ನಾಗರಿಕತೆ ಬೆಳದಂತೆ ವೈಚಾರಿಕತೆ ಬೆಳವಣಿಗೆಯಾಗುತ್ತಿದೆ : ವಿಶ್ವನಾಥ

ನಾಗರಿಕತೆ ಬೆಳದಂತೆ ವೈಚಾರಿಕತೆ ಬೆಳವಣಿಗೆಯಾಗುತ್ತಿದೆ : ವಿಶ್ವನಾಥ Rationality is developing as civilization grows: Vishwanath

         ಶಿಗ್ಗಾವಿ 10:   ನಾವು ಕೇವಲ ವಿದ್ಯಾವಂತರಾದರೆ ಸಾಲದು ದೇಶ, ಭಾಷೆ, ಪರಿಸರ ಹಾಗೂ ಧಾರ್ಮಿಕತೆ ಉಳಿಯುವ ನಿಟ್ಟಿನಲ್ಲಿ ಶ್ರಮಿಸುವ ಗುಣ ಬೆಳೆಸಿಕೊಂಡಾಗ ಮಾತ್ರ ವ್ಯಕ್ತಿಯ ವ್ಯಕ್ತಿತ್ವ ವಿಕಸನ ಸಾದ್ಯವಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷ ವಿಶ್ವನಾಥ ಬಂಡಿವಡ್ಡರ ಹೇಳಿದರು.ಪಟ್ಟಣದ ಸಂಸ್ಕೃತಿ ಪ್ರಾಥಮಿಕ ಶಾಲೆಯಲ್ಲಿಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಎಂಪಿಎಂ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಹನುಮಂತಗೌಡ್ರ ಪಾಟೀಲ ಹಾಗೂ ಗುರುಶಾಂತಪ್ಪ ಲಕ್ಷ್ಮೇಶ್ವರ ಇವರ ಸ್ಮರಣಾರ್ಥ ಹಮ್ಮಿಕೊಂಡ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾಗರಿಕತೆ ಬೆಳದಂತೆ ವೈಚಾರಿಕತೆ ಬೆಳವಣಿಗೆಯಾಗುತ್ತಿದೆ, ಅದು ತಾಲೂಕಾ ಕಸಾಪ ವತಿಯಿಂದ ನಡೆದಿದೆ, ಈ ದತ್ತಿ ಉಪನ್ಯಾಸ ಕಾರ್ಯಕ್ರಮ ಕೇವಲ ನೆಪ ಮಾತ್ರ ಇದರಿಂದ ಸಮಾಜದ ಸ್ವಾಸ್ತ್ಯೆ ಕಾಪಾಡುವ ಬೆಳವಣಿಗೆಯಾಗುತ್ತಿದೆ,

           ಸಮಾಜವನ್ನ ತಿದ್ದುವ ಮೂಲಕ ಸಮಾಜದಲ್ಲಿ ಗೌರವಿಸುವ, ಸ್ಮರಿಸುವ ಗುಣ ಈ ಕ.ಸಾ.ಪ ದಿಂದ ನಡೆದಿದೆ ಎಂದರು. ಶಿಗ್ಗಾವಿ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ವಿನೋದ ಪಾಟೀಲ"ಕನ್ನಡ ನಾಡು- ನುಡಿ ಚಿಂತನೆ" ಕುರಿತು ಉಪನ್ಯಾಸ ನೀಡುತ್ತ ಮಾತನಾಡಿ, ಸಂಪತ್ತನ್ನ ಸಮಾಜಕ್ಕಾಗಿ ವಿನಿಯೋಗಿಸುವವರು ಕಡಿಮೆ, ದತ್ತಿ ಉಪನ್ಯಾಸ ಕಾರ್ಯಕ್ರಮಗಳು ಬಹಳಷ್ಟು ಸ್ಮರಣಾರ್ಹ ಕಾರ್ಯಗಳು, ಸಂತ ಶರಣರ ನಾಡು, ಸರ್ವಧರ್ಮದ ಸಮನ್ವಯದ ಭೂಮಿಯಲ್ಲಿ ನಾವು ಇದ್ದೇವೆ, ಆಡು ಮುಟ್ಟದ ಸೊಪ್ಪಿಲ್ಲ, ಸಾಹಿತ್ಯ ಮುಟ್ಟದ ಕ್ಷೇತ್ರವೇ ಇಲ್ಲ, ಆತ್ಮೀಯತೆಯನ್ನ ಬೆಸೆಯುವಲ್ಲಿ ನಮ್ಮ ಕನ್ನಡ ಭಾಷೆ ಪ್ರಮುಖ ಪಾತ್ರವಹಿಸಿದೆ, ಪಾಶ್ಚಾತ್ಯ ಸಂಸ್ಕೃತಿಯ ಭರಾಟೆಯಲ್ಲಿ ನೆಲ,ಜಲ,ನುಡಿಯನ್ನ ಕಾಪಾಡುವ ಕೆಲಸವನ್ನ ಈ ಸಾಹಿತ್ಯ ಪರಿಷತ್ತು ಮಾಡುತ್ತಿದೆ ಎಂದರು.

            ಶಹರ ಕ.ಸಾ.ಪ ಅದ್ಯಕ್ಷೆ ಲಲಿತಾ ಹಿರೇಮಠ, ಎಂಪಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ದೇವರಾಜ ಸುಣಗಾರ ಮಾತನಾಡಿದರು.ನಿಖಿತಾ ಕಂಕಣವಾಡ ಪ್ರಾಸ್ಥಾವಿಕವಾಗಿ ಮಾತನಾಡಿದರು.ಎಂಪಿಎಂ ಸಂಸ್ಥೆ ಅದ್ಯಕ್ಷ ಮಂಜುನಾಥ ಮೊರಬದ ಅದ್ಯಕ್ಷತೆ ವಹಿಸಿದ್ದರು. ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಸಾನಿದ್ಯವಹಿಸಿ ಆಶೀರ್ವಚನ ನೀಡಿದರು.ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷ ನಾಗಪ್ಪ ಬೆಂತೂರ, ಬಸವರಾಜ ಹೆಸರೂರ, ಸುಶೀಲಕ್ಕ ಪಾಟೀಲ, ಎಂ.ಎಂ. ದೇವಕ್ಕಿಗೌಡ್ರ, ಐಶ್ವರ್ಯ ಲಕ್ಷ್ಮೇಶ್ವರ, ಮುಖ್ಯ ಶಿಕ್ಷಕಿ ಅನಿತಾ ಹಿರೇಮಠ ಸೇರಿದಂತೆ ಶಿಕ್ಷಕರು, ಸಾಹಿತ್ಯಾಭಿಮಾನಿಗಳು ಹಾಗೂ ಮಕ್ಕಳು ಇದ್ದರು.ಶಿಕ್ಷಕಿ ಸ್ವಪ್ನಾ ಪಠ್ಯೆದ ಸ್ವಾಗತಿಸಿದರು, ಶಿಕ್ಷಕಿ ಸವಿತಾ ಗೌರಿಮಠ ಕಾರ್ಯಕ್ರಮ ನಿರ್ವಹಿಸಿದರು.