ರಾಣಿ ಅಬ್ಬಕ್ಕ ಬಗ್ಗೆ ಇತಿಹಾಸದಲ್ಲಿ ಸರಿಯಾದ ಸ್ಥಾನ ದೊರೆಕಿಲ್ಲ: ಡಾ.ಅಜಿತ
Rani Abbakka has not been given a proper place in history: Dr. Ajith
ರಾಣಿ ಅಬ್ಬಕ್ಕ ಬಗ್ಗೆ ಇತಿಹಾಸದಲ್ಲಿ ಸರಿಯಾದ ಸ್ಥಾನ ದೊರೆಕಿಲ್ಲ: ಡಾ.ಅಜಿತ
ಧಾರವಾಡ 27: ನಗರದ ವಿದ್ಯಾಗಿರಿಯ ಜೆ.ಎಸ್.ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಡಾ. ವೀರೇಂದ್ರ ಹೆಗ್ಗಡೆ ಅವರ 78ನೇ ಜನ್ಮ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ರಾಣಿ ಅಬ್ಬಕ್ಕ ಮತ್ತು ರಾಣಿ ಚನ್ನಮ್ಮಳ ಕುರಿತು ಕೊಲ್ಯಾಜ್ ಚಟುವಟಿಕೆಯನ್ನು ನಡೆಸಲಾಯಿತು. ಡಾ. ಅಜಿತ ಪ್ರಸಾದ ಅವರು ಕಾರ್ಯಕ್ರಮ ಉದ್ಘಾಟಿಸಿ ರಾಣಿ ಅಬ್ಬಕ್ಕಳ 500 ನೇ ವರ್ಷದ ಜಯಂತಿ ಆಚರಿಸುತ್ತಿರುವ ವರ್ಷ ಅವಳ ಬಗ್ಗೆ ಇತಿಹಾಸದಲ್ಲಿ ಸರಿಯಾದ ಸ್ಥಾನ ದೊರಕಿಲ್ಲ ಎಂದರು. ಭಾರತದ ನೆಲದಲ್ಲಿ ಪೋರ್ಚುಗಿಸರ ವಿರುದ್ಧ ಹೋರಾಡಿದ ವೀರಮಹಿಳೆಯ ಇತಿಹಾಸದಲ್ಲಿ ಅಜ್ಞಾತವಾಗಿ ಉಳಿದುಕೊಂಡಿದ್ದಾಳೆ.
ಅದೇ ರೀತಿ ಬ್ರಿಟಿಷರ ವಿರುದ್ಧ ವಿಜಯ ಸಾಧಿಸಿ 200 ನೇ ವರ್ಷ ಆಚರಿಸುತ್ತಿರುವ ರಾಣಿ ಚೆನ್ನಮ್ಮಳ ಶೌರ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆಯಾದ ರಾಣಿ ಚೆನ್ನಮ್ಮ ಇತಿಹಾಸದಲ್ಲಿ ಮುಂಜಾನೆ ಚಿಕ್ಕಿ ಎಂದು ಕರೆದಿದ್ದಾರೆ. ಇದರ ಜೊತೆ ಡಾ.ವೀರೇಂದ್ರ ಹೆಗ್ಗಡೆ ಅವರ ಸಾಮಾಜಿಕ ಮತ್ತು ಶೈಕ್ಷಣಿಕ, ಮಹಿಳಾ ಸಬಲೀಕರಣ, ದೇವಾಲಯಗಳ ಜೀರ್ಣೋದ್ಧಾರ, ಪರಂಪರೆಗಳ ಸಂರಕ್ಷಣೆ ಮುಂತಾದ ಕಾರ್ಯಗಳನ್ನು ಕೈಗೊಂಡು ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಡಾ.ಆರ್.ವಿ.ಚಿಟಗುಪ್ಪಿ, ಮುರಳೀಧರ ಹೆಗಡೆ, ವಿದ್ಯಾರ್ಥಿ ಪ್ರತಿನಿಧಿಗಳಾದ ಭಾರ್ಗವಿ ರತ್ನಾಕರ ಮತ್ತು ಕು. ಚಾರುಲತಾ ಉಪಸ್ಥಿತರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 