ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ನೀಡಿ, ಸನ್ಮಾನ
Recognize and honor outstanding teachers in the field of education
ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ನೀಡಿ, ಸನ್ಮಾನ
ಬ್ಯಾಡಗಿ 11: ಸಮಾಜದಲ್ಲಿ ಅತ್ಯುತ್ತಮ ಸೇವಾ ಕ್ಷೇತ್ರವಾದ ಶಿಕ್ಷಣ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಸನ್ಮಾನ ಸುತ್ತಿರುವುದು ಪ್ರಶಂಸ ನಿಯವೆಂದು ರೋಟರಿ ಕ್ಲಬ್ ಮಾಜಿ ಅಸಿಸ್ಟೆಂಟ್ ಗವರ್ನರ್ ಮಂಜುನಾಥ್ ಉಪ್ಪಾರ್ ಹೇಳಿದರು. ಇಂದು ಬ್ಯಾಡಗಿ ಪಟ್ಟಣದ ಎಸ್ ಜೇ ಜೇ ಎಂ ಕಾಲೇಜು ವಿದ್ಯಾರ್ಥಿ ಭವನದಲ್ಲಿ ರೋಟರಿ ಕ್ಲಬ್ ಬ್ಯಾಡಗಿ ವತಿಯಿಂದ ಟೀಚರ್ ಎಕ್ಸಲೆನ್ಸ್ ಅವಾರ್ಡ್ 2025 ಗೌರವ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದವರು.
ರೋಟರಿ ಕ್ಲಬ್ ಬ್ಯಾಡಗಿಯ ಎಕ್ಸಲೆನ್ಸ್ ಟೀಚರ್ ಅವಾರ್ಡ್ 2025 ಪ್ರಶಸ್ತಿ ಭಾಜನರಾದ ಶಿಕ್ಷಕರುಗಳಾದಎಸ್ ಜೆ ಜೆ ಎಂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಾಲತೇಶ ಬಂಡೆಪ್ಪನವರ, ಪ್ರೌಢಶಾಲೆಯ ಈರಣ್ಣ ಅಕ್ಕಿ, ಬಿ ಇ ಎಸ್ ಎಂ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ ಪ್ರಶಾಂತ ಎನ್ ಎಸ್, ಬಿ ಇ ಎಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಉಮೇಶ ಛತ್ರದ, ಎನ್ ಬಿ ಬಿ ಲಯನ್ಸ್ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಬಸನಗೌಡ ಪಾಟೀಲ, ನವಚೈತನ್ಯ ವಿದ್ಯಾಲಯದ ಪ್ರಾಂಶುಪಾಲರಾದ ಶಿವಜ್ಯೋತಿ ಪಿಲ್ಲೈ, ಎಸ್ ಎಸ್ ಪಿ ಎನ್ ಪ್ರೌಢಶಾಲೆಯ ಉಪಪ್ರಾಚಾರ್ಯರು ಸುಭಾಸ ಎಲಿ, ನೆಹರು ನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮಾಲತೇಶ ಗುಡಗುರ ಇವರಿಗೆ ರೋಟರಿ ಕ್ಲಬ್ ಬ್ಯಾಡಗಿಯ ಎಕ್ಸಲೆನ್ಸ್ ಟೀಚರ್ ಅವಾರ್ಡ್ 2025 ಪ್ರಶಸ್ತಿ ನೀಡಿ ಗೌರವ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.
ಶಿವಯೋಗಿ ಶಿವಜ್ಯೋತಿ ಪಿಲ್ಲೈ ಮಾತನಾಡಿ ಸರ್ಕಾರಿ ಶಿಕ್ಷಕರಿಗೆ ಸರ್ಕಾರದಿಂದ ಮತ್ತು ಸರ್ಕಾರೆತರ ಸಂಸ್ಥೆಗಳಿಂದ ಪ್ರಶಸ್ತಿ ಸನ್ಮಾನಗಳು ಸಿಗುತ್ತಿರುತ್ತವೆ ಆದರೆ ಖಾಸಗಿ ಶಾಲೆಗಳ ಶಿಕ್ಷಕರು ಗುರುತಿಸಿಕೊಳ್ಳುವುದು ಬಹಳ ಅಪರೂಪವೆಂದರು. ರೋಟರಿ ಸಂಸ್ಥೆಯವರು ಇಂತಹ ಅದ್ಭುತ ಕಾರ್ಯವನ್ನು ಮಾಡಿದ್ದು ಬಹಳ ಸಂತೋಷ ತಂದಿದೆ. ಬ್ಯಾಡಗಿಯ ಉತ್ತಮ ಶಿಕ್ಷಕರು ಗುರುತಿಸುಕೊಳ್ಳುವಂತಾಗಲಿ ಎಂದು ಬಿಎಸ್‌ಎನ್ ಪದವಿ ಕಾಲೇಜಿನ ಡಾಕ್ಟರ್ ಪ್ರಶಾಂತ್ ಎನ್ ಎಸ್ ಮಾತನಾಡಿದರು. ಮಾಲತೇಶ್ ಅರಳಿಮಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ಅಧ್ಯಕ್ಷ ಅನಿಲಕುಮಾರ ಬೊಡ್ಡಪಾಟಿ, ಕಾರ್ಯದರ್ಶಿ ನಿರಂಜನ ಶೆಟ್ಟಿಹಳ್ಳಿ, ಖಜಾಂಚಿ ಕಲ್ಲಪ್ಪ ಚೂರಿ, ಜಂಟಿ ಕಾರ್ಯದರ್ಶಿ ಕಿರಣ ಮಾಳೇನಹಳ್ಳಿ, ಮಾಜಿ ಅಧ್ಯಕ್ಷ ಮಂಜುನಾಥ ಉಪ್ಪಾರ, ಮಾಲತೇಶ ಅರಳಿಮಟ್ಟಿ, ಪವಾಡಪ್ಪ ಅಚನೂರ, ವಿಶ್ವನಾಥ ಅಂಕಲಕೋಟಿ, ಮಾಲತೇಶ ಕಲ್ಯಾಣಿ, ಸಿದ್ದಲಿಂಗೇಶ ಮಳೇನಹಳ್ಳಿ, ಡಾ. ಏ ಎಮ್ ಸೌದಾಗರ, ಬಸವರಾಜ ಸುಂಕಾಪುರ, ಪ್ರಕಾಶ ಛತ್ರದ, ಶಿವಕುಮಾರ ಕೆರೂಢಿ, ಸಿದ್ದಲಿಂಗೇಶ ಕೊಂಚಿಗೇರಿ ಇನ್ನಿತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 