ಸರ್ಕಾರದ ಯೋಜನೆಗಳನ್ನು ಪಡೆಯಲು ಸಾರ್ವಜನಿಕರಲ್ಲಿರುವ ಗೊಂದಲ ಪರಿಹರಿಸಿ ಸೌಲಭ್ಯ ಕಲ್ಪಿಸಿ -ಎಂ.ಎಂ.ಹಿರೇಮಠ

ಸರ್ಕಾರದ ಯೋಜನೆಗಳನ್ನು ಪಡೆಯಲು ಸಾರ್ವಜನಿಕರಲ್ಲಿರುವ ಗೊಂದಲ ಪರಿಹರಿಸಿ ಸೌಲಭ್ಯ ಕಲ್ಪಿಸಿ -ಎಂ.ಎಂ.ಹಿರೇಮಠ Resolve the confusion among the public and provide facilities to avail government schemes - M.M. Hi


         ಹಾವೇರಿ21 : ಸರ್ಕಾರ ಈಗಾಗಲೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಅದರಂತೆ ಜಿಲ್ಲೆಯ ಜನರು ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಗ್ಯಾರಂಟಿ ಯೋಜನೆಯ ಕುರಿತು ಏನಾದರು ಗೊಂದಲಕ್ಕೆ ಒಳಗಾದರೆ ಅದನ್ನು ಪರಿಹರಿಸಲು ಎಲ್ಲ ಅಧಿಕಾರಿಗಳು ಕ್ರಮ ವಹಿಸಬೇಕು  ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಧಿಕಾರದ ಅಧ್ಯಕ್ಷರಾದ ಎಂ ಎಂ ಹಿರೇಮಠ ಹೇಳಿದರು.  ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ  ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಧಿಕಾರದ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೆನೆ ಮೆನೆಗೆ ಗ್ಯಾರಂಟಿ ಮತ್ತು ಮನೆ ಮನೆಗೆ ರಂಗೋಲಿ ಅನ್ನುವ ಕಾರ್ಯಕ್ರಮವನ್ನು ಆಯಾ ತಾಲೂಕಿನಲ್ಲಿ  ಹಮ್ಮಿಕೊಕೊಂಡು ಗ್ಯಾರಂಟಿ ಯೋಜನೆಗಳ ಅರಿವು ಹಾಗೂ ಗ್ಯಾರಂಟಿ ಯೋಜನೆಗಳಿಂದ ಪಡೆದ ಅನುಕೂಲತೆಯನ್ನು ಮನೆ ಮನೆ ಸಾರುವುದಾಗಿದೆ ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳಿಗೆ ಆಯಾ ಭಾಗಗಳಲ್ಲಿ ಈ ವಿನುತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸೂಚಿಸಿದರು. ಹಾಗೆಯೇ ಗೃಹಲಕ್ಷ್ಮೀ, ಅನ್ನಭಾಗ್ಯ, ಶಕ್ತಿ, ಗೃಹಜ್ಯೋತಿ ಹಾಗೂ ಯುವನಿಧಿ ಗ್ಯಾರಂಟಿ ಯೋಜನೆಗಳ ಅಂಕಿ ಅಂಶಗಳನ್ನು  ಪರೀಶೀಲಿಸಿ  ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದುಕೊಂಡರು.  

ಜಿಲ್ಲೆಯಲ್ಲಿ ಎಲ್ಲ ಬಸ್ ನಿಲ್ದಾಣಗಳಲ್ಲಿನ ಆವರಣ, ಶೌಚಾಲಯ, ಸಿ ಸಿ ಟಿವಿ ಕ್ಯಾಮರಾ ಅಳವಡಿಕೆ ಮಾಡಿರುವುದಾಗಿ ತಿಳಿಸಿದ್ದೀರಿ ತುಂಬಾ ಸಂತೋಷದ ವಿಷಯ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಮಾಲಿನ್ಯ ಕಂಡು  ಮುಜುಗರಕ್ಕೆ ಒಳಗಾಗಬಾರದು ಈ ನಿಟ್ಟಿನಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಿ,  ಜಿಲ್ಲೆಗೆ ಸರ್ಕಾರದಿಂದ 10 ಹೊಸಗಳು ಬಂದಿದ್ದು ಆದ್ಯತೆಯ ಮೆರೆಗೆ ಯಾವ ಭಾಗದಲ್ಲಿ ಬಸ್ಸಿನ ಕೊರತೆ ಇದಿಯೋ ಆ ಭಾಗಕ್ಕೆ ಬಸ್ ಬಿಡುವಂತೆ ಅಧಿಕಾರಿಗಳಿಗೆ ಸೂಚನೆ  ನೀಡಿದರು.  

