ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮನವಿ
ಲೋಕದರ್ಶನ ವರದಿ
ಬ್ಯಾಡಗಿ 15: ರಾಜ್ಯಾದ್ಯಂತ ಪರಿಶಿಷ್ಟ ಪಂಗಡದ ಹೆಸರಿನಲ್ಲಿ ಅನದೀಕೃತವಾಗಿ ಜಾತಿ ಪ್ರಮಾಣ ಪತ್ರಗಳನ್ನು ನೀಡುತ್ತಿರುವುದನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಟ್ಟಣದ ವಾಲ್ಮೀಕಿ ಸಮುದಾಯದ ಜನರು ಮುಖ್ಯ ತಹಶೀಲ್ದಾರ ಮೂಲಕ ಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಮುಖಂಡ ಹೊನ್ನೂರಪ್ಪಕಾಡ ಸಾಲಿ, ಸರಕಾರದ ಸವಲಭ್ಯಗಳನ್ನು
ವಾಗ ಮಾರ್ಗದ ಮೂಲಕ ಪಡೆದುಕೊಳ್ಳುವ ನಿಟ್ಟಿನಲ್ಲಿಅನ್ಯ ವರ್ಗದ ಜನರಿಗೆ ಪರಿಶಿಷ್ಟ ಪಂಗಡದ ಹೆಸರಿನಲ್ಲಿ
ಅನದೀಕೃತವಾಗಿ ಜಾತಿ ಪ್ರಮಾಣ ಪತ್ರಗಳನ್ನು ನೀಡಲಾಗುತ್ತಿರುವ ಅಂಶ ಬೆಳಕಿಗೆ ಬಂದಿದೆ ಇದರಲ್ಲಿ ಅಧಿಕಾರಿಗಳು
ಶಾಮಿಲಾಗಿದ್ದು ಯಾರಿಗೆ ಬೇಕೋ ಅವರಿಗೆ ಎಸ್ಸಿ ನಕಲಿ ಪ್ರಮಾಣ ಪತ್ರ ನೀಡುತ್ತಿದ್ದಾರೆ ಇಂತಹ ಹತ್ತಾರು
ಪ್ರಕರಣಗಳು ರಾಜ್ಯದಲ್ಲಿಇಗಾಗಲೆ ನಡೆದಿದ್ದು ಆದ್ದರಿಂದ ಇದಕ್ಕೆ ಸಹಾಯ ನೀಡಿದವರ ವಿರುದ್ಧ ಕಾನೂನು
ಕ್ರಮ ಜರುಗಿಸುವಂತೆ ಆಗ್ರಹಿಸಿದರು.
ಮೀಸಲಾತಿ ಹೆಚ್ಚಿಸಿ: ನಿವೃತ್ತ ಶಿಕ್ಷಕ ಎಸ್.ಎಸ್.ಯಮನಕ್ಕನವರ
ಮಾತನಾಡಿ, ಹಿಂದುಳಿದ ವರ್ಗವಾದ್ದರಿಂದ ಸಮಾಜದಅಭಿವೃದ್ಧಿಗೆ ರಾಜಕೀಯ ಸ್ಥಾನ ಮಾನಗಳು ಪ್ರಮುಖವಾಗಿ
ಬೇಕಾಗಿದೆ ಇಗಾಗಲೆ ಪರಿಶಿಷ್ಟ ಪಂಗಡಕ್ಕೆ ಶೇ.7.5 ರಷ್ಟು ಮೀಸಲಾತಿಯನ್ನು ನೀಡಿಲಾಗಿದ್ದು ಸ್ವಾಗತಾರ್ಹ,ಅದೇ ರೀತಿಯಲ್ಲಿ ಶೈಕ್ಷಣಿಕ ಹಾಗೂ ಉದ್ಯೋಗ ನೇಮಕಾತಿಯಲ್ಲಿಈಗಿರುವ ಶೇ.3 ನ್ನು 7.5 ಕ್ಕೇರಿಸುವಂತೆ
ಆಗ್ರಹಿಸಿದರು.
ಹೆಚ್ಚಿನ ಸಚಿವ ಸ್ಥಾನ ನೀಡಿ:ಮಂಜುನಾಥ ಕೋಡಿಹಳ್ಳಿ ಮಾತನಾಡಿ,
ಯಾವದೇ ಸರಕಾರಗಳು ಬರಲಿ ಪರಿಶಿಷ್ಟ ವರ್ಗದ ಅಭಿವದ್ಧಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವಂತೆ ಆಗ್ರಹಿಸಿದ
ಅವರು ವಾಲ್ಮೀಕಿ ಸಮುದಾಯದ ಇನ್ನೂ ಮೂವರು ಶಾಸಕರಿಗೆ
ಸಚಿವ ಸ್ಥಾನ ನೀಡುವುದು ಹಾಗೂ ಪರಿಶಿಷ್ಟ ವರ್ಗದ ನೌಕಕರಿಗೆ ಮುಂಬಡ್ತಿ ಮೀಸಲಾತಿ ಶೀಘ್ರವೇ ಜಾರಿಗೆತರುವಂತೆ
ಆಗ್ರಹಿಸಿದರು.ಈ ಸಂದರ್ಭದಲ್ಲಿ ದುಗ್ಗಪ್ಪ, ಕುಮಾರ ಭೋವಿ, ಸೇರಿದಿಂತೆ ಇನ್ನಿತರರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 