ಮುರಗೋಡನ ಕೆಲ ಹಳ್ಳಿಗಳನ್ನು ಯರಗಟ್ಟಿ ತಾಲೂಕಿಗೆ ಸೇರಿಸಲು ಮನವಿ
Request to include some villages of Murugoda in Yaragati taluk
ಯರಗಟ್ಟಿ 19: ಸವದತ್ತಿ ತಾಲೂಕಿನ ಮುರಗೋಡ ಹೊಬಳಿಯ ಕೆಲ ಹಳ್ಳಿಗಳನ್ನು ಬೈಲಹೊಂಗಲ ತಾಲೂಕಿಗೆ ಸೇರಿಸದೆ ಯರಗಟ್ಟಿ ತಾಲೂಕಿಗೆ ಸೇರಿಸುವಂತೆ ನ್ಯಾಯವಾದಿ ಸಂಘದಿಂದ ತಹಶೀಲ್ದಾರ ಎಮ್ ವ್ಹಿ ಗುಂಡಪ್ಪಗೋಳ ಮೂಲಕ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಮನವಿ ಸಲ್ಲಿಸಿದರು.
ನ್ಯಾಯವಾದಿ ಸಂಘದ ಅಧ್ಯಕ್ಷ ಎಸ್. ಆರ್. ರೆಬ್ಬನ್ನವರ ಮಾತನಾಡಿದ ಅವರು ಸವದತ್ತಿ ತಾಲೂಕಿನ ಮೂರಗೋಡ ಹೊಬಳಿಯ ಹಳ್ಳಿಗಳನ್ನು ಬೈಲಹೊಂಗಲ ತಾಲೂಕಿಗೆ ಸೇರಿಸಲು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿ ಆಕ್ಷೇಪಣೆ ಸಲ್ಲಿಸಲು ಕೇಳಿದ್ದು ಇರುತ್ತದೆ.
ಮೂರಗೋಡ ಹೊಬಳಿಯ ಗ್ರಾಮಗಳಾದ ಹಲಕಿ, ಹಲಕಿ ತಾಂಡೆ. ತಡಸಲೂರ, ಮಳಗಲಿ, ಹೀರೆಬೂದನೂರ, ಚಕ್ಕಬೂದನೂರ, ಓಬಲದಿನ್ನಿ, ಕುಟ್ರನಟ್ಟಿ, ಚಚಡಿ ಗ್ರಾಮಗಳು ಯರಗಟ್ಟಿ ತಾಲೂಕಿಗೆ ಸಮೀಪದಲ್ಲಿ ಇರುತ್ತವೆ.
ಈ ಗ್ರಾಮಗಳ ಸಾರ್ವಜನಿಕರು ಈ ಹಿಂದೆ ತಮ್ಮ ಊರುಗಳನ್ನು ಯರಗಟ್ಟಿ ತಾಲೂಕಿಗೆ ಸೇರಿಸಲು ಮಾನ್ಯ ಜಿಲ್ಲಾಧಿಕಾರಿಗಳಿಗೆ ಸಾಕಸ್ಟು ಸಲ ಮನವಿ ಪತ್ರ ಸಲ್ಲಿಸಿರುತ್ತಾರೆ.ಈ ಗ್ರಾಮಗಳ ಸಾರ್ವಜನಿಕರು ಪ್ರತಿದಿನ ತಮ್ಮ ಕೆಲಸಗಳಿಗೆ ಯರಗಟ್ಟಿ ಪಟ್ಟಣಕ್ಕೆ ಬರುತ್ತಾರೆ. ಸದರಿ ಗ್ರಾಮಗಳು ಭೌಗೋಳಿಕವಾಗಿ ಯರಗಟ್ಟಿ ಪಟ್ಟಣಕ್ಕೆ ಸಮೀಪವಾಗಿವೆ ಮತ್ತು ಸಾರಿಗೆ ಸಂಪರ್ಕವು ತುಂಬಾ ಅನೂಕೂಲವಾಗಿದೆ. ಆದ್ದರಿಂದ ಸದರಿ ಗ್ರಾಮಗಳನ್ನು ಯರಗಟ್ಟಿ ತಾಲೂಕಿಗೆ ಸೇರಿಸುವಂತೆ ಆಗ್ರಹಿಸಿದರು.ಈ ವೇಳೆ ಆರ್. ಎಸ್. ಆಲದಕಟ್ಟಿ, ವ್ಹಿ. ಜಿ. ಬಿರಾದಾರ ಪಾಟೀಲ, ಈರಣ್ಣಾ ಹೊಸಮನಿ ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 