ಸೆ.12 ರಂದು ರವಿ ಪೂಜಾರಿ ನಿರ್ಮಾಪಕತ್ವದ ರತ್ನಾಪುರ ಭಂಡಾರ ನಿಧಿ ಚಿತ್ರ ರಾಜ್ಯಾದ್ಯಂತ ಬಿಡುಗಡೆ

ಸೆ.12 ರಂದು ರವಿ ಪೂಜಾರಿ ನಿರ್ಮಾಪಕತ್ವದ ರತ್ನಾಪುರ ಭಂಡಾರ ನಿಧಿ ಚಿತ್ರ ರಾಜ್ಯಾದ್ಯಂತ ಬಿಡುಗಡೆ  Ratnapura Bhandara Nidhi movie produced by Ravi Pujari will be released across the state on Septemb

ಸೆ.12 ರಂದು ರವಿ ಪೂಜಾರಿ ನಿರ್ಮಾಪಕತ್ವದ ರತ್ನಾಪುರ ಭಂಡಾರ ನಿಧಿ ಚಿತ್ರ ರಾಜ್ಯಾದ್ಯಂತ ಬಿಡುಗಡೆ  

 ಅಥಣಿ 11:  ಅಥಣಿಯ ಉದ್ಯಮಿ ರವಿ ಪೂಜಾರಿ ನಿರ್ಮಾಪಕತ್ವದಲ್ಲಿ ನಿರ್ಮಾಣಗೊಂಡ ರತ್ನಾಪುರ ಭಂಡಾರ ನಿಧಿ ಚಲನ ಚಿತ್ರ ಸೆ.12 ಶುಕ್ರವಾರದಂದು ಅದ್ದೂರಿಯಾಗಿ ರಾಜ್ಯಾದ್ಯಂತ ಹತ್ತಾರು ಥೇಟರ್ ಗಳಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಅಥಣಿ ಪುರಸಭಾ ಸದಸ್ಯ, ಉದ್ಯಮಿ ರಾವರಾಹೇಬ ಐಹೊಳೆ ಹೇಳಿದರು.         ಅವರು ಆರ್‌.ಎಸ್‌.ಪಿ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.  ರವಿ ಪೂಜಾರಿ ಈ ಚಲನ ಚಿತ್ರದ ನಿರ್ಮಾಪಕರಷ್ಟೇ ಅಲ್ಲ ಚಿತ್ರದಲ್ಲಿ ಮುಖ್ಯ ಪಾತ್ರಧಾರಯಲ್ಲಿ ನಟನೆ ಕೂಡ ಮಾಡಿರುವ ಈ ಚಿತ್ರ ಯಶಸ್ವಿಯಾಗಿ ರಾಜ್ಯದ ಜನರ ಮನೆ ಮಾತಾಗಲಿ ಮತ್ತು ಈ ಚಿತ್ರ ಥೇಟರಗಳಲ್ಲಿ ನೂರು ದಿನ ಪ್ರದರ್ಶನಗೊಳ್ಳಲಿ ಎಂದ ಅವರು ಉತ್ತರ ಕರ್ನಾಟದ ಕನ್ನಡ ಪ್ರೇಮಿಯೋರ್ವರು ಧೈರ್ಯ ಮಾಡಿ ನಿರ್ಮಿಸಿದ ಈ ಚಲನ ಚಿತ್ರವನ್ನು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.     

     ಚಿತ್ರ ನಿರ್ಮಾಪಕ, ಉದ್ಯಮಿ ರವಿ ಪೂಜಾರಿ ಮಾತನಾಡಿ, ರತ್ನಾಪುರ ಭಾಂಡಾರ ನಿಧಿ ಎನ್ನುವ ನನ್ನ ಚೊಚ್ಚಲ ಸಿನೇಮಾ ಸೆ.12 ರಂದು ತೆರೆ ಕಾಣಲಿದ್ದು, ಸದ್ಯ ರಾಜ್ಯದ 10 ಥೇಟರಗಳಲ್ಲಿ ಒಂದೇ ದಿನ ತೆರೆ ಕಾಣುವ ಈ ಚಲನ ಚಿತ್ರ ಮುಂದಿನ ಕೆಲವೇ ದಿನಗಳಲ್ಲಿ ನೂರಕ್ಕೂ ಹೆಚ್ಚು ಥೇಟರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳಲಿದೆ ಎಂದ ಅವರು ಈ ಚಲನ ಚಿತ್ರವನ್ನು ಚಿತ್ರ ಕಲಾವಿದ ಹಾಲೇಶ ನಿರ್ದೇಶಿಸಿದ್ದು, ರಾಜ್ಯದ ಜನ ಈ ಚಿತ್ರವನ್ನು ವೀಕ್ಷಿಸುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.         ಗಡಿ ಮತ್ತು ಗ್ರಾಮೀಣ ಭಾಗದ ಒಬ್ಬ ಸಾಮಾನ್ಯನಾದ ನಾನು ಚಲನ ಚಿತ್ರವನ್ನು ನಿರ್ಮಿಸುವ ಸಾಹಸಕ್ಕೆ ಕೈ ಹಾಕಿದ್ದು, ನಿಮ್ಮೆಲ್ಲರ ಸಹಕಾರ, ಅಭಿಮಾನ ನನ್ನ ಜೊತೆಗಿದ್ದರೆ ಈ ಕಾರ್ಯವೂ ಕೂಡ ಯಶಸ್ವಿಯಾಗುವುದು ಇದರಲ್ಲಿ ಯಾವುದೇ ಸಂಶಯ ಬೇಡ ಎಂದ ಅವರು ಜನೇವರಿ ತಿಂಗಳಲ್ಲಿ ಈ ಚಿತ್ರದ ಚಿತ್ರೀಕರಣ ಪ್ರಾರಂಭಗೊಂಡಾಗ ಅನೇಕರು ಟೀಕೆ ಮಾಡಿದ್ದರು ಆದರೆ ಅಂದಿನ ಟೀಕೆಗಳನ್ನು ಸಲಹೆಗಳನ್ನಾಗಿ ಸ್ವೀಕರಿಸಿದ್ದೆ ಎಂದರು.      ಚಿತ್ರ ನಿರ್ದೇಶಕ ಹಾಲೇಶ ಮಾತನಾಡಿ, ರತ್ನಾಪುರ ಭಾಂಡಾರ ನಿಧಿ ಚಿತ್ರ ಬಿಡುಗಡೆಗೂ ಮುನ್ನ ಸೆನ್ಸರ್ ಸರ್ಟಿಫಿಕೇಟ್ ಪಡೆದುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ ನಮ್ಮ ಜೊತೆಗೆ ಚಿತ್ರ ನಿರ್ಮಾಪಕರಾದ ರವಿ ಪೂಜಾರಿ ಇದ್ದರು ಹೀಗಾಗಿ ಯಾವುದೇ ಅಡಚಣೆ ಇಲ್ಲದೆ ನಮಗೆ ಸರ್ಟಿಫಿಕೇಟ್ ದೊರಕಿತು ಎಂದ ಅವರು ಎಲ್ಲರೂ ಚಲನಚಿತ್ರ ನೋಡಿ ನಮ್ಮನ್ನು ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.