ಗಣರಾಜ್ಯೋತ್ಸವದ ಪೂರ್ವಭಾವಿ ಸಭೆ

Republic Day pre-meeting

ಗಣರಾಜ್ಯೋತ್ಸವದ ಪೂರ್ವಭಾವಿ ಸಭೆ 

ಕಂಪ್ಲಿ 10: ಗಣರಾಜ್ಯೋತ್ಸವದ ಅಂಗವಾಗಿ ತಹಶೀಲ್ದಾರ್ ಶಿವರಾಜ ಶಿವಪುರ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಇಲ್ಲಿನ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು. ನಂತರ ತಹಶೀಲ್ದಾರ್ ಶಿವರಾಜ ಶಿವಪುರ ಮಾತನಾಡಿ, ಕಂಪ್ಲಿಯಲ್ಲಿ ಪ್ರತಿ ವರ್ಷದಂತೆ ಈ ಬಾರಿ ಗಣರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ನಿರ್ಧಸಿಸಲಾಯಿತು. ಇಲ್ಲಿನ ಷಾಮಿಯಾಚಂದ್ ಸರ್ಕಾರಿ ಕಾಲೇಜು ಆವರಣದಲ್ಲಿ ಜ.26ರಂದು ಬೆಳಿಗ್ಗೆ 8;30 ಗಂಟೆಗೆ ಗಣರಾಜ್ಯೋತ್ಸವ ಆಚರಿಸಲಾಗುವುದು. ಶಾಸಕ ಜೆ.ಎನ್‌.ಗಣೇಶ್ ಅವರ ಸಮ್ಮುಖದಲ್ಲಿ ಧ್ವಜಾರೋಹಣ ನೆರವೇರಸಲಿದೆ. ಮಾಜಿ ಸೈನಿಕರು ಹಾಗೂ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುವುದು. ಮತ್ತು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ಗಣರಾಜ್ಯೋತ್ಸವದ ಹಿನ್ನಲೆ ಪಟ್ಟಣದಲ್ಲಿ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗುತ್ತದೆ. ಹೀಗೆ ಗಣರಾಜ್ಯೋತ್ಸವವನ್ನು ಹಬ್ಬದ ರೀತಿಯಲ್ಲಿ ಆಚರಿಸಲಾಗುವುದು ಎಂದರು. ಮುಖಂಡ ಡಾ.ಎ.ಸಿ.ದಾನಪ್ಪ ಮಾತನಾಡಿ, ಕಂಪ್ಲಿಯಲ್ಲಿ ಆಚರಿಸುವ ಗಣರಾಜ್ಯೋತ್ಸವ ವೇದಿಕೆಗೆ ಖಾಸಗಿಯವರಿಗೆ ಅವಕಾಶ ಮಾಡಿಕೊಡಬಾರದು. ಮಾಜಿ ಸೈನಿಕರು ಹಾಗೂ ಸಾಧಕರಿಗೆ ಗೌರವ ಸನ್ಮಾನ ಮಾಡಬೇಕು. ಮತ್ತು ಅಚ್ಚುಕಟ್ಟಾಗಿ ಗಣರಾಜ್ಯೋತ್ಸವ ಆಚರಿಸಬೇಕೆಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ತಾಪಂ ಇಒ ಆರ್‌.ಕೆ.ಶ್ರೀಕುಮಾರ, ಮುಖ್ಯಾಧಿಕಾರಿ ಕೆ.ದುರುಗಣ್ಣ, ಶಿರಸ್ತೇದಾರ ರಮೇಶ, ಪುರಸಭೆ ಸದಸ್ಯ ಟಿ.ವಿ.ಸುದರ್ಶನರೆಡ್ಡಿ, ಮುಖಂಡರಾದ ಪಿ.ಬ್ರಹ್ಮಯ್ಯ, ಬಿ.ಸಿದ್ದಪ್ಪ, ಡಾ.ಎ.ಸಿ.ದಾನಪ್ಪ, ಭಾವೈಕ್ಯ ವೆಂಕಟೇಶ, ಬಿ.ದೇವೇಂದ್ರ, ಬೂದಗುಂಪಿ ಅಂಬಣ್ಣ, ಸಿ.ಎ.ಚನ್ನಪ್ಪ, ಬಳ್ಳಾಪುರ ಮೌನೇಶ, ಬಿ.ವಿ.ಗೌಡ, ವಿವಿಧ ಇಲಾಖೆಯ ಸೋಮಶೇಖರ, ಮಲ್ಲಿಕಾರ್ಜುನ, ಎಸ್‌.ಈರೇಶ, ಪ್ರಕಾಶಬಾಬು, ವಿರುಪಾಕ್ಷಗೌಡ ಸೇರಿದಂತೆ ಇತರರು ಇದ್ದರು.