ಹೆಚ್ಚುವರಿ ಕೆಲಸದಿಂದ ಮುಕ್ತಿ ನೀಡಿ, ಅಂಗನವಾಡಿಯಲ್ಲೇ ಕರ್ತವ್ಯ ನಿರ್ವಹಿಸಲು ಕಾರ್ಯಕರ್ತೆಯರಿಗೆ ಅನುವು ಮಾಡಿಕೊಡಿ
Relieve Anganwadi workers of additional duties and enable them to perform their work within the Ang
ಲೋಕದರ್ಶನ ವರದಿ
ಕಂಪ್ಲಿ 21: ಕೇಂದ್ರ ಮತ್ತು ರಾಜ್ಯ ಸರ್ಕಾರ ಅಂಗನವಾಡಿ ಕಾರ್ಯಕರ್ತರಿಗೆ ಮತ್ತು ಸಹಾಯಕರಿಗೆ ಅನ್ಯಗತ್ಯ ಕೆಲಸ ನೀಡಿ ಅಂಗನವಾಡಿ ಕೇಂದ್ರದ ಗುಣಮಟ್ಟ ಕಡಿಮೆ ಮಾಡಲು ಹೊರಟಿವೆ. ಆದ್ರಿಂದ ಕೂಡಲೇ ಹೆಚ್ಚುವರಿ ಕೆಲಸದಿಂದ ಮುಕ್ತಿ ನೀಡಿ, ಅಂಗನವಾಡಿಯಲ್ಲೇ ಸೇವೆ ಮಾಡಲು ಅನುವು ಮಾಡಿಕೊಡಬೇಕು ಮತ್ತು ಇಲ್ಲಿನ ಕಾರ್ಯಕರ್ತೆಯರ, ಸಹಾಯಕಿಯರ ಬಹು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು)ದ ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮೀ ಹೇಳಿದರು.
ಪಟ್ಟಣದ ಶಿಬಿರದಿನ್ನಿ(ಮಾರುತಿ ನಗರ)ಯ ಪುರಸಭೆ ಸಮುದಾಯ ಭವನದಲ್ಲಿ ಅಂಗನವಾಡಿ ನೌಕರರ ಖಾಯಂಮಾತಿ ಮತ್ತು ಕನಿಷ್ಠ ವೇತನ ವ್ಯಾಪ್ತಿಗೆ ತರುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು)ದ ನೇತೃತ್ವದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಳ್ಳಾರಿ ಜಿಲ್ಲಾ 10ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಹಲವು ವರ್ಷಗಳಿಂದ ಅಂಗನವಾಡಿ ಕೇಂದ್ರದ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಾ ಬಂದಿರುವ ಅಂಗನವಾಡಿ ನೌಕರರನ್ನು ಖಾಯಂಗೊಳಿಸಿ, ಕನಿಷ್ಠ ನೀಡಬೇಕು. ಅನೇಕ ವರ್ಷಗಳಿಂದ ಅಂಗನವಾಡಿ ಕೇಂದ್ರ ಉಳಿವಿಗಾಗಿ ಮತ್ತು ಮಕ್ಕಳ ಪೌಷ್ಠಿಕತೆ ಜೊತೆಗೆ ಶಿಕ್ಷಣ ನೀಡುತ್ತಾ ಬರಲಾಗಿದೆ.
