ಹೊಸ ವರ್ಷಾಚರಣೆ ಸಂಭ್ರಮಕ್ಕೆ ರೆಸಾರ್ಟ್‌ಗಳು ರಂಗು ರಂಗಾಗಿ ಸಿದ್ಧ
Resorts are all set for New Year celebrations
ಕೊಪ್ಪಳ 30: ಹೊಸ ವರ್ಷಾಚರಣೆ ಸಂಭ್ರಮಕ್ಕೆ ಯುವ ಸಮೂಹ ಸೇರಿದಂತೆ ಜನತೆ ಸಿದ್ಧರಾಗಿದ್ದು, ಕೊಪ್ಪಳ ಹಾಗೂ ಗಂಗಾವತಿ ತಾಲೂಕಿನಲ್ಲಿರುವ ಬಹುತೇಕ ಎಲ್ಲಾ ರೆಸಾರ್ಟ್‌ಗಳು ರಂಗು ರಂಗಾಗಿ ಸಿದ್ಧಗೊಂಡಿವೆ. ಹೊಸ ವರ್ಷವನ್ನು ರೆಸಾರ್ಟ್‌ಗಳಲ್ಲಿ ತಂಗಿ ಸ್ವಾಗತಿಸಲು ಅನೇಕರು ಆಗಮಿಸಿದ್ದಾರೆ.
ಎರಡೂ ತಾಲೂಕಿನಲ್ಲಿರು ಎಲ್ಲಾ ರೆಸಾರ್ಟ್‌ಗಳಲ್ಲಿ ದಾಂಡೇಲಿ, ಗೋವಾ ಮತ್ತು ಗೋಕರ್ಣ ಮಾದರಿಯಲ್ಲಿ ನೈಟ್‌ಪಾರ್ಟಿ, ಫೈರ್ ಕ್ಯಾಂಪ್, ಹಾಡು, ನೃತ್ಯಕ್ಕಾಗಿ ಸರ್ವ ಸಿದ್ಧತೆ ಮಾಡಿಕೊಳ್ಳುವ ಮೂಲಕ ವಿದೇಶಿ ಮತ್ತು ಸ್ವದೇಶಿ ಪ್ರವಾಸಿಗರನ್ನು ಸೆಳೆಯಲು ರೆಸಾರ್ಟ್ ಮಾಲೀಕರು ಮುಂದಾಗಿದ್ದಾರೆ. ಕೊಪ್ಪಳ ತಾಲೂಕಿನ ಬಸಾಪುರ, ರಾಜಾರಾಮ ಪೇಟೆ, ಗಂಗಾವತಿ ತಾಲೂಕಿನ ಸಣಾಪುರ, ಹನುಮನಹಳ್ಳಿ, ಜಂಗ್ಲಿ, ಆನೆಗೊಂದಿ ಸೇರಿ ವಿವಿಧ ಗ್ರಾಮದಲ್ಲಿನ ಪ್ರಕೃತಿ ಮಡಿಲಿಲ್ಲಿ ಸಾಲು- ಸಾಲು ರೆಸಾರ್ಟ್‌ಗಳು ತಲೆ ಎತ್ತಿವೆ.
ಭಾರಿ ಬೆಟ್ಟಗುಡ್ಡಗಳ ಸಾಲಿನಲ್ಲಿ ಪ್ರಶಾಂತವಾದ ತುಂಗಭದ್ರಾ ನದಿ ತೀರದಲ್ಲಿ ಪಾರ್ಟಿ ಆಯೋಜನೆಗೆ ಸಿದ್ಧತೆ ಭರದಿಂದ ಸಾಗಿದೆ. ಪ್ರಕೃತಿ ನಡುವೆ ಹೊಸ ವರ್ಷ ಸ್ವಾಗತಿಸಲು ನೆರೆಯ ತೆಲಂಗಾಣ, ಆಂಧ್ರ, ಮಹಾರಾಷ್ಟ್ರ ಹಾಗೂ ಕೇರಳ ಸೇರಿ ಹೊರ ರಾಜ್ಯ ಹಾಗೂ ವಿದೇಶಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ರೆಸಾರ್ಟ್ ಮಾಲೀಕರು ಹೊಸ ವರ್ಷದ ಸಂಭ್ರಮಾಚರಣೆ ನೆಪದಲ್ಲಿ ಕಾನೂನು ಬಾಹಿರ ಮದ್ಯ ಮಾರಾಟ ಹಾಗೂ ನಶೆ ಏರಿಸುವ ನೈಟ್ ಪಾರ್ಟಿ ಆಯೋಜನೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಐತಿಹಾಸಿಕ ಹಂಪಿ ಬಳಿಯ ವಿರೂಪಾಪುರ ಗಡ್ಡಿಯಲ್ಲಿನ ರೆಸಾರ್ಟ್‌ಗಳ ತೆರವಿನ ನಂತರ ಉದ್ಯಮ ಕೊಪ್ಪಳ ಮತ್ತು ಗಂಗಾವತಿ ತಾಲೂಕಿನ ಕೃಷಿ ಭೂಮಿಗೆ ಶಿಫ್ಟ್ ಆಗಿದೆ. ಕೃಷಿ ಭೂಮಿಯಲ್ಲಿ 150ಕ್ಕೂ ಹೆಚ್ಚು ರೆಸಾರ್ಟ್‌ಗಳು ತಲೆ ಎತ್ತಿವೆ. ಹೊಸ ವರ್ಷದ ಹಿನ್ನೆಲೆಯಲ್ಲಿ ಆನ್‌ಲೈನ್‌ನಲ್ಲೇ ಎಲ್ಲ ರೂಂ ಬುಕ್ ಮಾಡಿಕೊಂಡಿದ್ದಾರೆ. ಮದ್ಯ ಮಾರಾಟಕ್ಕೆ ಅವಕಾಶ ಇಲ್ಲದ ಕಡೆಯೂ ಕಿಕ್ ಹೊಡೆಸುವ ತಯಾರಿ ಶುರು ಆಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 