ಕಂಪಿಲರಾಯ ಗಿರಿಜನ ಪ್ರೌಢಶಾಲೆಯಲ್ಲಿ ಹೆಣ್ಣುಮಕ್ಳಳ ಮೂಲಭೂತ ಸೌಕರ್ಯವಾದ ಶೌಚಾಲಯ ನವೀಕರಣಗೊಳಿಸಿ
Renovation of basic facilities for girls' toilets at Kampilaraya Tribal High School
ಬಳ್ಳಾರಿ 06: ಸರ್ಕಾರಿ ಅನುದಾನಿತ ಕಂಪಿಲರಾಯ ಗಿರಿಜನ ಪ್ರೌಢಶಾಲೆಯಲ್ಲಿ ಹೆಣ್ಣುಮಕ್ಳಳ ಮೂಲಭೂತ ಸೌಕರ್ಯವಾದ ಶೌಚಾಲಯವೇ ಸರಿಯಾಗಿ ಇಲ್ಲ ಮತ್ತು ಶೌಚಾಲಯಗಳಿಗೆ ಬಾಗಿಲುಗಳು ಇಲ್ಲದೇ ಅಟ್ಟೆ ಬಾಕ್ಸ್ಗಳನ್ನು ಬಳಸುವುದು ಮಕ್ಕಳ ಮೂಲಕವೇ ಸಂಸ್ಥೆಯ ಗಮನಕ್ಕೆ ಬಂದಿದ್ದು ಈ ಬಗ್ಗೆ ಸಂಸ್ಥೆ ಪದಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರೀಶೀಲನೆ ನಡೆಸಿ ಯೋಜನೆಯೊಂದನ್ನು ರೂಪಿಸಿದರು. ಅಧಿಕಾರಿಗಳ ಗಮನಕ್ಕೆ ತಂದು ಕೆಲಸಮಾಡಿಸುವುದು ತಡವಾಗಬಹುದೆಂದು ಅರಿತು ಸಂಸ್ಥೆಯ ವತಿಯಿಂದಲೇ ಮೂರೇ ದಿನದಲ್ಲಿ ಎರಡು ಶೌಚಾಲಯಗಳನ್ನು ನವೀಕರಣಗೊಳಿಸಿ ಶಾಲೆಯವರಿಗೆ ಬಳಕೆಗೆ ನೀಡಿದ್ದಾರೆ.
ಈ ಸಂಧರ್ಭದಲ್ಲಿ ಶಾಲೆಯ ಮುಖ್ಯಗುರುಗಳಾದ ಶಿವಕುಮಾರ್ ರವರು ಮಾತಾಡಿ ಶಾಲೆಯ ಸಮಸ್ಯೆಯ ಬಗ್ಗೆ ಅರಿತು ಕೆಲವೇ ದಿನಗಳಲ್ಲಿ ಸುಜ್ಜಿತವಾದ ಶೌಚಾಲಯವನ್ನು ನವೀಕರಣ ಮಾಡಿದ್ದು ನಮಗೆಲ್ಲಾ ಖುಷಿ ತಂದಿದೆ ಹಾಗೂ ಸರ್ಕಾರಗಳು ಮಾಡಬೇಕಾದ ಕೆಲಸವನ್ನು ನಿಮಗಾಗಿ ನಾವು ಸಂಸ್ಥೆಯ ಸದಸ್ಯರು ಆಸಕ್ತಿವಹಿಸಿ ಮಾಡುತ್ತಿರುವುದು ಎಲ್ಲರಿಗೂ ಮಾದರಿ ಎಂದು ತಿಳಿಸಿದರು. ಶಾಲೆಯ ವಿದ್ಯಾರ್ಥಿನಿಯಾದ ಸಿಂಚನ ಮಾತಾನಾಡಿ ಸರಿಯಾದ ಶೌಚಾಲಯವಿಲ್ಲದೇ ತುಂಬಾ ಬೇಜಾರಿನಲ್ಲೇ ನಾವು ಶಾಲೆಗೆ ಬರುತ್ತಿದ್ದೇವು ಈ ಬಗ್ಗೆ ಸಂಸ್ಥೆಯವರಿಗೆ ತಿಳಿಸಿದ ಕೂಡಲೇ ನಮ್ಮ ಸಮಸ್ಯೆಗೆ ಸ್ಪಂದಿಸಿ ಶೌಚಾಲಯವನ್ನು ವ್ಯವಸ್ಥಿತವಾಗಿ ಸಿದ್ಧಗೊಳಿಸಿದ್ದಾರೆ ಇದಕ್ಕೆ ಎಲ್ಲರಿಗೂ ಧನ್ಯವಾದ ಎಂದರು.
