ಮಜದೂರ ಯುನಿಯನ್ ಅಧ್ಯಕ್ಷರಾಗಿ ರವೀಂದ್ರ ಕುರಬರ ಆಯ್ಕೆ
Ravindra Kuraba elected as Mazdoor Union President
ಬಾಗಲಕೋಟೆ ಜಿಲ್ಲೆಯ ರಬಕವಿ- ಬನಹಟ್ಟಿ ತಾಲೂಕಿನ ಸೈದಾಪುರ -ಸಮೀರವಾಡಿಯ ಗೋದಾವರಿ ಬಯೋರಿಫೈನರೀಸ್ ಸಮೀರವಾಡಿ ಮಜದೂರ ಯುನಿಯನ್ ಚುನಾವಣೆ 2025-27 ಎರಡು ವರ್ಷಗಳ ಅವಧಿಗೆ ಪದಾಧಿಕಾರಿಗಳ ಚುನಾವಣೆ ಶುಕ್ರವಾರ ನಡೆಯಿತು. ಕಾರ್ಖಾನೆಯ ಸೆಕ್ಯೂರಿಟಿ ಆಫೀಸ್, ಕಚೇರಿಯಲ್ಲಿ ಮತದಾನ ಪ್ರಕ್ರಿಯೆ ಜರುಗಿತು. ಅದರಲ್ಲಿ ಎಂಟು ಪದಾಧಿಕಾರಿಗಳು ಜಯಶಾಲಿ ಆಗಿದ್ದರು. ಅಧ್ಯಕ್ಷರಾಗಿ ರವೀಂದ್ರ ದತ್ತು ಕುರಬರ, ಕಾರ್ಯಾಧ್ಯಕ್ಷರಾಗಿ ಬಸಪ್ಪ ವೀರ್ಪ ಮೇಲಪ್ಪಗೋಳ, ಉಪಾಧ್ಯಕ್ಷರಾಗಿ ಪಾಂಡು ಕ. ಹಂಚಿನಾಳ, ರಾಜು ಅ. ಹಳಿಂಗಳಿ, ಪ್ರಧಾನ ಕಾರ್ಯದರ್ಶಿಯಾಗಿ ಸಂಗನಗೌಡ ಭೀಮನಗೌಡ ಬಿರಾದಾರಪಾಟೀಲ, ಕಾರ್ಯದರ್ಶಿಯಾಗಿ ಚನ್ನಬಸಪ್ಪ ಮಹದೇವಪ್ಪ ಅಥಣಿ, ಸಹ ಕಾರ್ಯದರ್ಶಿಯಾಗಿ ನಿರುಪಾದಯ್ಯಾ ಈರಬಸಯ್ಯಾ ಕತ್ತಿ, ಕೋಶಾಧಿಕಾರಿಯಾಗಿ ಸಲೀಮಸಾಬ ಹಸನಸಾಬ ಮುಧೋಳ ಆಯ್ಕೆಯಾಗಿದ್ದಾರೆ. ಸಮೀರವಾಡಿ ಯುನಿಯನ್ ಚುನಾವಣಾ ಅಧಿಕಾರಿ ಸುನೀಲ ಅಕ್ಕತಂಗಿಹಾಳ ಫಲಿತಾಂಶ ಘೋಷಿಸಿದರು. ಗೋದಾವರಿ ಬಯೋರಿಫೈನರೀಸ್ ಲಿ., ಸಮೀರವಾಡಿಯಲ್ಲಿ ಎಲ್ಲ ಕಾರ್ಮಿಕರು ಪಟಾಕಿ ಮತ್ತು ಗುಲಾಲ ಮುಖಾಂತರ ವಿಜಯೋತ್ಸವ ಆಚರಿಸಿದರು. ಚುನಾವಣಾ ಪ್ರಕ್ರಿಯೇ ಶಾಂತ ರೀತಿಯಿಂದ ನಡೆಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 