ಗೃಹಜ್ಯೋತಿ ಯೋಜನೆ ಕುರಿತು ಚರ್ಚಿಸಿ  ಗ್ರಾಮೀಣ ಭಾಗಗಳಲ್ಲಿ ದಿನವಿಡಿ ವಿದ್ಯುತ್ ಉರಿಯುತ್ತಿರುತ್ತವೆ, ಇದರಿಂದ ಅನಗತ್ಯ ವಿದ್ಯತ್ ದುರ್ಬಳಕೆ ಯಾಗುತ್ತಿದೆ ಅದನ್ನು ತಡೆಯಲು  ಕ್ರಮ ವಹಿಸಲು ಕಳೆದ ಸಭೆಯಲ್ಲಿ ಸೂಚಿಸಿತ್ತು ಅದರಂತೆ ಹೆಸ್ಕಾಂ ನಿಂದ ಪ್ರತಿಶತ 50ಅ ಹಾಗೂ ಗ್ರಾಮ ಪಂಚಾಯತ್ ಪ್ರತಿಶತ 50ಅ ರಷ್ಟು  ಪಾಲುದಾರಿಕೆಯಲ್ಲಿ ನಿರ್ವಹಣೆ ಮಾಡಿ ಕ್ರಮ ವಹಿಸಲು ಸೂಚಿಸಲಾಗಿತ್ತು ಅದರಂತೆ ಕ್ರಮ ವಹಿಸಿದ್ದಾಗಿ ಸಭೆಗೆ ತಿಳಿಸಿದ್ದೀರಿ ಇದು ಶೀಘ್ರ ಕಾರ್ಯರೂಪಕ್ಕೆ ಬರಬೇಕು ಇಲ್ಲವೇ ಪರ್ಯಾಯ ವ್ಯವಸ್ಥೆ ಇದ್ದರೆ ತಿಳಿಸಿ,  ಅದಕ್ಕೆ ನಮ್ಮ ಸಹಕಾರವಿದೆ ಸರ್ಕಾರ ಮಟ್ಟದಲ್ಲಿ ಚರ್ಚಿಸುವುದಾಗಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆಸಿದ ಹೆಸ್ಕಾಂ ಅಧಿಕಾರಿಗಳು  ಅನಧಿಕೃತ ಲೈನ್‌ಗಳು ಜಾಸ್ತಿ ಇದೆ ಅದನ್ನು ತಡೆಯಲು ಕ್ರಮ ವಹಿಸಿದ್ದೇವೆ ಹಾಗೆಯೇ ಗ್ರಾಮೀಣ ಪ್ರದೇಶದಲ್ಲಿ ಅನಧಿಕೃತ ಬೋರವೆಲ್‌ಗಳ ಸಂಖ್ಯೆ ಹೆಚ್ಚಾಗಿದ್ದು ಇದರಿಂದ ಕರೆಂಟ್ ಖರ್ಚು ಹೆಚ್ಚಾಗುತ್ತಿದ್ದೆ ಇದನ್ನು ತಡೆಗಟ್ಟಲು ಅನಧಿಕೃತ ಬೋರವೆಲ್ ಪಟ್ಟಿಯನ್ನು ಸಿದ್ದ ಪಡಿಸಿ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ  ಎಂದು ಮಾಹಿತಿ ನೀಡಿದ್ದಾರೆ.  

ಅನ್ನಬಾಗ್ಯ ಯೋಜಯ ಕುರಿತು ಚರ್ಚಿಸಿ ರೇಷನಕಾರ್ಡ್‌ ವಿತರಣೆ ಕುರಿತ ಅಧ್ಯಕ್ಷರ ಪ್ರಶ್ನೆಗೆ ಪ್ರತಿಕ್ರಿಯೆಸಿದ ಆಹಾರ ಇಲಾಖೆ  ಅಧಿಕಾರಿಗಳು, ಜಿಲ್ಲೆಯಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿ ವಿತರಿಸದೆ ಇರುವ  ರೇಷನ್ ಕಾರ್ಡ್‌ ಅರ್ಜಿಗಳನ್ನು ವಿಲೇವಾರಿ ಮಾಡುತ್ತಿದ್ದೇವೆ. ಜಿಲ್ಲೆಯಿಂದ 9982 ಅರ್ಜಿಗಳು ರೇಷನ್ ಕಾರ್ಡಗಾಗಿ ಅರ್ಜಿ ಬಂದಿದ್ದು ಅದರಲ್ಲಿ 5 ಸಾವಿರ ಕ್ಕಿಂತ ಹೆಚ್ಚು  ಅರ್ಜಿ ವಿಲೇವಾರಿ ಮಾಡಲಾಗಿದೆ. ಬಾಕಿ ಉಳಿದ ಅರ್ಜಿಗಳನ್ನು ಪರೀಶೀಲನೆ ಮಾಡಿ ಅರ್ಹರಿಗೆ ರೇಷನಕಾರ್ಡ್‌ ನೀಡಲು ಕ್ರಮ ವಹಿಸಲಾಗುವುದು ಎಂದು ಸಭೆಗೆ ತಿಳಿಸಿದರು. ಹಾಗೆಯೇ ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ಅಕ್ಕಿಯು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಹಿಂದಿನ ಸಭೆಯಲ್ಲಿ ಚರ್ಚಿಸಲಾಗಿತ್ತು ಆಹಾರ ಧಾನ್ಯಗಳನ್ನು ಅಕ್ರಮವಾಗಿ ಕಾಳ ಸಂತೆಯಲ್ಲಿ ಮಾಡುವವರ ವಿರುದ್ದ 16 ಪ್ರಕರಣ ದಾಖಲು ಮಾಡಲಾಗಿದೆ. 

