ಕರ್ನಾಟಕದಲ್ಲಿ ತೃತಿಯರಂಗ ರಚಿಸಲು ಸಿದ್ದತೆ: ಮಾಜಿ ಸಚಿವ ಸಿ.ಎಂ.ಇಬ್ರಾಹಿಮ್
ರಾಯಬಾಗ,20: ಸಮಾನ ಮನಸ್ಕರವುಳ್ಳ ರಾಜ್ಯದ ದಲಿತ, ರೈತರ ಮತ್ತು ಕನ್ನಡಪರ ಸಂಘಟನೆ ಮುಖಂಡರೊಂದಿಗೆ ಚರ್ಚಿಸಿ ಕರ್ನಾಟಕದಲ್ಲಿ ತೃತಿಯರಂಗ ರಚಿಸಲು ಸಿದ್ದತೆ ಮಾಡಿಕೊಂಡಿರುವುದಾಗಿ ಕೇಂದ್ರ ಮಾಜಿ ಸಚಿವ ಸಿ.ಎಂ.ಇಬ್ರಾಹಿಮ್ ಹೇಳಿದರು.
ಭಾನುವಾರ ಪಟ್ಟಣದ ಪಿಡಬ್ಲ್ಯುಡಿ ಇಲಾಖೆ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯ ಸಿಕ್ಕು 70 ವರ್ಷಗಳು ಕಳೆದರು, ಶೇ.50 ಕ್ಕಿಂತ ಹೆಚ್ಚಿನ ಸಂಖ್ಯೆ ಹೊಂದಿದ್ದರೂ ಇನ್ನುವರೆಗೂ ರಾಜ್ಯದಲ್ಲಿ ಒಬ್ಬ ದಲಿತ ಮತ್ತು ಮುಸ್ಲಿಂ ಮುಖಂಡ ಮುಖ್ಯಮಂತ್ರಿಯಾಗಲು ಸಾಧ್ಯವಾಗಿಲ್ಲ ಎಂದು ಖೇದವ್ಯಕ್ತಪಡಿಸಿದರು.
ಸ್ವಾಯತ್ತ ಸ್ವಾಭಿಮಾನಿ ನವ ಕರ್ನಾಟಕ ನಿರ್ಮಾಣಕ್ಕೆ ರಾಜ್ಯಕ್ಕೆ ಒಂದು ಅತ್ಯುತ್ತಮ ಪ್ರಾದೇಶಿಕ ಪಕ್ಷ ಅವಶ್ಯವಿದ್ದು, ದಲಿತ, ರೈತ ಮತ್ತು ಕನ್ನಡ ಪರ ಸಂಘಟನೆಗಳ ಮುಖಂಡರನ್ನು ಒಟ್ಟುಗೂಡಿಸಿಕೊಂಡು ರಾಜ್ಯದ ಹಿತದೃಷಿ ಇಟ್ಟುಕೊಂಡು ಜನತಾ ಪ್ರಣಾಳಿಕೆ ಸಿದ್ದತೆ ಮಾಡಿಕೊಂಡಿದ್ದು ಅದನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ಎಲ್ಲ ಮುಖಂಡರನ್ನು ಕಟ್ಟಿಕೊಂಡು ಒಂದು ರಾಜಕೀಯ ಪಕ್ಷ ಕಟ್ಟುವುದರ ಬಗ್ಗೆ ಚರ್ಚೆ ನಡೆಸುವುದಾಗಿ ತಿಳಿಸಿದರು.
ಜನತಾ ಪ್ರಣಾಳಿಕೆಯನ್ನು ಬೆಂಗಳೂರಿನ ಪ್ರೆಸ್ ಕಾನ್ಫರನ್ಸ್‌ನಲ್ಲಿ ಬಿಡುಗಡೆ ಮಾಡಬೇಕಿತ್ತು, ಆದರೆ ಇಂದು ರಾಯಬಾಗ ಪತ್ರಕರ್ತರ ಮುಂದೆ ಬಿಡುಗಡೆ ಮಾಡುತ್ತಿರುವುದು ನನ್ನ ಸೌಭಾಗ್ಯವೆಂದರು.
ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಹೆಚ್ಚಿನ ತೆರೆಗೆ ಹೊಗುತ್ತಿದ್ದರೂ, ರಾಜ್ಯಕ್ಕೆ ದೊರಕಬೇಕಾದ ಕೇಂದ್ರ ತೆರೆಗೆ ಪಾಲು ಸರಿಯಾಗಿ ದೊರಕುತ್ತಿಲ್ಲ. ಕೇಂದ್ರ ಸರ್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ಆರೋಪಿಸಿದರು. ಕೇಂದ್ರದ ಆರ್ಥಿಕ ಗುಲಾಮಗಿರಿಯಿಂದ ಹೊರಬರಲು ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಅತ್ಯವಶ್ಯಕವಾಗಿದೆ ಎಂದರು.
ಈ ಹಿಂದೆ ರಾಜ್ಯದಲ್ಲಿ ಬಂಗಾರ್ಪನವರು ಮತ್ತು ಯಡಿಯೂರ್ಪನವರ ವ್ಯಕ್ತಿಗತವಾಗಿ ಪಕ್ಷ ಕಟ್ಟಿದ್ದರಿಂದ ಅವರು ಯಶಸ್ವಿಯಾಗಿರುವುದಿಲ್ಲ. ನಾವು ಸೈದ್ದಾಂತಿಕ ನೆಲೆಗಟ್ಟಿನಲ್ಲಿ ಪಕ್ಷ ಕಟ್ಟಲು ಚಿಂತನೆ ನಡೆಸುತ್ತಿರುವುದಾಗಿ ತಿಳಿಸಿದರು. ಜೆಡಿಎಸ್ ಪಕ್ಷದಲ್ಲಿ ನಾನು ಎಲ್ಕಟೇಡ್ ಅಧ್ಯಕ್ಷ ಹೊರತು ಸಿಲ್ಕಟೇಡ್ ಅಧ್ಯಕ್ಷ ಅಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ವಕೀಲರಾದ ತೌಫೀಕ ಮೊಮಿನ, ಯುನುಸ್ ಮುಲ್ಲಾ ಇದ್ದರು.