ನಾಳೆ ಗೆಣತಿ ಕಟ್ಟೆ ಗ್ರಾಮದಲ್ಲಿ ರಕ್ತರಾತ್ರಿ ಪೌರಾಣಿಕ ನಾಟಕ

ನಾಳೆ ಗೆಣತಿ ಕಟ್ಟೆ ಗ್ರಾಮದಲ್ಲಿ ರಕ್ತರಾತ್ರಿ ಪೌರಾಣಿಕ ನಾಟಕ Rakta Ratri mythological drama to be staged in Genathi Katte village tomorrow


ಗಂಗಾವತಿ 31: ವಿಜಯನಗರ ಜಿಲ್ಲೆ ಸಂಡೂರು ತಾಲೂಕಿನ ಗೆಣತಿ ಕಟ್ಟೆ ಗ್ರಾಮದ ಸಮಸ್ತ ಗ್ರಾಮಸ್ಥರ ಸಹಕಾರದೊಂದಿಗೆ ಫೆಬ್ರವರಿ 02 ಸೋಮವಾರ ರಾತ್ರಿ 9ಕ್ಕೆ ಕರ್ನಾಟಕದ ಸೇಕ್ಷ್‌ಪಿಯರ್ ಕಂದಗಲ್ಲು ಹನುಮಂತರಾಯರ ರಕ್ತರಾತ್ರಿ ಪೌರಾಣಿಕ ನಾಟಕವನ್ನು ಕೂಡ್ಲಿಗಿತಾ. ಸೂಲದಹಳ್ಳಿಯ ಕಂದಗಲ್ಲು ಹನುಮಂತರಾಯ ಕಲಾ ಸಂಘದನಾಡಿನ ಹೆಸರಾಂತ ಕಲಾವಿದರು ಪ್ರದರ್ಶನ ನೀಡಲಿದ್ದಾರೆ ಎಂದು ಸಂಗೀತ ನಿರ್ದೇಶಕ ತಿಪ್ಪೆಸ್ವಾಮಿ ಸೂಲದಹಳ್ಳಿ ಇವರು ತಿಳಿಸಿದ್ದಾರೆ. 

ನಾಟಕ ಪ್ರದರ್ಶನದಲ್ಲಿ ಕೃಷ್ಣ ಪಾತ್ರದಲ್ಲಿ ಚಿದಾನಂದ ಪ್ಪರಾರಾವಿ, ದುರ್ಯೋಧನ ಪಾತ್ರದಲ್ಲಿ ಟಿ.ನಾಗರಾಜ್ ಹಿರೇಕುಂಬಳಗುಂಟೆ, ತಿಮ್ಮನಗೌಡ ಗೆಣಕಿಹಾಳ (ಅಶ್ವತ್ಥಾಮ), ನಾಗರಾಜ್ ಇಂಗಳಗಿ (ಶಕುನಿ), ಭೀಮಣ್ಣಕಂದಗಲ್ಲು (ಭೀಮ), ಎಂ.ಜಿ.ಶಿವಕುಮಾರ್ ಮಲೆಮಾಚಿಕೆರೆ, ಎಸ್‌.ಹೆಚ್‌.ಸಘಿವುಲ್ಲಾ ಹಿರೇಕುಂಬಳಗುಂಟೆ (ಕರ್ಣ, ಗಂಧರ್ವ), ನಾಗನಗೌಡ ಬೆಣ್ಣೆಹಳ್ಳಿ (ಧರ್ಮರಾಯ), ಪಾರ‌್ವತೀಶ್‌ಕುರುಗೋಡು (ನವಲಿಪಕ್ಕ), ಕನಕಪ್ಪಇಂದರಗಿ (ಶಂಕದತ್ತ), ಬಸವರಾಜ್ ಸ್ವಾಮಿ ಜವಳಗೇರಾ (ಕಲಿ ಹಾಗು ಗಂಧರ್ವ) ಪಾತ್ರ ನಿರ್ವಹಿಸಲಿದ್ದು, ಇನ್ನುಳಿದಂತೆ ನಾಡಿನ ಬಹು ಪ್ರಸಿದ್ಧ ಸ್ತ್ರೀ ಪಾತ್ರಧಾರಿಗಳು ಪಾತ್ರನಿರ್ವಹಿಸಲಿದ್ದು ವಿನಾಯಕ ಡ್ರಾಮ ಸೀನ್ಸ್‌ ಮುಂಡರಗಿ ಇವರ ಭವ್ಯರಂಗ ಸಜ್ಜಿಕೆಯಲ್ಲಿ, ಮುರಳಿ ಚಳ್ಳಿಕೇರೆ ಇವರ ಪ್ರಸಾದನದೊಂದಿಗೆ ಕಲಾವಿದರು ರಂಜಿಸಲಿದ್ದಾರೆ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಅವರುಕೋರಿದ್ದಾರೆ.