ಆದರೆ, ರಾಜ್ಯ, ಕೇಂದ್ರ ಸರ್ಕಾರ ಅಂಗನವಾಡಿ ಕಾರ್ಯಕರ್ತರನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಕೇಂದ್ರದ ಅನುದಾನ ಹೆಚ್ಚಳವಾಗಿಲ್ಲ. ಮತ್ತು ಮಕ್ಕಳಿಗೆ ಅನುದಾನದ ಕೊರತೆ ಕಾಡುತ್ತಿದೆ. ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಬೇಕು. ಸದೃಢ ಪ್ರಜಾಪ್ರಭುತ್ವ ಕಟ್ಟುವಲ್ಲಿ ಅಂಗನವಾಡಿ ಕೇಂದ್ರಗಳ ಪಾತ್ರ ದೊಡ್ಡದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಮಕ್ಕಳಿಗೆ ನೀಡುತ್ತಿರುವ ಪೌಷ್ಠಿಕ ಆಹಾರ, ಅನುದಾನ ಸಮರ್ಕವಾಗಿ ಒದಗಿಸುತ್ತಿಲ್ಲ. ಆದ್ದರಿಂದ ಡಿಸೆಂಬರ್ 1ರಂದು ದೆಹಲಿ ಚಲೋ ಬೃಹತ್ ಪ್ರತಿಭಟನಾ ಹೋರಾಟಕ್ಕೆ ಸಜ್ಜಾಗಿದ್ದೇವೆ.
ಕೇಂದ್ರದ ನಡೆ ಖಂಡಿಸಿ ಚಳುವಳಿಗೆ ನಾಂದಿಯಾಗುವ ಮೂಲಕ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದು ಎಂದರು. ಇಲ್ಲಿನ ಸಮ್ಮೇಳನದಲ್ಲಿ ಅಂಗನವಾಡಿ ಕಾರ್ಯಕರ್ತರ ಬೇಡಿಕೆಗಳನ್ನು ಆಲಿಸಿ ಮುಂದಿನ ಹೋರಾಟದ ದಿಟ್ಟ ಹೆಜ್ಜೆಯೊಂದಿಗೆ ಬೃಹತ್ ಹೋರಾಟಕ್ಕೆ ಮುನ್ನುಡಿ ಬರೆಯೋಣ ಎಂಬ ಸುದೇಶದ ಜೊತೆಗೆ ಅಂಗನವಾಡಿ ಕೇಂದ್ರದ ಮೂಲಭೂತ ಸಮಸ್ಯೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ಸತ್ಯಬಾಬು, ಜಿಲ್ಲಾಧ್ಯಕ್ಷ ಹೆಚ್.ತಿಪ್ಪಯ್ಯ, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಉಮಾದೇವಿ, ಕಾರ್ಯದರ್ಶಿ ಎ.ಮಲಮ್ಮ, ಹಮಾಲರ ಸಂಘದ ಅಧ್ಯಕ್ಷ ಓಬಳೇಶ, ಫೆಡರೇಶನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ಸ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಸಂತೋಷಕುಮಾರ. ಸಿಐಟಿಯು ಗೌರವಾಧ್ಯಕ್ಷ ಬಂಡಿ ಬಸವರಾಜ,
ಅಂಗನವಾಡಿ ನೌಕರರ ಸಂಘದ ಕಂಪ್ಲಿ ತಾಲೂಕು ಅಧ್ಯಕ್ಷ ಬಿ.ಕೆ.ಉಮಾದೇವಿ, ಕಾರ್ಯದರ್ಶಿ ತಿಪ್ಪಮ್ಮ, ಖಜಾಂಜಿ ಅನುರಾದ, ಶಾಂತ, ಸಹ ಕಾರ್ಯದರ್ಶಿಗಳಾದ ನಾಜೀರಾ, ನಾಗಮ್ಮ ಮುಖಂಡೆ ಜೈರಾಬೀ, ಕಟ್ಟಡ ಕಾರ್ಮಿಕ ಸಂಘಟನೆಯ ಜಿಲ್ಲಾ ಸಂಚಾಲಕ ಎಲ್.ಹೊನ್ನೂರಸಾಬ್, ಮುಖಂಡ, ನಾಗರಾಜ ಸೇರಿದಂತೆ ಅಂಗನವಾಡಿ ಕಾರ್ಯಕರ್ತಯರು. ಸಹಾಯಕರಿಯರು ಉಪಸ್ಥಿತರಿದ್ದರು.
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 