ಕರ್ನಾಟಕ ವಿಶ್ವವಿದ್ಯಾಲಯ, ಕನ್ನಡ ಅಧ್ಯಯನ ಪೀಠದ ಹಸ್ತಪ್ರತಿಗಳನ್ನು ಡಿಜಿಟಲೀಕರಣಕ್ಕೆ ಚಾಲನೆ ನೀಡಿದ ಕುರಿತು

ಕರ್ನಾಟಕ ವಿಶ್ವವಿದ್ಯಾಲಯ, ಕನ್ನಡ ಅಧ್ಯಯನ ಪೀಠದ ಹಸ್ತಪ್ರತಿಗಳನ್ನು ಡಿಜಿಟಲೀಕರಣಕ್ಕೆ ಚಾಲನೆ ನೀಡಿದ ಕುರಿತು

ದಾರವಾಢ 15 :ಕರ್ನಾಟಕ ವಿಶ್ವವಿದ್ಯಾಲಯದ ಡಾ.ಆರ್‌.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಸುಮಾರು 5 ಸಾವಿರ ಹಸ್ತಪ್ರತಿಕಟ್ಟುಗಳ ಸಂಗ್ರಹವಿದ್ದು, ಅವುಗಳ ಸ್ವಚ್ಚತೆ ಮತ್ತು ಡಿಜಲೀಕರಣ ಕಾರ್ಯವನ್ನು ದಿ:12-11-2024 ರಿಂದ ಬೆಂಗಳೂರಿನ ಇ-ಸಾಹಿತ್ಯ ದಾಖಲೀಕರಣ ಕೇಂದ್ರ (ರಿ) ದವರು ಹಮ್ಮಿಕೊಂಡಿದ್ದು, ಅದರ ಉದ್ಘಾಟನೆಯನ್ನು ವಿಶ್ವವಿದ್ಯಾಲಯ ಮಾನ್ಯ ಕುಲಪತಿಗಳಾದ ಡಾ. ಬಿ.ಎಂ. ಪಾಟೀಲ, ಮಾನ್ಯ ಕುಲಸಚಿವರಾದ ಡಾ. ಎ. ಚನ್ನಪ್ಪ ಹಾಗೂ ಮೌಲ್ಯಮಾಪನ ಕುಲಸಚಿವರಾದ ಡಾ. ಎನ್‌.ವೈ. ಮಟ್ಟಿಹಾಳ ಇವರು ನೆರವೇರಿಸಿದರು.ಮಾನ್ಯ ಕುಲಪತಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತ ಹಸ್ತಪ್ರತಿಗಳು ನಮ್ಮ ಪ್ರಾಚೀನ ಇತಿಹಾಸ ಸಂಸ್ಕೃತಿಯ ಪ್ರತೀಕಗಳು: ಅವುಗಳನ್ನು ನಮ್ಮ ಮುಂದಿನ ಜನಾಂಗಕ್ಕೆ ಸುರಕ್ಷಿತವಾಗಿ ಸಾಗಿಸುವುದು ನಮ್ಮ ಕರ್ತವ್ಯ ಎಂದರು. ಕುಲಸಚಿವರು ಮಾತನಾಡುತ್ತ, ಬೆಂಗಳೂರಿನ ಇ-ಸಾಹಿತ್ಯ ದಾಖಲೀಕರಣ ಕೇಂದ್ರದ ನಿರ್ದೇಶಕರಾದ ಇಂಜನೀಯರ್‌ರವರಾದ ಶ್ರೀ ಅಶೋಕ ದೊಮ್ಮಲೂರವರ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದರು. ಮೌಲ್ಯಮಾಪನ ಕುಲಸಚಿವರಾದ ಡಾ. ವೈ.ಎನ್‌. ಮಟ್ಟಿಹಾಳ ಅವರು, ಈ ಕಾರ್ಯದಲ್ಲಿ ನಿಸ್ವಾರ್ಥವಾಗಿ ಭಾಗವಹಿಸುತ್ತಿರುವ ನಿವೃತ್ತ ಪ್ರಾಧ್ಯಾಪಕರು, ಅಧಿಕಾರಿಗಳು ಹಾಗೂ ಹುಬ್ಬಳ್ಳಿ ಧಾರವಾಡ ಬಸವ ಕೇಂದ್ರದ ಭಕ್ತರ ಸೇವೆಯನ್ನು ಕೊಂಡಾಡಿದರು.ಇದೇ ಸಂದರ್ಭದಲ್ಲಿ ಅಧ್ಯಯನ ಪೀಠದ ಅಧ್ಯಕ್ಷರಾದ ಡಾ. ಕೃಷ್ಣ ನಾಯಕ ಅವರು ಮಾತನಾಡುತ್ತ, ಈ ಕಾರ್ಯತುಂಬಾ ಹಿಂದೆಯೇ ನಡೆಯಬೇಕಾಗಿತ್ತು, ಅಶೋಕ ದೊಮ್ಮಲೂರವರ ಸಹಕಾರದಿಂದಾಗಿ ಇಂದು ಪ್ರಾರಂಭಗೊಳ್ಳುತ್ತಿರುವುದು ನಮಗೆಲ್ಲ ಸಂತೋಷ ತಂದಿದೆ, ಎಂದು ಹೇಳಿದರು. ಹಸ್ತಪ್ರತಿ ವಿಭಾಗದ ಮೇಲ್ವಿಚಾರಕರಾದ ಶ್ರೀ ರಾಜಕುಮಾರ ಅವರು ಹಸ್ತಪ್ರತಿಗಳನ್ನು ಗಣ್ಯರಿಗೆ ತೋರಿಸಿದರು. ಇದೇ ಸಂದರ್ಭದಲ್ಲಿ ಗಣ್ಯರು ಪೀಠದ ಜಾನಪದ ವಿಭಾಗಕ್ಕೆ ಭೇಟಿ ನೀಡಿದರು.  ವಿಭಾಗದ ಎಲ್ಲ ಪ್ರಾಧ್ಯಾಪಕ ವರ್ಗದವರು ಹಾಗೂ ಇ-ಸಾಹಿತ್ಯ ಕೇಂದ್ರದ ಸಿಬ್ಬಂದಿವರ್ಗದವರು ಈ ಸಂದರ್ಭದಲ್ಲಿ ಹಾಜರಿದ್ದರು.  ತಮ್ಮ ಪತ್ರಿಕೆಯಲ್ಲಿ ಈ ಮೇಲಿನ ವಿಷಯವನ್ನು ಮತ್ತು ಫೋಟೊಗಳನ್ನು ಪ್ರಕಟಿಸಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.