಎಂದರು.
ವೇದಿಕೆಯಲ್ಲಿ ಶಿವಾನಂದ ಕತ್ತಿ, ಬಸವರಾಜ ಹಿರೇಮಠ, ಬಸವರಾಜ ಗವಿಮಠ, ಶಶಿಕಾಂತ ತೇರದಾಳ ಉಪಸ್ಥಿತರಿದರು. ಶಿಕ್ಷಕ ವಿದ್ಯಾಧರ ಸಾಲಿ, ಬಸವರಾಜ ಬಾಳಿಕಾಯಿ ಮಾತನಾಡಿದರು. ನಿವೃತಗೊಂಡ ಪ್ರಾಚಾರ್ಯ ಜಿ,ವಿ,ಹಂಪಣ್ಣವರ ಅವರ ಕಿರು ಪರಿಚಯವನ್ನು ವಲ್ಯಾಪೂರ ವಿದ್ಯಾರ್ಥಿ ನೇರವೆರಿಸಿದರು. ಪ್ರಾಸ್ತಾವಿಕವಾಗಿ ಜಿ,ವಿ,ಹಂಪಣ್ಣವರ ಮಾತನಾಡಿದರು, ಎಚ್,ವಿಶ್ವನಾಥ ಸ್ವಾಗತಿಸಿದರು, ಕೇಶವ ರಾಠೋಡ ನಿರೂಪಿಸಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 