ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ : ರಾಯಣ್ಣನ ವಿಷಯಕ್ಕೆ ಅಭಿಮಾನಿಗಳ ಬಿಗಿ ಪಟ್ಟು
Rayanna statue installation: Fans' strong support for Rayanna's cause
ಮುಂಡಗೋಡ 18 : ತಾಲೂಕಿನ ಮುಖ್ಯ ರಸ್ತೆ ವಾರ್ಡಗಳಿಗೆ ನಾಮಫಲಕಗಳು ಹಾಗೂ ಮುಖ್ಯ ರಸ್ತೆಯಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಸ್ಥಾಪಿಸುವ ಕುರಿತು ಮಂಗಳವಾರ ತಹಶೀಲ್ದಾರ್ರ ರಿಗೆ, ಲೋಕೋಪಯೋಗಿ ಇಲಾಖೆ ,ಪಟ್ಟಣ ಪಂಚಾಯತ್ ಹಾಗೂ ಅರಣ್ಯ ಇಲಾಖೆ ಗೆ ತಾಲೂಕಾ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ.ಯು ಅಭಿಮಾನಿ ಬಳಗವು ಮನವಿ ಅರ್ಿಸಿದರು ಮನವಿಯಲ್ಲಿ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ರಸ್ತೆಯ ಆಂಜನೇಯ ದೇವಸ್ಥಾನದ ಹತ್ತಿರ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಮಾಡಬೇಕು ಹಾಗೂ ಅದನ್ನು ವೃತ್ತವಾಗಿ ಅಭಿವೃದ್ಧಿಪಡಿಸಬೇಕು. ತಾಲೂಕಿನ ಬಂಕಾಪುರ ರಸ್ತೆಗೆ ಹಳೆಯ ಕಾಲದಿಂದಲೂ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ರಸ್ತೆ ಎಂಬ ಹೆಸರಿದ್ದು.
ಈ ರಸ್ತೆಗೆ ಯಾವುದೇ ನಾಮಪಲಕಗಳಿಲ್ಲ. ಹುಬ್ಬಳ್ಳಿ-ಶಿರಸಿ ರಸ್ತೆಗೆ ಕಿತ್ತೂರು ರಾಣಿ ಚೆನ್ನಮ್ಮ ಎಂಬ ನಾಮಕರಣವು ಹಳೆಯ ಕಾಲದಿಂದಲೂ ಇದ್ದರೂ ಸಹ ಈವರೆಗೂ ಯಾವುದೇ ನಾಮಫಲಕಗಳು ಇಲ್ಲ! ತಾಲೂಕಿನ ಮುಖ್ಯ ರಸ್ತೆಗಳಿಗೆ ನಾಮಫಲಕಗಳನ್ನು ಹಾಕಿಸಿ ಹಾಗೂ ತಾಲೂಕಿನ ಮುಖ್ಯ ರಸ್ತೆಗಳ ಹೆಸರುಗಳು ಕ್ರಾಂತಿಯ ವೀರರ ಹೆಸರುಗಳಿದ್ದರೂ ಸಹ ಮುಖ್ಯ ರಸ್ತೆಗಳಲ್ಲಿ ಕ್ರಾಂತಿಯ ವೀರರ ಪ್ರತಿಮೆಗಳು ಇಲ್ಲದಿರುವುದು ಬೇಸರದ ಸಂಗತಿ.ದಯಮಾಡಿ ಮಾನ್ಯ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಮುಖ್ಯ ರಸ್ತೆಗಳಲ್ಲಿ ಕ್ರಾಂತಿಯ ವೀರರ ಪುತ್ಥಳಿಗಳ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕೆಂದು ವಿನಂತಿಸುತ್ತೇವೆ. ಈ ವೇಳೆಯಲ್ಲಿ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಸಂಸ್ಥಾಪಕ ಅಧ್ಯಕ್ಷರಾದ ಹುಬ್ಬಳ್ಳಿಯ ಸುರೇಶ್ ಗೋಕಾಕ್, ಅಶೋಕ್ ಹಾದಿಮನಿ ಮುಂಡಗೋಡಿನ ಅಯ್ಯಪ್ಪ ಭಜಂತ್ರಿ, ಪ್ರಕಾಶ್ ಹುದ್ಲಮನಿ , ಅರುಣ್ ಭಜಂತ್ರಿ,ಮಂಜುನಾಥ್ ಕುರುಬರ,ಮಾರುತಿ ರಾಮಗೇರಿ,ಮಂಜುನಾಥ್ ಸಾಗರ್ , ನವೀನ್ ಕೊಮರ್ಸಿಕೊಪ್ಪ, ರೇವಣ ಭಜಂತ್ರಿ, ಮಂಜುನಾಥ್ ಕೊಪ್ಪ,ಸಂಕೇತ್ ಗೌಡ್ರು, ಪವನ್ ಬಡಿಗೇರ್ ಹಾಗೂ ಇತರರು ಉಪಸ್ಥಿತರಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 