        ಇದರಿಂದ 1667 ಕ್ವಿಂಟಲ್ ಅಕ್ಕಿ ವಶಪಡಿಸಿಕೊಳ್ಳಲಾಗಿದೆ ಹಾಗೂ 13 ವಾಹನಗಳನ್ನು ವಶ ಪಡಿಸಿಕೊಳ್ಳಲಾಗಿದೆ  ಮತ್ತು 27 ಜನರ ಮೇಲೆ ಎಫ್ ಐ ಆರ್ ದಾಖಲು ಮಾಡಲಾಗಿದೆ ಎಂದು ತಿಳಿಸಿದರು. ಹಾಗೆಯೇ 75 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ  ಬೋಮೆಟ್ರಿಕ್ ಸಮಸ್ಯೆ ಆಗುತ್ತಿರುವುದ್ದಾಗಿ ಸಭೆಯಲ್ಲಿ ಚರ್ಚಿಸಲಾಗಿತ್ತು ಅದರಂತೆ ಸರ್ಕಾರ ಅನ್ನ ಸುವಿಧಾ ಯೋಜನೆಯಡಿಯಲ್ಲಿ 75 ವರ್ಷ ಮೇಲ್ಪಟ್ಟ ಫಲಾನುಭವಿಗೆ ನೆರೆವಾಗಿ ಅವರ ಮನೆ ಬಾಗಿಲಗೆ ರೇಷನ್ ನೀಡಲು ಸರ್ಕಾರ ಯೋಜನೆ ರೂಪಿಸಿದೆ ಅದರಂತೆ ಜಿಲ್ಲೆಯಿಂದ ಒಟ್ಟು 7648 ಫಲಾನುಭವಿಗಳ ಪಟ್ಟಿ ಮಾಡಲಾಗಿದೆ ಸರ್ಕಾರಕ್ಕೆ ಸಲ್ಲಿಸಿ ಅಷ್ಟು ಫಲಾನುಭವಿಗಳ ಮನೆ ಬಾಗಿಲಿಗೆ ರೇಷನ್ ಒದಗಿಸಲು ಕ್ರಮ ವಹಿಸುವುದಾಗಿ ಸಭೆಗೆ ಮಾಹಿತಿ ನೀಡಿದಿರು.  

ಗೃಹ ಲಕ್ಷ್ಮಿ ಯೋಜನೆ ಕುರಿತು ಚರ್ಚಿಸಿ  ಬ್ಯಾಂಕುಗಳು ಫಲನುಭವಿಗಳ ಸಾಲದ ನೆಪ ಹೇಳಿ ಫಲಾನುಭವಿಗಳ ಖಾತೆಯನ್ನು  ಫ್ರಿಜ್ ಮಾಡುತ್ತಿರುವುದಾಗಿ ಹಿಂದಿನ ಸಭೆಯಲ್ಲಿ ಚರ್ಚೆ ಮಾಡಲಾಗಿತ್ತು ಇದಕ್ಕೆ ಪ್ರತಿಕ್ರಿಯೆಸಿದ ಅಧಿಕಾರಿಗಳು  ಬ್ಯಾಂಕ್ ಅಧಿಕಾರಿಗಳ ಜೊತೆಗೆ ಮಾತನಾಡಲಾಗಿದೆ ಸರ್ಕಾರದ ಯೋಜನೆಯಿಂದ ಫಲಾನುಭವಿಗಳಿಗೆ ಬರುವಂತ ಹಣವನ್ನು ಸಾಲದ ಖರ್ಚಿಗೆ ತೆಗೆದುಕೊಳ್ಳದಂತೆ ತಿಳಿಸಲಾಗಿದೆ ಇದಕ್ಕೆ ಬ್ಯಾಂಕ್ ಅಧಿಕಾರಿಗಳು  ಪ್ರತಿಕ್ರಿಯೆಸಿ ಫಲನುಭವಿಗಳ ಅನುಮತಿಯ ಮೆರೆಗೆ ಕಡಿತ ಮಾಡುತ್ತಿರುವುದಾಗಿ ತಿಳಿದ್ದಾರೆ. ಹಾಗೆಯೇ ಅಕ್ಟೋಬರ್ 2025 ರ ಮಾಹೆಯವರೆಗೆ ಗೃಹ ಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ  ಎಂದು ಸಭೆಗೆ ಮಾಹಿತಿ ನೀಡಿದರು.  

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಾ. ಪುನೀತ್,   ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಧಿಕಾರದ ಉಪಾಧ್ಯಕ್ಷರು, ತಾಲೂಕ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಧಿಕಾರದ ಅಧ್ಯಕ್ಷರು, ಉಪಾಧ್ಯಕ್ಷರು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.