ರೇಣುಕಾಚಾರ್ಯರ ತತ್ವಗಳು ನಮಗೆಲ್ಲರಿಗೂ ದಾರೀದೀಪವಾಗಿವೆ

ರೇಣುಕಾಚಾರ್ಯರ ತತ್ವಗಳು ನಮಗೆಲ್ಲರಿಗೂ ದಾರೀದೀಪವಾಗಿವೆ Renukacharya's principles are a beacon of light for all of us.


ಸವದತ್ತಿ 01 : " ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮದ ಮಹಾನ್ ಶರಣರು ಹಾಗೂ ಗುರುಗಳಲ್ಲಿ ಒಬ್ಬರು. ಅವರ ತತ್ವಗಳು ನಮಗೆಲ್ಲರಿಗೂ ದಾರೀದೀಪವಾಗಿವೆ," ಎಂದು ಅಶ್ವಥ್ ವೈದ್ಯ ಹೇಳಿದರು.ಇಲ್ಲಿನ ತಾಲೂಕು ಆಡಳಿತ ವತಿಯಿಂದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ  ಜಗದ್ಗುರು ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ, ಅವರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.ಜಗದ್ಗುರು ರೇಣುಕಾಚಾರ್ಯರ ತತ್ವಗಳು, ಬದುಕಿನ ಚರಿತ್ರೆ ಮತ್ತು ಧಾರ್ಮಿಕ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿವೆ. ರೇಣುಕಾಚಾರ್ಯರು ಬಾಲ್ಯದಿಂದಲೇ ಭಕ್ತಿಪರಿಪೂರ್ಣರಾಗಿದ್ದರು.

ಋಷಿಮುನಿಗಳ ಸನ್ನಿಧಿಯಲ್ಲಿ ನಿರಂತರ ಜ್ಞಾನ ಸಾಧನೆ ನಡೆಸಿ, ಶೈವ ತತ್ವಗಳನ್ನು ಆಳವಾಗಿ ಅಧ್ಯಯನ ಮಾಡಿದ್ದರು. ಶೈವ ತತ್ವಶಾಸ್ತ್ರವನ್ನು ಜನಸಾಮಾನ್ಯರಿಗೆ ತಲುಪಿಸಲು ಹಾಗೂ ಅದನ್ನು ದೈನಂದಿನ ಜೀವನದ ಭಾಗವನ್ನಾಗಿ ಮಾಡಲು ಅವರು ಶ್ರಮಿಸಿದರು," ಎಂದು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು.ಈ ವೇಳೆ ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ,  ಶ್ರೀ ಮುರಘೇಂದ್ರ ಮಹಾಸ್ವಾಮಿಗಳು, ಮಲ್ಲಿಕಾರ್ಜುನ ಬೀಳಗಿ, ಅಲ್ಲಮಪ್ರಭು ಪ್ರಭನವರ,ಈರಯ್ಯ ಪಾಟೀಲ, ಆನಂದ ಜಾನವೇಕರ,ಸಂಗಮೇಶ ಕಳ್ಳಿಮಠ,ಕುಮಾರ ಸ್ವಾಮಿ ತಲ್ಲೂರಮಠ,ವಿಜಯ ಹಿರೇಮಠ, ಸಮಾಜದ ಮುಖಂಡರು ಭಾಗವಹಿಸಿದ್ದರು.