ಅವೈಜ್ಞಾನಿಕ ಪ್ರಶ್ನೆಪತ್ರಿಕೆಯ ಮಾದರಿಯನ್ನು ಬದಲಾಯಿಸಲು ಮನವಿ
ಲೋಕದರ್ಶನ ವರದಿ
ಕೊಪ್ಪಳ 16: ಇಂದು ಮಧ್ಯಾಹ್ನ ವಿಜಯನಗರ ಕಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕ್ಕೋತ್ತರ ಕೇಂದ್ರ ಕೊಪ್ಪಳದಿಂದ ಬಳ್ಳಾರಿ ವಿಶ್ವವಿದ್ಯಾಲಯಕ್ಕೆ ಎಐಡಿಎಸ್ಓ ಮತ್ತು ಎಐಡಿವೈಓ ಸಂಘಟನೆಯಿಂದ ಅವೈಜ್ಞಾನಿಕ ಪ್ರಶ್ನೆಪತ್ರಿಕೆಯ ಮಾದರಿಯನ್ನು ಬದಲಾಯಿಸಲು ಕೊರಿ ಮನವಿಯನ್ನು ಸಲ್ಲಿಸಲಾಯಿತು.
ಖ್ಯಾತವಾಗಿರುವ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಅವೈಜ್ಞಾನಿಕ ರೀತಿಯಲ್ಲಿ ಪರೀಕ್ಷೆಯನ್ನು ನಡೆಸುತ್ತಿದೆ. ಸ್ನಾತಕೋತ್ತರ ಪದವಿಯಲ್ಲಿ ಕಲಾವಿಭಾಗದಲ್ಲಿ ಓದುತ್ತಿರುವ ವಿದ್ಯಾಥರ್ಿಗಳಿಗೆ ಮಾಧ್ಯಮ ಕನ್ನಡವಾಗಿದ್ದರೂ ಪ್ರಶ್ನೆಪತ್ರಿಕೆ ಮಾತ್ರ ಇಂಗ್ಲೀಷ ಬಾಷೆಯಲ್ಲಿ ಬರುತ್ತಿದೆ. ಇದರಿಂದ ಪರೀಕ್ಷಾ ಸಮಯದಲ್ಲಿ ವಿದ್ಯಾಥರ್ಿಗಳಿಗೆ ಉತ್ತರ ಗೊತ್ತಿದ್ದರೂ ಪ್ರಶ್ನೆಗಳು ಕೇವಲ ಇಂಗ್ಲೀಷನಲ್ಲಿ ಇರುವುದರಿಂದ ತೊಂದರೆಗಿಡಾಗುತ್ತಿದ್ದಾರೆ. ಬಹುತೇಕ ವಿದ್ಯಾಥರ್ಿಗಳು ಕನ್ನಡ ಮಾಧ್ಯಮ ಓದಿದರಿಂದ ಪ್ರಶ್ನೆ ಪತ್ರಿಕೆಗಳನ್ನು ಕನ್ನಡ ಮತ್ತು ಇಂಗ್ಲೀಷನಲ್ಲಿ ಪ್ರಕಟಿಸಬೇಕಾಗಿ ಎಐಡಿಎಸ್ಓ ಮತ್ತು ಎಐಡಿವೈಓ ಸಂಘಟನೆಯಿಂದ ಮನವಿಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸ್ನಾತಕ್ಕೋತ್ತರಕೇಂದ್ರದ ವಿಶೇಷ ಅಧಿಕಾರಿಗಳಾದ ಮಾನ್ಯ ಡಾ. ಮನೋಜ ಡೋಳ್ಳಿ ಮನವಿ ಪತ್ರವನ್ನು ಸ್ವೀಕರಿಸಿದರು. ವಿದ್ಯಾಥರ್ಿಗಳಾದ ಹನುಮನ ಗೌಡ, ಹನುಮಪ್ಪ, ಆನಂದ ಮಾರಕಟ್ಟಿ, ಮಾಲತೇಶ, ವಿರೇಶ, ಮತ್ತಿತರರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 