ಸಂಸ್ಥೆಯ ಕಾರ್ಯದರ್ಶಿ ಮಾರುತಿ ರವರು ಪ್ರತಿಯೊಂದು ಶಾಲೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಶಿಕ್ಷಣ ಇಲಾಖೆಯ ಮೊದಲ ಆದ್ಯತೆಯಾಗಬೇಕು ಮತ್ತು ಈ ಬಗ್ಗೆ ಕಾಲಕಾಲಕ್ಕೆ ಪರೀಶೀಲನೆ ನಡೆಸಬೇಕು ಎಂದು ತಿಳಿಸಿದರು. ಸಂಸ್ಥೆಯ ಅಧ್ಯಕ್ಷರಾದ ವಿನಯ್ಕುಮಾರ್ ರವರು ಮಾತಾಡಿ ಯಾವುದೇ ಸಮಸ್ಯೆಗಳಿರಲಿ ಅದನ್ನು ಮುಕ್ತವಾಗಿ ಹಿರಿಯರೊಂದಿಗೆ ಹಂಚಿಕೊಳ್ಳಿ, ಹೇಳಿಕೊಂಡರಷ್ಟೇ ಸಮಸ್ಯೆಗಳಿಗೆ ಪರಿಹಾರ. ಹೆಣ್ಣು ಮಕ್ಕಳಿಗೆ ಮೂಲಭೂತ ಸೌಕರ್ಯಗಳು ಒದಗುವಂತೆ ಮಾಡುವುದು ನಾವೆಲ್ಲ ಹೆಣ್ಣುಮಕ್ಕಳಿಗೆ ನೀಡುವ ಬಹುದೊಡ್ಡ ಗೌರವವೆಂದು ತಿಳಿಸಿದರು. ಸಂಸ್ಥೆಯ ಸಹಕಾರ್ಯದರ್ಶಿಯಾದ ನಾಗರಾಜ್ ರವರು ಮಾತಾಡಿ ಮಾಡುವ ಕೆಲಸದ ಉದ್ಧೇಶ ಒಳ್ಳೆಯದಿದ್ದರೆ ಜೊತೆಯಾಗುವ ಮನಸುಗಳು ಹಲವು ಎಂಬುದು ಸಾಭಿತಾಗಿದ್ದು ಕೆಲವ ಹೊಸ ಬಾಗಿಲಗಳನ್ನು ಹಾಕಲೆಂದು ಬಂದು ನಾವು ಸಂಸ್ಥೆಯ ಸದ್ಯಸರ ಸಹಕಾರದಿಂದ ಇಡೀ ಎರಡು ಶೌಚಾಲಯಗಳನ್ನು ನವೀಕರಣಗೊಳಿಸಿದ್ದೇವೆ ಈ ಕೆಲಸಕ್ಕೆ ಜೊತೆಯಾದ ಎಲ್ಲಾರಿಗೂ ಧನ್ಯವಾದ ತಿಳಿಸಿದರು. ಶಾಲೆಯ ಶಿಕ್ಷಕರಾದ ಶ್ರೀ ನಾಗೇಶ್ ಫೈರೋಜಾ ಖಾನಂ ಸಂಸ್ಥೆಯ ಸದಸ್ಯರಾದ ೋಭ, ರಾಜು, ಹರ್ಷ, ಹಸೇನ್, ತಿಪ್ಪೇಶ್, ರಾಜ, ಅನಿಲ್, ಬಾಲು, ದಕ್ಷಿಣಮೂರ್ತಿ, ವೀರೇಶ, ರಾಕೇಶ್, ರಾಜಶೇಖರ್ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 