ಕಲಕೇರಿ ಗ್ರಾಮಕ್ಕೆ ಬಸ್ ಸೌಕರ್ಯ ಕಲ್ಪಿಸಲು ಗ್ರಾಮಸ್ಥರ ಮನವಿ

ಕಲಕೇರಿ ಗ್ರಾಮಕ್ಕೆ ಬಸ್ ಸೌಕರ್ಯ ಕಲ್ಪಿಸಲು ಗ್ರಾಮಸ್ಥರ ಮನವಿ Request of villagers to provide bus facility to Kalakeri village

 ತಾಳಿಕೋಟಿ 03: ತಾಲೂಕಿನ ಕಲಕೇರಿ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಕಲಕೇರಿಯಿಂದ ಸಿಂದಗಿ ಪಟ್ಟಣಕ್ಕೆ ಹೋಗಲು ಮುಂಜಾನೆ 11:45ರಿಂದ ಮಧ್ಯಾಹ್ನ 2ಘಂಟೆವರೆಗಿನ ಸಮಯದಲ್ಲಿ ಬಸ್ ಸೌಲಭ್ಯ ಇರದೇ ಇರುವುದರಿಂದ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದ್ದು ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಬೇಕೆಂದು ಇಲ್ಲಿಯ ಗ್ರಾಮಸ್ಥರು ಸಿಂದಗಿ ಘಟಕ ವ್ಯವಸ್ಥಾಪಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ಕಲಕೇರಿ ಗ್ರಾಮ ಹೋಬಳಿ ಮಟ್ಟದಲ್ಲಿ ಬೆಳೆದಿರುವುದರಿಂದ ಇಲ್ಲಿಂದ ಸಿಂದಗಿ ತಾಲೂಕ ಕೇಂದ್ರಕ್ಕೆ ತಮ್ಮ ಕೆಲಸ ಕಾರ್ಯಗಳಿಗಾಗಿ ಸಾಕಷ್ಟು ಜನರು ಹೋಗುತ್ತಿರುವುದರಿಂದ ಹೆಚ್ಚಿನ ಬಸ್ ಸೌಲಭ್ಯದ ಅಗತ್ಯವಿದೆ ಆದರೆ ಸಮಯಕ್ಕೆ ಸರಿಯಾಗಿ ಬಸ್ಸುಗಳು ಇಲ್ಲದೆ ಇರುವುದರಿಂದ ಪ್ರಯಾಣಿಕರಿಗೆ ತುಂಬಾ ತೊಂದರೆ ಆಗುತ್ತಿದೆ ಈ ಕುರಿತು ಹಲವಾರು ಬಾರಿ ಘಟಕ ವ್ಯವಸ್ಥಾಪಕರಿಗೆ ಹಾಗೂ ವಿಜಯಪುರ ವಿಭಾಗಿಯ ಕಂಟ್ರೋಲರ್ ಅವರಿಗೆ ಮನವಿ ಮಾಡಿಕೊಂಡರು ಇಲ್ಲಿವರೆಗೆ ಸೂಕ್ತ ಸ್ಪಂದನೆ ಆಗಿಲ್ಲ ಆದ್ದರಿಂದ ಈ ಸಮಸ್ಯೆ ಪರಿಹರಿಸಲು ಮುಂಜಾನೆ 7ಗಂಟೆಯಿಂದ ಸಂಜೆ 8ಘಂಟೆಯವರೆಗೆ ಇಲ್ಲಿಂದ ಮೂರು ಸಿಟಿ ಬಸ್ ಗಳ ವ್ಯವಸ್ಥೆ ಆದರೆ ತುಂಬಾ ಅನುಕೂಲವಾಗುತ್ತದೆ ಎಂದು ಕರಿಕೇರಿ ಗ್ರಾಪಂ ಸದಸ್ಯರಾದ ಸುಧಾಕರ ಅಡಿಕೆ, ಪರಶುರಾಮ ಕುದರ ಕಾರ್, ರೈತ ಸಂಘದ ಅಧ್ಯಕ್ಷ ಶ್ರೀಶೈಲ ವಾಲಿಕಾರ, ರುದ್ರಯ್ಯ ಹಿರೇಮಠ ಭೀಮಣ್ಣ ಚಿಂಚೋಳಿ, ಹಣಮಂತ ಮಾದರ, ಕಲಕೇರಿ ಬೆಕಿನಾಳ ಅಸ್ಕಿ ಹಾಗೂ ಬಿಂಜಲಭಾವಿ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.