ರಮೇಶ ಛಾಯಗೋಳ ಕೇಂದ್ರ ಗೃಹ ಮಂತ್ರಿ ದಕ್ಷತಾ ಪದಕ ಪ್ರಶಸ್ತಿಗೆ ಆಯ್ಕೆ
Ramesh Chhayagol selected for Union Home Minister's Dakshata Medal Award
ದೇವರಹಿಪ್ಪರಗಿ 31: ತಾಲೂಕಿನ ಕೋರವಾರ ಗ್ರಾಮದ ಛಾಯಗೋಳ ಕುಟುಂಬದ ದಕ್ಷ ಕಾರ್ಯಕ್ಷಮತೆಗೆ ಹೆಸರುವಾಸಿ ಆಗಿರುವ ಪೊಲೀಸ್ ಇಲಾಖೆಯ ಅಧಿಕಾರಿಗಳಾದ ಸಿಪಿಐ ರಮೇಶ ಛಾಯಗೋಳ ಅವರು ಕೇಂದ್ರ ಗೃಹ ಮಂತ್ರಿ ದಕ್ಷತಾ ಪದಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಸದ್ದುಗುಂಟೆಪಾಳ್ಯ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ಇವರು ತಮ್ಮ ಇಲಾಖೆಯಲ್ಲಿ ಅಪರಾಧ ಪ್ರಕರಣದಲ್ಲಿ ಅತ್ಯುತ್ತಮ ತನಿಖೆ ಮತ್ತು ದೀರ್ಘ ಶಿಕ್ಷೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ ಛಾಯಗೋಳ ಅವರ ಕಾರ್ಯಕ್ಷಮತೆ ಗುರುತಿಸಿ ಕೇಂದ್ರ ಸರ್ಕಾರ ಅವರಿಗೆ ಈ ಪ್ರಶಸ್ತಿ ಘೋಷಿಸಿದೆ. 2007ರಲ್ಲಿ ಪಿಎಸ್‌ಐ ಆಗಿ ಹುಕ್ಕೇರಿಯಲ್ಲಿ ಪೊಲೀಸ್ ಇಲಾಖೆಗೆ ಪಾದರೆ್ಣ ಮಾಡುವ ಮೂಲಕ ಹಾಗೂ ಮತ್ತೆ 2019ರಲ್ಲಿ ಹುಕ್ಕೇರಿಯಲ್ಲಿ ಸಿಪಿಐ ಆಗಿ ಸೇವೆ ಸಲ್ಲಿಸಿದ ಇವರು ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಹಲವಾರು ಪ್ರಕರಣಗಳಿಗೆ ಸಂಬಂಧಿಸಿದ ತನಿಖೆ ಮತ್ತು ಅಪರಾಧ ಪ್ರಕರಣದಲ್ಲಿ ಅತ್ಯುತ್ತಮ ತನಿಖೆಗೆ ಅವರಿಗೆ ಅತ್ತುನ್ನತ ರಾಷ್ಟ್ರಮಟ್ಟದ ಕೇಂದ್ರ ಗ್ರಹ ಮಂತ್ರಿ ದಕ್ಷತಾ ಪದಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ತನಿಖಾ ವಿಭಾಗದಲ್ಲಿ ವಿಶೇಷ ತನಿಖೆ, ಕಾರ್ಯಾಚರಣೆ ಹಾಗೂ ವಿಧಿ ವಿಜ್ಞಾನದಲ್ಲಿ ನಡೆಸಿರುವ ವಿಶೇಷ ಸಾಧನೆಯನ್ನು ಪರಿಗಣಿಸಿ ರಾಷ್ಟ್ರ ಮಟ್ಟದ ಪದಕ ಪ್ರದಾನ ಮಾಡಲು ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಸಹಾಯಕ ಕಾರ್ಯದರ್ಶಿ ಡಿ.ಕೆ ಘೋಷ್ ಬುಧವಾರ ಆದೇಶ ಹೊರಡಿಸಿದ್ದಾರೆ. ಇವರ ಅತ್ಯುತ್ತಮ ಸೇವೆಗೆ ಸಂದ ಪ್ರಶಸ್ತಿ ಎಂದು ಗ್ರಾಮದ ಹಾಗೂ ಜಿಲ್ಲೆಯ ಪ್ರಮುಖರು, ಗಣ್ಯರು ಅಭಿನಂದಿಸಿ ಶುಭ ಹಾರೈಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 