ತಮ್ಮ 74 ವಯಸ್ಸಿನಸಲ್ಲಿ 2 ಚಿನ್ನ ಹಾಗೂ 3 ಬೆಳ್ಳಿ ಪದಕಗಳನ್ನು ಗೆದ್ದ ನಿವೃತ್ತ ಅಧ್ಯಾಪಕಿ ಚೆನ್ನಮ್ಮ ಹೆಡೆ
Retired teacher Chennamma Hede won 2 gold and 3 silver medals at the age of 74.
ಧಾರವಾಡ 27: ವೆಟ್ರನ್ ಅಥ್ಲೆಟಿಕ ಅಸೋಸಿಯೇಷನ್ ಆಫ್ ಕರ್ನಾಟಕ ಹಾಗೂ ಬಳ್ಳಾರಿಯ ವೆಟ್ರನ್ ಅಥ್ಲೆಟಿಕ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಬಳ್ಳಾರಿ ನಗರದಲ್ಲಿ ಜರುಗಿದ 45ನೆಯ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಇಲ್ಲಿಯ ಚೆನ್ನಬಸವೇಶ್ವರನಗರ ನಿವಾಸಿ, 74 ವರ್ಷದ ನಿವೃತ್ತ ಅಧ್ಯಾಪಕಿ ಚೆನ್ನಮ್ಮ ಹೆಡೆ ಬೈಲೂರ 2 ಚಿನ್ನ ಹಾಗೂ 3 ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
70 ವರ್ಷ ಮೇಲ್ಪಟ್ಟ ವಯೋಮಾನದವರ ತೀವ್ರ ನಡಿಗೆ ಸ್ಪರ್ಧೆಯಲ್ಲಿ 3 ಕಿ.ಮೀ. ಅಂತರವನ್ನು 32 ನಿಮಿಷ 7.5 ಸೆಕೆಂದುಗಳಲ್ಲಿ ಕ್ರಮಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. 65 ವರ್ಷ ಮೇಲ್ಪಟ್ಟ ವಯೋಮಾನದವರ ಮಿಕ್ಸಡ ಡಬಲ್ಸ್ 4ಘಿ100 ಮೀಟರ್ ರಿಲೆ ಸ್ಪರ್ಧೆಯಲ್ಲಿಯೂ ಪ್ರಥಮ ಸ್ಥಾನ ಪಡೆದು ಸಂಭ್ರಮಿಸಿದ್ದಾರೆ. 70 ವರ್ಷ ಮೇಲ್ಪಟ್ಟ ವಯೋಮಾನದವರ ಕಬ್ಬಿಣ ಗುಂಡು ಎಸೆತ ಸ್ಪರ್ಧೆಯಲ್ಲಿ ಹಾಗೂ ಸರಪಳಿಯುಕ್ತ ಕಬ್ಬಿಣ ಗುಂಡು ಎಸೆತ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. 30 ವರ್ಷ ವಯೋಮಾನದ ಹುಡುಗಿಯರ ಜೊತೆ 4ಘಿ100 ಮೀಟರ್ ರಿಲೆ ಸ್ಪರ್ಧೆಯಲ್ಲಿ ಪಾಲ್ಗೊಂಡು ದ್ವಿತೀಯ ಸ್ಥಾನ ಗಳಿಸಿದ್ದಾರೆ.
ತಾವು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಮೇಲಾಟಗಳಲ್ಲಿ ಆಸಕ್ತಿ ಹೊಂದಿದ್ದು, ಪ್ರಸ್ತುತ 74ರ ಇಳಿವಯಸ್ಸಿನಲ್ಲಿಯೂ ಉತ್ಸಾಹ ಕಳೆದುಕೊಳ್ಳದೇ ಆಟವಾಡಿ ಚಿನ್ನವನ್ನೇ ಬಾಚಿಕೊಳ್ಳಬೇಕೆಂದು ಸಂಕಲ್ಪಿಸಿ, ಆ ದಿಸೆಯಲ್ಲಿ ಕ್ರೀಡಾ ಬದ್ಧತೆ ಹೊಂದಿ ಶ್ರಮಿಸಿ ವಿಜಯಶಾಲಿ ಆಗುತ್ತಿದ್ದೇನೆ ಎಂದು ಚೆನ್ನಮ್ಮ ಹೆಡೆ ಬೈಲೂರ ತಮ್ಮ ಕ್ರೀಡಾ ಸಾಧನೆಯನ್ನು ಹಂಚಿಕೊಳ್ಳುತ್ತಾರೆ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 