ನಿವೃತ್ತಿ ಗೊಂಡ ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಏಜಾಜ್ ಹುಸೇನ್ ಗೆ ಗೋನಾಳ್ ಸ್ನೇಹ ಬಳಗ ದಿಂದ ಸನ್ಮಾನ

ನಿವೃತ್ತಿ ಗೊಂಡ ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಏಜಾಜ್ ಹುಸೇನ್ ಗೆ ಗೋನಾಳ್ ಸ್ನೇಹ ಬಳಗ ದಿಂದ ಸನ್ಮಾನ Retired Water Resources Department Secretary Ejaz Hussain honored by Gonal Friends Group

ಕೊಪ್ಪಳ 11: ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಇಲಾಖೆ ಬೆಂಗಳೂರಿನಲ್ಲಿ ರಾಜ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ ಇತ್ತೀಚಿಗೆ ನಿವೃತ್ತಿಗೊಂಡ ಬಳಿಕ ಕೊಪ್ಪಳಕ್ಕೆ ಆಗಮಿಸಿದ ಏಜಾಜ್ ಹುಸೇನ್ ರವರಿಗೆ ನಗರದ ಪದಗಿ ಲೇಓಟ್ ನಲ್ಲಿರುವ ಹಿರಿಯ ಸಾಹಿತಿ ಪತ್ರಕರ್ತ ಮತ್ತು ಪ್ರಕಾಶಕ ಜಿ,ಎಸ್ ಗೋನಾಳ ರವರ ಬಸವ ಸದನ ನಿವಾಸ ದಲ್ಲಿ ಸನ್ಮಾನಿಸಿ ಶುಭ ಕೋರಿ ಅಭಿನಂದಿಸಲಾಯಿತು, ಏಜಾಜ್ ಹುಸೇನ್ ರವರ ಪ್ರಾಥಮಿಕ ಪ್ರೌಢ ಮತ್ತು ಪಿಯು ಶಿಕ್ಷಣವನ್ನು ಕೊಪ್ಪಳದಲ್ಲಿ ಮುಗಿಸಿಕೊಂಡು ವಿವಿಧ ಇಲಾಖೆಯಲ್ಲಿ ದಕ್ಷ ಆಡಳಿತ ಸೇವೆ ಸಲ್ಲಿಸಿ ಮುನಿರಾಬಾದ್ ಡ್ಯಾಮಿನ ನೀರಾವರಿ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಅಭಿಯಂತರಾಗಿ ಅತ್ಯುತ್ತಮ ಆಡಳಿತ ನೀಡಿ ನಂತರ ಬಳ್ಳಾರಿಯಲ್ಲಿ ಅಧಿಕಕ್ಷಕ ಅಭಿಯಂತರಾಗಿ ,ಮುಖ್ಯ ಅಭಿಯಂತರಾಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿ ನಂತರ ಉನ್ನತ ಬಡ್ತಿ ಹೊಂದಿ ಕರ್ನಾಟಕ ಸರ್ಕಾರದ ಜಲ ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಯಾಗಿ  ಸೇವೆ ಸಲ್ಲಿಸಿ ಸಾಮಾನ್ಯ ಜನರ ,ಜನಪ್ರತಿನಿಧಿಗಳ ಮತ್ತು ಅಧಿಕಾರಿ ವರ್ಗದವರ ಪ್ರೀತಿ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಉತ್ತಮ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಬಳಿಕ ಕೊಪ್ಪಳಕ್ಕೆ ಆಗಮಿಸಿದ ಈ ಸಂದರ್ಭದಲ್ಲಿ ಅವರನ್ನು  ಜಿ,ಎಸ್ ಗೋನಾಳ ರವರ ವಿಶಾಲ ಪ್ರಕಾಶನ ಮತ್ತು ಸಿರಿಗನ್ನಡ ವೇದಿಕೆಯ ಸಂಘಟನೆಯ ಮೂಲಕ ಸನ್ಮಾನಿಸಿ ಶುಭ ಕೋರಿ ಅಭಿನಂದಿಸಲಾಯಿತು ,ಈ ಸಂದರ್ಭದಲ್ಲಿ ರೈಲ್ವೆ ಇಲಾಖೆಯ ನಿವೃತ್ತ ಅಧಿಕಾರಿ ಆಸಿಫ್, ಮಕ್ಕಳ ಸಾಹಿತಿ ಶ್ರೀನಿವಾಸ ಚಿತ್ರಗಾರ, ಯುವ ನ್ಯಾಯವಾದಿ ಮೇಘರಾಜರೆಡ್ಡಿ ಗೋನಾಳ್, ಮತ್ತು ಜಿ,ಎಸ್, ಗೋನಾಳ ರವರ ಪತ್ನಿ ಶ್ರೀಮತಿ ರತ್ನಮ್ಮ, ಜಿ ,ಗೋನಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.