ಧಾರ್ಮಿಕ ಕಾರ್ಯಗಳಿಂದ ಜನರಿಗೆ ನೆಮ್ಮದಿ ನೀಡಬಲ್ಲದು: ಮಾಜಿ ಶಾಸಕ ದೊಡ್ಡಗೌಡರ

ಧಾರ್ಮಿಕ ಕಾರ್ಯಗಳಿಂದ ಜನರಿಗೆ ನೆಮ್ಮದಿ ನೀಡಬಲ್ಲದು: ಮಾಜಿ ಶಾಸಕ ದೊಡ್ಡಗೌಡರ Religious activities can bring peace to people: Former MLA Dodda Gowda

ಧಾರ್ಮಿಕ ಕಾರ್ಯಗಳಿಂದ ಜನರಿಗೆ ನೆಮ್ಮದಿ ನೀಡಬಲ್ಲದು: ಮಾಜಿ ಶಾಸಕ ದೊಡ್ಡಗೌಡರ 

ನೇಸರಗಿ, 05 ಧಾರ್ಮಿಕ ಕಾರ್ಯಗಳಿಂದ ಜನರಿಗೆ ನೆಮ್ಮದಿ ನೀಡಬಲ್ಲದು ಎಂದು ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು. 

ಸಮೀಪದ ದೇಶನೂರ ಗ್ರಾಮದಲ್ಲಿ ಶುಕ್ರವಾರ ಬನಶಂಕರಿ ದೇವಸ್ಥಾನದ ನೂತನ ಸಭಾಂಗಣ ಉದ್ಘಾಟಿಸಿ ಮಾತನಾಡಿ, ದೇಶನೂರ ಗ್ರಾಮದ ಜನರು ಮೊದಲಿನಿಂದ ದೈವ ಭಕ್ತರಾಗಿದ್ದು, ಇಲ್ಲಿ ಎಲ್ಲ ಜನಾಂಗದ ಜನರಿದ್ದು ಬನಶಂಕರಿ ದೇವಿ ಭಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆಂದರು. 

ಕರ್ನಾಟಕ ರಾಜ್ಯ ದೇವಾಂಗ ಸಮಾಜ ನಿರ್ದೆಶಕ ಗಜಾನನ ಗುಂಜೇರಿ ಮಾತನಾಡಿ, ಸಂತ ಜ್ಞಾನೇಶ್ವರರು, ವಿವೇಕಾನಂದರು ಸಣ್ಣ ವಯಸ್ಸಿನಲ್ಲಿ ಸಾಧನೆ ಮಾಡಿ ವಿಶ್ವಕ್ಕೆ ಮಾದರಿಯಾದರು. ಇಂದಿನ ಯುವಕರು ವಿದೇಶಕ್ಕೆ ತೆರಳಿ ಉದ್ಯೋಗ ಮಾಡುವದಕ್ಕಿಂತ ಭಾರತದಲ್ಲಿಯೆ ಇದ್ದು ಸಾಧನೆ ಮಾಡಬೇಕೆಂದರು. 

ನಿವೃತ್ತ ಶಿಕ್ಷಕ ಎ.ಎಸ್‌.ಗಡದವರ ಮಾತನಾಡಿ, ದೇಶನೂರ ಐತಿಹಾಸಿಕ ನೆಲೆವೀಡಾಗಿದ್ದು, ಬನಶಂಕರಿ ದೇವಸ್ಥಾನಕ್ಕೆ ಅಪಾರ ಭಕ್ತ ಸಮೂಹವಿದ್ದು ನೂತನ ಸಭಾಂಗಣದ ಉದ್ಘಾಟನೆ ಸಂತಸ ಮೂಡಿಸಿದೆ ಎಂದರು. 

   ಕಿತ್ತೂರ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ಮಾತನಾಡಿ, ಸರ್ವ ಜನಾಂಗವಿರುವ ದೇಶನೂರ ಐತಿಹಾಸಿಕ ಮಹತ್ವ ಪಡೆದಿದೆ. ಇಲ್ಲಿಯ ನೇಕಾರರ ಸಮಾಜ ಕಾಯಕಯೋಗಿಗಳಾಗಿದ್ದು ಇವರ ಸಮಾಜದ ಬಂಧುಗಳು ನಿರ್ಮಿಸಿದ ಬನಶಂಕರಿ ದೇವಸ್ಥಾನ ಸಭಾಂಗಣ ಉತ್ತಮ ರೀತಿಯಲ್ಲಿ ನಿರ್ಮಿಸಲಾಗಿದೆ ಎಂದರು. 

ಬನಶಂಕರಿ ದೇವಸ್ಥಾನ ಟ್ಟಸ್ಟ ಕಮೀಟಿ ಅಧ್ಯಕ್ಷ ವೀರಣ್ಣ ಗಡ್ಡಿ ಅಧ್ಯಕ್ಷತೆ ವಹಿಸಿದ್ದರು. ಶಿವಾನಂದ ಪಾಶ್ಚಾಪೂರ, ರಾಜಶೇಖರ ಪಾಶ್ಚಾಪೂರ, ಚಂದ್ರಕಾಂತ ಪಾಶ್ಚಾಪೂರ, ಅನಿಲ ಚಡಿಚಾಳ, ಬಸಲಿಂಗಪ್ಪ ಚಡಿಚಾಳ, ಬಸವರಾಜ ಚಡಿಚಾಳ, ರಮೇಶ ತಿಳಗಂಜಿ, ಬಿ.ಬಿ.ಕೇದಾರಿ, ಶ್ರೀಶೈಲ ಕಮತಗಿ, ಪ್ರಶಾಂತ ಚಡಿಚಾಳ, ಸುರೇಶ ರಂಕಾಳಿ, ಅಶೋಕ ಚಡಿಚಾಳ, ಪ್ರಕಾಶ ಹೊಂಗಲ, ಬಸವಂತ ಚಡಿಚಾಳ, ಶ್ರೀನಿವಾಸ ಚಡಿಚಾಳ ಮೊದಲಾದವರು ಇದ್ದರು.