ರಾಯಣ್ಣ ಅಂದ್ರೆ ವ್ಯಕ್ತಿಯಲ್ಲ, ದೇಶದ ಒಂದು ಶಕ್ತಿ: ಕಾಂಗ್ರೆಸ್ ಮುಖಂಡ ಅಶ್ವಥ್ ವೈದ್ಯ
Rayanna is not an individual, but a force in the country: Congress leader Ashwath Vaidya
ಯರಗಟ್ಟಿ 22: ಸಮೀಪದ ಕೊಟೂರ ಶಿವಾಪೂರ ಗ್ರಾಮದಲ್ಲಿ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆಯನ್ನು ಸವದತ್ತಿ ಶಾಸಕರಾದ ವಿಶ್ವಾಸ ವೈದ್ಯ ರವರ ಸಹೋದರ ಅಶ್ವತ್ ವೈದ್ಯ ರವರು ಉದ್ಘಾಟನೆ ಮಾಡಿ ಮಾತನಾಡಿದರು.ಸಂಗೊಳ್ಳಿ ರಾಯಣ್ಣನ ಮೂರ್ತಿ ನೋಡಿದಾಗ ಅವರ ಪಾತ್ರದಲ್ಲಿ ಮಾಡಿದ ಚಲನಚಿತ್ರ ನೆನಪಿಗೆ ಬಂತು. ನಂದಗಡ ಗ್ರಾಮಕ್ಕೆ ಇಡೀ ಸಂಗೊಳ್ಳಿ ರಾಯಣ್ಣನ ಮಾಡಿದ ಸಾಧನೆ ಬಿತ್ತರಿಸುವ ಅನೇಕ ಯೋಜನೆಗಳನ್ನು ಸರಕಾರ ಹಮ್ಮಿಕೊಂಡಿದೆ. ಮಹಾನ್ ನಾಯಕರನ್ನು ಪೂಜಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಮಹಾನ್ ವ್ಯಕ್ತಿಗಳ ಸೇವೆ ಸಲ್ಲಿಸೋದು ನಮ್ಮ ಪುಣ್ಯ.ಸಂಗೊಳ್ಳಿ ರಾಯಣ್ಣನ ಆದರ್ಶಗಳನ್ನು ಪಾಲಿಸಿ ನಾವು ಜೀವನ ನಡಿಸೋಣ. ದೇಶಾಭಿಮಾನ ಸ್ವಾಭಿಮಾನ ಹಾಗೂ ಸ್ವಾಮಿನಿಷ್ಠೆಯೊಂದಿಗೆ ತಾಯಿ ನಾಡಿಗಾಗಿ ಪ್ರಾಣ ತ್ಯಾಗ ಮಾಡಿದ ವೀರ ಸಂಗೊಳ್ಳಿ ರಾಯಣ್ಣ ಎಲ್ಲರಲ್ಲೂ ದೇಶಪ್ರೇಮ ಬೆಳೆಯಲು ಪ್ರೇರಣೆಯಾಗಿದ್ದಾರೆ.ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣ ಹೋರಾಟ, ಶೌರ್ಯ ಯುವ ಪೀಳಿಗೆಗೂ ಮಾದರಿಯಾಗಬೇಕು ಎಂದರು.
ಶಿವಾಪುರದ ಜಡೆತೇಲೆ ಮರಳುಸಿದ್ಧ ಮಹಾಸ್ವಾಮಿಗಳು ಮಾತನಾಡಿ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣನವರು ನಮಗೆ ಆದರ್ಶರಾಗಬೇಕು. ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ತಮ್ಮ ತಮ್ಮ ಜೀವನವನ್ನು ಸುಧಾರಿಸಿಕೊಳ್ಳಿ ಎಂದರು.ಈ ಸಂದರ್ಭದಲ್ಲಿ ಬೆಮೂಲ್ ನಿರ್ದೇಶಕ ಬೆಳಗಾವಿ ಹಾಗೂ ಯರಗಟ್ಟಿ ತಾಲೂಕಾ ಕುರುಬ ಸಂಘದ ಅಧ್ಯಕ್ಷ ಶಂಕರ ಇಟ್ನಾಳ, ಶಿವಾಪುರ ಗ್ರಾ. ಪ. ಅಧ್ಯಕ್ಷ ತವನಪ್ಪ ಟೋಪಣ್ಣವರ, ಪ್ರಕಾಶ ವಾಲಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಶಿದಬಸನ್ನವರ, ಬಂಗಾರೆಪ್ಪ ಹರಳಿ, ಶಿವಾನಂದ ಕರಿಗೋನ್ನವರ, ಆರ್ ಕೆ ಪಟಾತ್, ಯಲ್ಲಪ್ಪ ನರಿ, ಮಹಾದೇವ ಮುರಗೋಡ, ನಂದಕುಮಾರ ಚಂದರಗಿ, ಶಿವಲಿಂಗಯ್ಯ ಮಠಪತಿ, ಲಕ್ಷ್ಮಣ ಚಂದರಗಿ, ಛಾಯಪ್ಪ ಹುಂಡೇಕಾರ, ಲಕ್ಷ್ಮಣ ಕುಂಟಿರ್ಪಗೊಳ, ಕಡಬಿ ಗ್ರಾ. ಪ. ಅಧ್ಯಕ್ಷ ಪ್ರಕಾಶ ಸುಣದೋಳಿ, ಪರಮೇಶಿ ಚಂದರಗಿ, ಹಾಗೂ ಹಾಲುಮತ ಸಮುದಾಯದ ಹಿರಿಯರು, ಯುವಕರು, ಮತ್ತಿತರರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 